Vaccine

ವಿಶ್ವದ ಅತಿದೊಡ್ಡ ಕೋವಿಡ್-19 ಲಸಿಕೆ ಅಧ್ಯಯನ: 30,000 ಸ್ವಯಂಸೇವಕರ ಮೂಲಕ ಅಂತಿಮ ಪರೀಕ್ಷೆ
30 ಸಾವಿರ ಯೋಜಿತ ಸ್ವಯಂಸೇವಕರ ನೆರವಿನೊಂದಿಗೆ ಅಮೆರಿಕ ಸರ್ಕಾರದಿಂದ ವಿಶ್ವದ ಅತಿದೊಡ್ಡ ಕೋವಿಡ್ ಲಸಿಕೆ ಅಧ್ಯಯನವು ಸೋಮವಾರದಿಂದ ನಡೆಯುತ್ತಿದೆ. ಇವರಲ್ಲಿ ಅನೇಕ ಮಂದಿ ಅಂತಿಮ ಹಂತದ ಪರೀಕ್ಷೆಗೊಳಪಡುತ್ತಿದ್ದಾರೆ.

ಕೋವಿಡ್-19 ಲಸಿಕೆ: ಕೋವಾಕ್ಸಿನ್ ನ ಮೊದಲ ಹಂತದ ಮಾನವ ಪ್ರಯೋಗದಲ್ಲಿ 'ಪ್ರೋತ್ಸಾಹದಾಯಕ ಫಲಿತಾಂಶ'
ದೇಶದ ಮೊದಲ ಕೋವಿಡ್-19 ಲಸಿಕೆ ಕೋವಾಕ್ಸಿನ್ ನ ಮೊದಲ ಹಂತದ ಮಾನವ ಪ್ರಯೋಗದಲ್ಲಿ 'ಪ್ರೋತ್ಸಾಹದಾಯಕ ಫಲಿತಾಂಶ' ಕಂಡುಬಂದಿದೆ ಎಂದು ಲಸಿಕೆಯ ಪ್ರಯೋಗ ತಂಡದ ಪ್ರಧಾನ ಅನ್ವೇಷಕರು ತಿಳಿಸಿದ್ದಾರೆ.

ಭಾರತದಲ್ಲಿ ಕೋವಿಡ್ ಲಸಿಕೆ 'ಕೋವಾಕ್ಸಿನ್' ಮಾನವ ಪ್ರಯೋಗ ಆರಂಭ: 30 ವರ್ಷದ ಯುವಕನಿಗೆ ಮೊದಲ ಔಷಧ ನೀಡಿಕೆ!
ಕೋವಿಡ್-19 ನಿಯಂತ್ರಣದ ಪ್ರಯತ್ನವಾಗಿ ಸ್ವದೇಶಿ ನಿರ್ಮಿತ 'ಕೋವಾಕ್ಸಿನ್ ' ಔಷಧಿಯನ್ನು 30 ವರ್ಷದ ಯುವಕನೋರ್ವನಿಗೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್ ) ಇಂದು ನೀಡಿದೆ.

ಕೊರೋನಾ ವಿರುದ್ಧ ಮೊದಲು ಲಸಿಕೆ ಕಂಡು ಹಿಡಿದಿದ್ದೇ ಆದರೆ, ಚೀನಾದೊಂದಿಗೆ ಕೆಲಸ ಮಾಡಲು ಅಮೆರಿಕಾ ಸಿದ್ಧ: ಟ್ರಂಪ್
ಕೊರೋನಾ ವೈರಸ್ ವಿರುದ್ಧ ಮೊದಲು ಯಶಸ್ವಿಯಾಗಿ ಲಸಿಕೆ ಕಂಡು ಹಿಡಿದ್ದೇ ಆದರೆ, ಚೀನಾದೊಂದಿಗೆ ಕೆಲಸ ಮಾಡಲು ಅಮೆರಿಕಾ ಸಿದ್ಧವಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ಕೋವಿಡ್ ಲಸಿಕೆ: ಮಾನವ ಪ್ರಯೋಗವನ್ನು ಆರಂಭಿಸಿದ ಭಾರತ!
ಭಾರತ್ ಬಯೋಟಿಕ್ ಕಂಡುಹಿಡಿದಿರುವ ಕೋವಿಡ್-19 ಲಸಿಕೆ 'ಕೋವಾಕ್ಸಿನ್'ನ ಮಾನವ ಪ್ರಯೋಗವನ್ನು ರೊಹ್ಟಕ್ ನ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಇಂದು ಪ್ರಾರಂಭಿಸಲಾಯಿತು ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜಿ ಟ್ವೀಟ್ ಮಾಡಿದ್ದಾರೆ.

ರಷ್ಯಾದಲ್ಲಿ ವಿಶ್ವದ ಮೊದಲ ಕೋವಿಡ್-19 ಲಸಿಕೆಯ ಕ್ಲಿನಿಕಲ್ ಪ್ರಯೋಗ ಯಶಸ್ವಿ!
ಮಾಸ್ಕೋ ವೈದ್ಯಕೀಯ ವಿಶ್ವವಿದ್ಯಾಲಯ ವಿಶ್ವದ ಮೊದಲ ಕೊರೋನಾ ವೈರಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ಪೂರ್ಣಗೊಳಿಸಿದೆ ಎಂದು ಟ್ರಾನ್ಸ್ಲೇಷನಲ್ ಮೆಡಿಸಿನ್ ಅಂಡ್ ಬಯೋ ಟೆಕ್ನಾಲಜಿ ಸಂಸ್ಥೆಯ ನಿರ್ದೇಶಕ ವಾಡಿಮ್ ತಾರಸೊವ್ ತಿಳಿಸಿದ್ದಾರೆ.

ಕೋವಿಡ್-19 ಲಸಿಕೆ ಗುಣಮಟ್ಟದಲ್ಲಿ ರಾಜಿ ಇಲ್ಲ- ಮುಖ್ಯ ವೈಜ್ಞಾನಿಕ ಸಲಹೆಗಾರ ಕೆ. ವಿಜಯ್ ರಾಘವನ್
ಕಠಿಣ ಮೌಲ್ಯಮಾಪನ ಪ್ರಕ್ರಿಯೆ ಮೂಲಕ ದೇಶದ ಕೋವಿಡ್-19 ಲಸಿಕೆಯ ಮಾನವ ಪ್ರಯೋಗ ನಡೆಯುತ್ತಿದ್ದು, ಲಸಿಕೆಯ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಕೇಂದ್ರ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಕೆ. ವಿಜಯ್ ರಾಘವನ್ ಶುಕ್ರವಾರ ಹೇಳಿದ್ದಾರೆ.

ದೇಶದ ಮೊದಲ ಕೋವಿಡ್-19 ಲಸಿಕೆ ಈ ವರ್ಷ ಬಿಡುಗಡೆ ಸಾಧ್ಯತೆ ಇಲ್ಲ- ಸಿಸಿಎಂಬಿ ನಿರ್ದೇಶಕ ರಾಕೇಶ್ ಮಿಶ್ರಾ
ಐಸಿಎಂಆರ್ ಆಗಸ್ಟ್ 15ರಂದು ಬಿಡುಗಡೆ ಮಾಡುವ ಉದ್ದೇಶ ಹೊಂದಿರುವ ದೇಶದ ಮೊದಲ ಕೋವಿಡ್-19 ಲಸಿಕೆ ಬಗ್ಗೆ ಸಾಕಷ್ಟು ಮಾನವ ಪ್ರಯೋಗ ಹಾಗೂ ಮಾಹಿತಿ ಪರೀಕ್ಷೆ ಪ್ರಕ್ರಿಯೆ ನಡೆಯಬೇಕಾಗಿರುವುದರಿಂದ ಈ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇಲ್ಲ ಎಂದು ಸಿಎಸ್ ಐಆರ್-ಸಿಸಿಎಂಬಿ ನಿರ್ದೇಶಕ ರಾಕೇಶ್ ಕೆ ಮಿಶ್ರಾ ಹೇಳಿದ್ದಾರೆ.

ಇನ್ನೆರಡು ವಾರದಲ್ಲಿ ಕೋವಿಡ್-19 ಲಸಿಕೆಯ ಪ್ರಯೋಗದ ಫಲಿತಾಂಶ ಲಭ್ಯ: ವಿಶ್ವ ಆರೋಗ್ಯ ಸಂಸ್ಥೆ
ಇನ್ನೆರಡು ವಾರದಲ್ಲಿ ಮಾರಕ ಕೊರೋನಾ ವೈರಸ್ ಲಸಿಕೆಯ ಮಾನವ ಪ್ರಯೋಗದ ಫಲಿತಾಂಶಗಳು ಲಭ್ಯವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

