voting

ಲೋಕಸಭಾ ಚುನಾವಣೆಯಲ್ಲಿ 64.2 ಕೋಟಿ ಜನರು ಮತದಾನ; ಭಾರತ ವಿಶ್ವದಾಖಲೆ: ರಾಜೀವ್ ಕುಮಾರ್
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 64.2 ಕೋಟಿ ಜನರು ಮತದಾನ ಮಾಡುವುದರೊಂದಿಗೆ ಭಾರತ ವಿಶ್ವ ದಾಖಲೆ ಸೃಷ್ಟಿಸಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.

Lok Sabha election 2024, 6ನೇ ಹಂತ: ಮಧ್ಯಾಹ್ನ 1 ಗಂಟೆಯವರೆಗೆ ಶೇ.39.13ರಷ್ಟು ಮತದಾನ; ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ
ಉತ್ತರ ಪ್ರದೇಶದ 14 ಸ್ಥಾನಗಳು, ಹರ್ಯಾಣದ ಎಲ್ಲಾ 10 ಸ್ಥಾನಗಳು, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಎಂಟು ಸ್ಥಾನಗಳು, ದೆಹಲಿಯ ಎಲ್ಲಾ ಏಳು ಸ್ಥಾನಗಳು, ಒಡಿಶಾದ 6 ಸ್ಥಾನಗಳು, ಜಾರ್ಖಂಡ್‌ನ 4 ಸ್ಥಾನಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಒಂದು ಸ್ಥಾನಕ್ಕೆ ಲೋಕಸಭೆ ಚುನಾವಣೆಯ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಪ್ರಗತಿಯಲ್ಲಿದೆ.

ಬಾರಾಮುಲ್ಲಾ: ಹಲವು ವರ್ಷಗಳ ನಂತರ ನಿರ್ಭೀತಿಯಿಂದ ಮತ ಚಲಾವಣೆ!
ಒಂದು ಕಾಲದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಹಲವು ವರ್ಷಗಳ ಬೆದರಿಕೆ ನಂತರ ಜನರು ಮನೆಯಿಂದ ಹೊರಗೆ ಬಂದು ಸೋಮವಾರ ತಮ್ಮ ಹಕ್ಕು ಚಲಾಯಿಸಿದರು.

ಲೋಕಸಭಾ ಚುನಾವಣೆ 2024: 5ನೇ ಹಂತದ ಮತದಾನ ಪ್ರಗತಿಯಲ್ಲಿ, ಈವರೆಗೂ ಶೇ 47.53 ರಷ್ಟು ಮತದಾನ
2024ರ ಲೋಕಸಭಾ ಚುನಾವಣೆಯ ನಾಲ್ಕು ಹಂತಗಳು ಪೂರ್ಣಗೊಂಡಿದ್ದು, ಸೋಮವಾರ 5ನೇ ಹಂತದಲ್ಲಿ ಒಟ್ಟು 8 ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 7ರಿಂದ ಶುರುವಾಗಿರುವ ಮತದಾನ ಸಂಜೆ 6ರ ವರೆಗೆ ಮುಂದುವರಿಯಲಿದ್ದು, ಈ ವರೆಗೂ ಶೇ. 47.53 ರಷ್ಟು ಮತದಾನವಾಗಿದೆ.

LokSabha Elections 2024: ಮೋದಿಗೆ ಯಾರೂ ಮತ ನೀಡಬೇಡಿ ಎಂದ ಬಿಹಾರ ಸರ್ಕಾರಿ ಶಾಲಾ ಶಿಕ್ಷಕ 'ಜೈಲಿಗೆ'!
ಶಾಲಾ ಕೊಠಡಿಯಲ್ಲೇ ವಿದ್ಯಾರ್ಥಿಗಳಿಗೆ ‘ಮೋದಿಗೆ ಯಾರೂ ಮತ ಹಾಕಬೇಡಿ’ ಎಂದು ಹೇಳಿದ್ದ ಸರ್ಕಾರಿ ಶಾಲಾ ಶಿಕ್ಷಕರೊಬ್ಬರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಉತ್ತರ ಕನ್ನಡ: ದೋಣಿ ಮೂಲಕ ಗಂಗವಳ್ಳಿ ನದಿ ದಾಟಿ ಮತ ಚಲಾಯಿಸಿದ ಜನ!
ಸಂಪರ್ಕ ಸೇತುವೆ ಇಲ್ಲದೆ ಪರದಾಡುತ್ತಿರುವ ಈ ಗ್ರಾಮದ ಜನರು ಸಂಕಷ್ಟಗಳನ್ನು ಬದಿಗೊತ್ತಿ, ದೋಣಿ ಮೂಲಕ ನದಿ ದಾಟಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಲೋಕಸಭಾ ಚುನಾವಣೆ 2024: ಮತದಾನದ ವಿಡಿಯೋ ಪೋಸ್ಟ್ ಮಾಡಿದ ಬಳ್ಳಾರಿ ಕಾರ್ಪೊರೇಟರ್ ವಿರುದ್ಧ ಪ್ರಕರಣ ದಾಖಲು
ಮತಗಟ್ಟೆಯೊಳಗೆ ಅಕ್ರಮವಾಗಿ ಮೊಬೈಲ್ ಕೊಂಡೊಯ್ದು ಮತದಾನ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿದ ಬಳ್ಳಾರಿ ನಗರ ಪಾಲಿಕೆ ಬಿಜೆಪಿ ಸದಸ್ಯನ ವಿರುದ್ಧ ಪ್ರಕರಣ ದಾಖಲಾಗಿದೆ.

3ನೇ ಹಂತದ ಲೋಕಸಭಾ ಚುನಾವಣೆ: ವಯಸ್ಸಿನ ಸಮಸ್ಯೆ, ದೈಹಿಕ ಮಿತಿಗಳನ್ನು ಮೀರಿ ಉತ್ಸಾಹದಿಂದ ಮತದಾನ!
ಲೋಕಸಭಾ ಚುನಾವಣೆ2024 ರ 3 ನೇ ಹಂತದ ಮತದಾನ (ರಾಜ್ಯದಲ್ಲಿ 2 ನೇ ಹಂತ) ಇಂದು ಮುಕ್ತಾಯಗೊಂಡಿದ್ದು ಹಲವು ಮಾದರಿಗಳಿಗೆ ಸಾಕ್ಷಿಯಿತು.

ಇಂದು ರಾಜ್ಯದ 14 ಕ್ಷೇತ್ರಗಳಿಗೆ ಮತದಾನ: ಖರ್ಗೆ, ಯಡಿಯೂರಪ್ಪ ಸೇರಿದಂತೆ ಘಟಾನುಘಟಿಗಳಿಗೆ ಸತ್ವ ಪರೀಕ್ಷೆ!
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕಣವೆಂದೇ ಪರಿಗಣಿಸಲ್ಪಟ್ಟಿರುವ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನಗಳಿವೆ, ಹಾಗೂ ಮಾಜಿ ಸಿಎಂ ಹಾಗೂ ಲಿಂಗಾಯತ ಪ್ರಬಲ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಇಬ್ಬರಿಗೂ ಇದು ಸವಾಲಿನ ಚುನಾವಣೆ ಎಂದೇ ಪರಿಗಣಿಸಲಾಗಿದೆ.

