UK

ಕೋವಿಡ್-19: ದೇಶದಲ್ಲಿ ಮತ್ತೆ 5 ಮಂದಿಯಲ್ಲಿ ರೂಪಾಂತರಿ ಕೊರೋನಾ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆ
ಬ್ರಿಟನ್ ನಿಂದ ಭಾರತಕ್ಕೆ ಬಂದ ಪ್ರಯಾಣಿಕರ ಪೈಕಿ ಮತ್ತೆ 5 ಮಂದಿಯಲ್ಲಿ ಗುರುವಾರ ರೂಪಾಂತರಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ಬ್ರಿಟನ್ ನ ವೇಗವಾಗಿ ಹರಡುವ ವೈರಸ್ ಸೋಂಕು ತಗುಲಿದವರ ಸಂಖ್ಯೆ ಭಾರತದಲ್ಲಿ 25ಕ್ಕೆ ಏರಿಕೆಯಾಗಿದೆ.

ಅಪಾರ್ಟ್'ಮೆಂಟ್'ಗಳನ್ನು ಸೀಲ್ಡೌನ್ ಮಾಡುವುದಿಲ್ಲ: ಬಿಬಿಎಂಪಿ ಸ್ಪಷ್ಟನೆ
ಬೊಮ್ಮನಹಳ್ಲಿ ಅಪಾರ್ಟ್'ಮೆಂಟ್ ಕಾಂಪ್ಲೆಕ್ಸ್ ವೊಂದನ್ನು ಸೀಲ್ಡೌನ್ ಮಾಡಿದ ಹಿನ್ನೆಲೆಯಲ್ಲಿ ಸುತ್ತಮುತ್ತಲಿರುವ ಇತರೆ ಅಪಾರ್ಟ್'ಮೆಂಟ್ ಗಳ ನಿವಾಸಿಗಳು ಆತಂಕಕ್ಕೊಳಗಾಗಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಬಿಎಂಪಿ ಅಪಾರ್ಟ್'ಮೆಂಟ್ ಗಳನ್ನು ಸೀಲ್ಡೌನ್ ಮಾಡುವುದಿಲ್ಲ ಎಂದು ಹೇಳಿದೆ.

ಉತ್ತರ ಪ್ರದೇಶದಲ್ಲಿ 2 ವರ್ಷದ ಮಗು, ಪೋಷಕರಲ್ಲಿ ರೂಪಾಂತರಿ ಕೊರೋನಾ ವೈರಸ್ ಸೋಂಕು ಪತ್ತೆ!
ಭಾರತದಲ್ಲಿ ಮಾಹಾಮಾರಿ ಕೊರೋನಾ ವೈರಸ್ 2ನೇ ಅಲೆ ನಿಧಾನಗತಿಯಲ್ಲಿ ಆರಂಭವಾಗುತ್ತಿರುವ ಎಲ್ಲಾ ಬೆಳವಣಿಗೆಗಳು ಕಂಡು ಬರುತ್ತಿವೆ. ಭಾರತದಲ್ಲಿ ರೂಪಾಂತರಿ ಕೊರೋನಾ ವೈರಸ್ ಕಾಟ ಶುರುವಾಗಿದ್ದು, ಈಗಾಗಲೇ 20 ಮಂದಿಯಲ್ಲಿ ಈ ರೂಪಾಂತರಿ ಕೊರೋನಾ ಸೋಂಕು ಪತ್ತೆಯಾಗಿದೆ.

ರಾಜ್ಯಕ್ಕೂ ಕಾಲಿಟ್ಟ ಹೈಸ್ಪೀಡ್ ವೈರಸ್: ಬೆಂಗಳೂರಿಗೆ ಬಂದ ಮೂವರಲ್ಲಿ ರೂಪಾಂತರಿ ಕೊರೋನಾ, ಹೆಚ್ಚಿದ ಆತಂಕ
ಚೀನಾದಿಂದ ದೇಶಕ್ಕೆ ಒಕ್ಕರಿಸಿದ್ದ ಕೊರೋನಾ ಆರ್ಭಟ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ನಿಟ್ಟಿಸಿರು ಬಿಡುತ್ತಿರುವ ಈ ಹಂತದಲ್ಲಿಯೇ ಬ್ರಿಟನ್ ರೂಪಾಂತರಿ ಕೊರೋನಾ ಎಲ್ಲೆಡೆ ಆತಂಕವನ್ನು ಸೃಷ್ಟಿಮಾಡಿದೆ.

ಹೆಚ್ಚುತ್ತಿರುವ ರೂಪಾಂತರಿ ಕೊರೋನಾ ಸೋಂಕು: ಬ್ರಿಟನ್-ಭಾರತ ವಿಮಾನಗಳಿಗೆ ಜ.7 ವರೆಗೆ ನಿರ್ಬಂಧ ವಿಸ್ತರಣೆ
ರೂಪಾಂತರಿ ಕೊರೋನಾ ಸೋಂಕು ಪ್ರಕರಣಗಳು ಡಿ.30 ರಂದು 20ಕ್ಕೆ ಏರಿಕೆಯಾಗಿದ್ದು, ಜ.7 ರವರೆಗೆ ಬ್ರಿಟನ್-ಭಾರತ ನಡುವಿನ ವಿಮಾನಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಬ್ರಿಟನ್ ವಿಮಾನಗಳಿಗೆ ನಿರ್ಬಂಧ ಮುಂದುವರೆಸುವ ಸಾಧ್ಯತೆ ಇದೆ: ಕೇಂದ್ರ ಸಚಿವ
ಭಾರತ-ಬ್ರಿಟನ್ ನಡುವಿನ ಪ್ರಯಾಣಿಕ ವಿಮಾನಗಳಿಗೆ ವಿಧಿಸಲಾಗಿರುವ ನಿರ್ಬಂಧವನ್ನು ಮುಂದುವರೆಸುವ ಸುಳಿವನ್ನು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ನೀಡಿದ್ದಾರೆ.

ದಕ್ಷಿಣ ಕೊರಿಯಾದಲ್ಲೂ ಕೋವಿಡ್ ಹೊಸ ರೂಪಾಂತರದ ಪ್ರಕರಣ ವರದಿ
ದಕ್ಷಿಣ ಕೊರಿಯಾ ದೇಶದಲ್ಲಿ ಹೊಸ ಸ್ವರೂಪದ ಕೊರೋನ ಸೋಂಕಿನ ಮೂರು ಪ್ರಕರಣ ದೃ ಡಪಟ್ಟಿದೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ (ಕೆಡಿಸಿಎ) ತಿಳಿಸಿದೆ.

ಕೊರೋನಾ ವೈರಸ್ ರೂಪಾಂತರಿ: ಇಂಗ್ಲೆಂಡ್ ನಿಂದ ವಂದೇ ಭಾರತ್ ವಿಮಾನ ಸಂಚಾರ ತಾತ್ಕಾಲಿಕ ರದ್ದು
ಬ್ರಿಟನ್ ನಲ್ಲಿ ಹೊಸ ಸ್ವರೂಪದ ಕೊರೊನಾ ಸೋಂಕು ಕಾಣಿಸಿಕೊಂಡ ಆತಂಕದ ಹಿನ್ನೆಲೆಯಲ್ಲಿ ಭಾರತ ಇಂಗ್ಲೆಂಡ್ ನಿಂದ ವಂದೇ ಭಾರತ್ ವಿಮಾನಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಸ್ಪಷ್ಟಪಡಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಮತ್ತೊಂದು ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆ!
ಬ್ರಿಟನ್ ನಲ್ಲಿ ಹೊಸ ಮಾದರಿಯ ಕೊರೋನಾ ವೈರಾಣು ಪತ್ತೆಯಾಗಿರುವ ಬೆನ್ನಲ್ಲೇ ಈಗ ದಕ್ಷಿಣ ಆಫ್ರಿಕಾದಲ್ಲಿ ಹೊಸ ಮಾದರಿಯ ಕೋವಿಡ್-19 ವೈರಾಣುವಿನ 2 ಪ್ರಕರಣಗಳು ಪತ್ತೆಯಾಗಿದೆ.

