ದಕ್ಷಿಣ ಕೊರಿಯಾದಲ್ಲೂ ಕೋವಿಡ್ ಹೊಸ ರೂಪಾಂತರದ ಪ್ರಕರಣ ವರದಿ
ದಕ್ಷಿಣ ಕೊರಿಯಾ ದೇಶದಲ್ಲಿ ಹೊಸ ಸ್ವರೂಪದ ಕೊರೋನ ಸೋಂಕಿನ ಮೂರು ಪ್ರಕರಣ ದೃ ಡಪಟ್ಟಿದೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ (ಕೆಡಿಸಿಎ) ತಿಳಿಸಿದೆ.

ಸಿಯೋಲ್: ದಕ್ಷಿಣ ಕೊರಿಯಾ ದೇಶದಲ್ಲಿ ಹೊಸ ಸ್ವರೂಪದ ಕೊರೋನ ಸೋಂಕಿನ ಮೂರು ಪ್ರಕರಣ ದೃಢಪಟ್ಟಿದೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ (ಕೆಡಿಸಿಎ) ತಿಳಿಸಿದೆ.
ಮೂವರು ಇದೇ 22 ರಂದು ಯುನೈಟೆಡ್ ಕಿಂಗ್‌ಡಂನಿಂದ ಆಗಮಿಸಿದ್ದಾರೆ ಎಂದು ಕೆಡಿಸಿಎ ತಿಳಿಸಿದೆ. ಅವರು ಲಂಡನ್ನಲ್ಲಿ ವಾಸಿಸುವ ಕುಟುಂಬವಾಗಿ ದೇಶಕ್ಕೆ ಬಂದರು ಮತ್ತು ಪರೀಕ್ಷೆಗಳು ಹೊಸ ಮಾದರಿ ಸೋಂಕು ಇರುವಿಕೆಯನ್ನು ಖಚಿತಪಡಿಸಿದೆ. ಅವರೆಲ್ಲರೂ ಈಗ ಸಂಪರ್ಕತಡೆಯಲ್ಲಿದ್ದಾರೆ ಎಂದು ಕೆಡಿಸಿಎ ತಿಳಿಸಿದೆ.
ಕೊರೋನಾ ವೈರಸ್ ಹೊಸ ರೂಪಾಂತರ ಮೂಲಕ ಕಾಣಿಸಿಕೊಳ್ಳುತ್ತಿದ್ದು, ಇದು ಸೂಪರ್ ಸ್ಪ್ರೇಡರ್ ಆಗಿದೆ. ಸೆಪ್ಟೆಂಬರ್ನಲ್ಲಿ ಮೊದಲ ಬಾರಿಗೆ ಈ ಹೊಸ ಸ್ವರೂಪದ ಕೊರೋನಾ ವೈರಸ್ ಮೊದಲ ಬಾರಿ ಪತ್ತೆಯಾಗಿತ್ತು. ಇದು ಶೀಘ್ರವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಯುನೈಡೆಡ್ ಕಿಂಗ್ಡಮ್ನ ಲಂಡನ್ ಮತ್ತಿತ್ತರ ಭಾಗಗಳಲ್ಲಿ ಕಂಡು ಬರುತ್ತಿದೆ. ಈ ಹೊಸ ವೈರಸ್ನಿಂದ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಹೊಸ ವರ್ಷದ ಸಂಭ್ರಮಾಚರಣೆ ಮೇಲೂ ಕರಿನೆರಳು ಬೀರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


