UK

ಬ್ರಿಟನ್ ನಲ್ಲಿ ಜಾನುವಾರುಗಳಿಗೆ ಹುಚ್ಚು ಕಾಯಿಲೆ ಹರಡುವ ಭೀತಿ: ಮೊದಲ ಬಲಿ
ಈ ಹಿಂದೆ 1990ರ ಸಮಯದಲ್ಲಿ ಈ ಹುಚ್ಚು ಕಾಯಿಲೆ ದೇಶವನ್ನು ಆಕ್ರಮಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಹತ್ತಾರು ಲಕ್ಷ ಜಾನುವಾರುಗಳನ್ನು ಹತ್ಯೆ ಮಾಡಲಾಗಿತ್ತು.

ಇಂಗ್ಲೆಂಡ್‌ನಲ್ಲಿ ರಿಷಭ್ ಪಂತ್ ಗೆ ಕೋವಿಡ್-19 ಸೋಂಕು: ಎಚ್ಚರಿಕೆ ವಹಿಸುವಂತೆ ಬಿಬಿಸಿಐ ಕಾರ್ಯದರ್ಶಿ ಜಯ್ ಶಾ ಸೂಚನೆ!
ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತೀಯ ತಂಡ ಇಬ್ಬರು ಆಟಗಾರರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದ್ದು, ಈ ಪೈಕಿ ಒಬ್ಬ ಆಟಗಾರನ ಹೆಸರು ಬಹಿರಂಗಗೊಂಡಿದೆ.

ಇಂಗ್ಲೆಂಡ್ ಪ್ರವಾಸದಲ್ಲಿರುವ ಕೊಹ್ಲಿ ಪಡೆಯ ಇಬ್ಬರು ಆಟಗಾರರಿಗೆ ಕೊರೋನಾ ಸೋಂಕು!
ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಮುಕ್ತಾಯದ ಬಳಿಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡಲು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಂಗ್ಲರ ನಾಡಿನಲ್ಲಿ ಉಳಿದುಕೊಂಡಿದ್ದು, ಇದೀಗ ತಂಡದ ಇಬ್ಬರು ಆಟಗಾರರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ತಿಳಿದು ಬಂದಿದೆ.

ನೀರವ್ ಮೋದಿ ಹಸ್ತಾಂತರ ಮನವಿ ಯುಕೆ ಹೈಕೋರ್ಟ್ ನಲ್ಲಿ ತಿರಸ್ಕೃತ; ಮೌಖಿಕ ವಿಚಾರಣೆಗೆ ಮೇಲ್ಮನವಿ ಸಲ್ಲಿಸಲು 5 ದಿನ ಕಾಲಾವಕಾಶ
ಭಾರತಕ್ಕೆ ಬೇಕಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರನ್ನು ನಮ್ಮ ದೇಶಕ್ಕೆ ಹಸ್ತಾಂತರಿಸಲು ಏಪ್ರಿಲ್ ನಲ್ಲಿ ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಇಲ್ಲಿನ ಹೈಕೋರ್ಟ್ ನಲ್ಲಿ ಹಸ್ತಾಂತರದ ಮೇಲ್ಮನವಿಯ ಮೊದಲ ಹಂತದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

ಭಾರತ, ಬ್ರಿಟನ್ ರೂಪಾಂತರಿ ವೈರಾಣುಗಳಿಗೆ ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಭಾರತ್ ಬಯೋಟೆಕ್
ಭಾರತ, ಬ್ರಿಟನ್ ನಲ್ಲಿ ಪತ್ತೆಯಾಗಿರುವ B.1.617 ಹಾಗೂ B.1.1.7 ಕೊರೋನಾ ವೈರಾಣುವಿನ ರೂಪಾಂತರಿ ತಳಿಗಳ ವಿರುದ್ಧ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ.

ಕೋವಿಡ್-19 ವಿರುದ್ಧದ ಹೋರಾಟ: ಭಾರತಕ್ಕೆ ಬ್ರಿಟನ್ ನೆರವಿನ ಹಸ್ತ, ಆಕ್ಸಿಜನ್; ವೆಂಟಿಲೇಟರ್ ಗಳ ರವಾನೆ
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬ್ರಿಟನ್ ನೆರವಿಹ ಹಸ್ತ ಚಾಚಿದ್ದು, ಆಕ್ಸಿಜನ್ ಕಾನ್ಸಂಟ್ರೇಟರ್ ಗಳು ಹಾಗೂ ವೆಂಟಿಲೇಟರ್ ಗಳನ್ನು ರವಾನೆ ಮಾಡುತ್ತಿರುವುದಾಗಿ ತಿಳಿಸಿದೆ.

ಕೋವಿಡ್-19 ಉಲ್ಬಣ: ಭಾರತವನ್ನು 'ಕೆಂಪು ಪಟ್ಟಿ'ಗೆ ಸೇರಿಸಿದ ಬ್ರಿಟನ್; ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ!
ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಬ್ರಿಟನ್ ಸರ್ಕಾರ ಭಾರತವನ್ನು ಕೆಂಪುಪಟ್ಟಿಗೆ ಸೇರಿಸಿದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆ ಬ್ರಿಟನ್ ಗೆ ವಿಮಾನ ಯಾನ ಸೇವೆ ಸ್ಥಗಿತಗೊಳಿಸಿದೆ.

ಕೋವಿಡ್-19: ಅಮೆರಿಕಾ, ಜರ್ಮನಿ, ಬ್ರಿಟನ್ ಸೇರಿ ಭಾರತದ ರೂಪಾಂತರಿ ವೈರಾಣು ಪತ್ತೆ
ಎರಡು ಬಾರಿ ರೂಪಾಂತರಗೊಂಡಿರುವ ಭಾರತದ ಕೊರೋನಾ ವೈರಾಣು ಅಮೆರಿಕ, ಜರ್ಮನಿ, ಬ್ರಿಟನ್, ಆಸ್ಟ್ರೇಲಿಯಾ, ಸಿಂಗಾಪೂರ್ ಗಳಲ್ಲಿ ಪತ್ತೆಯಾಗಿದೆ.

ಲಾಕ್ ಡೌನ್, ಲಸಿಕೆ ಮಂತ್ರ: ಬ್ರಿಟನ್ ನಲ್ಲಿ ಕೋವಿಡ್-19 ಪ್ರಕರಣಗಳ ಪ್ರಮಾಣ ಶೇ.60ರಷ್ಟು ಇಳಿಕೆ!
ಕಳೆದ ವರ್ಷ ಕೊರೋನಾ ಕಾಟದಿಂದ ನಲುಗಿದ್ದ ಬ್ರಿಟನ್ ಚೇತರಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬ ಪರಿಸ್ಥಿತಿಗೆ ತಲುಪಿತ್ತು. ಆದರೆ ಈಗ ಲಾಕ್ ಡೌನ್ ಹಾಗೂ ಲಸಿಕೆಯಿಂದಾಗಿ ಬ್ರಿಟನ್ ನಲ್ಲಿ ಕೋವಿಡ್-19 ಪ್ರಕರಣಗಳು ಶೇ.60ರಷ್ಟು ಕುಸಿದಿದೆ.

