Traffic Police

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರಿಗೆ ಶಾಕ್: ನಗರದ 50 ಜಂಕ್ಷನ್ ಗಳಲ್ಲಿ ಅತ್ಯಾಧುನಿಕ ಕ್ಯಾಮೆರಾ ಫಿಕ್ಸ್; ನಿಯಮ ಉಲ್ಲಂಘಿಸಿದ ಕೂಡ್ಲೆ ಬರುತ್ತೆ ಫೈನ್ ಸ್ಲಿಪ್!
ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ನಿಯಮ ಉಲ್ಲಂಘನೆಗಳನ್ನು ನಿಯಂತ್ರಿಸಲು ನಗರ ಸಂಚಾರಿ ಪೊಲೀಸರು ಪ್ರಮುಖ 50 ಜಂಕ್ಷನ್ಗಳಲ್ಲಿ ಅತ್ಯಾಧುನಿ ಕ್ಯಾಮೆರಾಗಳನ್ನು ಅಳವಡಿಸಲಿದ್ದಾರೆ.

ಕೆ.ಆರ್. ಮಾರುಕಟ್ಟೆ ಫ್ಲೈಓವರ್ ಮೇಲೆದ್ದು ಬಂದ ನಟ್, ಬೋಲ್ಟ್! ವಾಹನ ಸಂಚಾರಕ್ಕೆ ಅಡ್ಡಿ, ಚಾಲಕರ ಪರದಾಟ
ನಗರದ ಹೃದಯ ಭಾಗ ಕೆ.ಆರ್. ಮಾರುಕಟ್ಟೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಬಾಲಗಂಗಾಧರನಾಥ ಸ್ವಾಮಿ ಫ್ಲೈ ಓವರ್ ನಲ್ಲಿ ನಟ್, ಬೋಲ್ಟ್ ಮೇಲೆ ಬಂದು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಹೆಲ್ಮೆಟ್ ಧರಿಸದಿದ್ದಕ್ಕೆ ದಂಡ: ಸಾಕ್ಷ್ಯ ಕೇಳಿದ ವ್ಯಕ್ತಿಗೆ ಫೋಟೋ ಸಹಿತ ಉತ್ತರ ನೀಡಿದ ಬೆಂಗಳೂರು ಟ್ರಾಫಿಕ್ ಪೊಲೀಸ್!
ಹೆಲ್ಮೆಟ್ ಧರಿಸದಿದ್ದಕ್ಕೆ ದಂಡ ಹಾಕಿದ್ದ ಪೊಲೀಸರಿಗೆ ಸಾಕ್ಷ್ಯ ಕೇಳಿದ ವ್ಯಕ್ತಿಗೆ ಫೋಟೋ ಸಹಿತ ಟ್ರಾಫಿಕ್ ಪೊಲೀಸರು ಖಡಕ್ ಉತ್ತರ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ದಂಡ ಬಾಕಿ ಉಳಿಸಿಕೊಂಡಿರುವ ವಾಹನಗಳನ್ನು ಟ್ರ್ಯಾಕ್ ಮಾಡಲು ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ತಂತ್ರಜ್ಞಾನದ ಮೊರೆ!
ಈ ನೂತನ ತಾಂತ್ರಿಕ ವ್ಯವಸ್ಥೆ ರಸ್ತೆ ಮೇಲೆ ಸಾಗುತ್ತಿರುವ ವಾಹನದ ನಂಬರ್ ಪ್ಲೇಟನ್ನು ಗಮನಿಸಿ, ಆ ನಂಬರಿನಲ್ಲಿ ದಂಡ ಶುಲ್ಕ ಬಾಕಿ ಇರುವ ಬಗ್ಗೆ ಜಾಲಾಡುತ್ತದೆ.

ಅಮೆರಿಕದ ಪೋಸ್ಟಾಫೀಸಿಗೆ ಭಾರತ ಮೂಲದ ಸಿಖ್ ಪೊಲೀಸ್ ಸಂದೀಪ್ ಸಿಂಗ್ ದಲಿವಾಲ್ ಹೆಸರು
ಮೂರು ಮಕ್ಕಳ ತಂದೆಯಾಗಿದ್ದ ಸಂದೀಪ್ ಸಿಂಗ್ ಹ್ಯೂಸ್ಟನ್ ನಗರದ ಟ್ರಾಫಿಕ್ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 2017ರಲ್ಲಿ ರಸ್ತೆಯಲ್ಲೇ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ದೆಹಲಿಯಲ್ಲಿ ಮುಂಜಾನೆಯಿಂದ ಧಾರಾಕಾರ ಮಳೆ, ತಗ್ಗು ಪ್ರದೇಶಗಳು ಜಲಾವೃತ!
ದೇಶದ ರಾಜಧಾನಿ ದೆಹಲಿಯಲ್ಲಿ ಬೆಳಗ್ಗೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದೆ. ಮಿಂಟೊ ಬ್ರಿಗೇಡ್, ಮೂಲ್ಚಂದ್ ಅಂಡರ್ ಪಾಸ್, ಐಟಿಒ ಸೇರಿದಂತೆ ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ವಾಹನ ಸವಾರರಿಗೆ, ಜನರಿಗೆ ತೀವ್ರ ತೊಂದರೆಯುಂಟಾಗಿದೆ.

ವಾಹನ ಸವಾರರಿಗೆ ಗುಡ್ ನ್ಯೂಸ್: ಚಾಲಕರು ಇನ್ಮುಂದೆ ಡಿಎಲ್, ಆರ್'ಸಿ ಬುಕ್ ತೆಗೆದುಕೊಂಡು ಹೋಗಬೇಕಿಲ್ಲ; ಡಿಜಿಟಲ್ ದಾಖಲೆ ಸಾಕು!
ಡಿಜಿಟಲ್ ಕ್ರಾಂತಿ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದು, ಬೆಂಗಳೂರು ನಗರ ಪೊಲೀಸ್ ವಿಭಾಗವು ಡಿಜಿಟಿಲೀಕರಣದ ಮುಂಚೂಣಿಯಲ್ಲಿದೆ. ವಾಹನ ಸವಾರರಿಗೆ ಎಲ್ಲಾ ಸಮಯದಲ್ಲಿಯೂ ಅಗತ್ಯ ದಾಖಲಾತಿಗಳನ್ನು ಭೌತಿಕವಾಗಿ ತೆಗೆದುಕೊಂಡು ಹೋಗುತ್ತಿರುವ ಕಿರಿಕಿರಿಯಾಗುತ್ತಿರುವ ಹಿನ್ನೆಲೆಯಲ್ಲಿ ಡಿಜಿಟಲ್ ರೂಪದ ದಾಖಲೆಗಳನ್ನು ಹಾಜರುಪಡಿಸಲು ಸರ್ಕಾರ ಅವಕಾಶ ನೀಡಿದೆ.

ಕರ್ತವ್ಯನಿರತ ಪೊಲೀಸರಿಗೆ ಬಾಡಿ ಕ್ಯಾಮೆರಾ ಕಡ್ಡಾಯ: ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್
ಕರ್ತವ್ಯನಿರತ ಪೊಲೀಸರು ಕಡ್ಡಾಯವಾಗಿ ಬಾಡಿ ಕ್ಯಾಮೆರಾ ಧರಿಸಲು ನಿರ್ದೇಶಿಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ

ಸುಖಾ ಸುಮ್ಮನೆ, ದುರುದ್ದೇಶ ಪೂರ್ವಕವಾಗಿ ವಾಹನಗಳ ದಾಖಲೆ ಪರಿಶೀಲನೆ ಸಲ್ಲ: ಪೊಲೀಸ್ ಆಯುಕ್ತ ಕಮಲ್ ಪಂತ್
ಸಂಚಾರ ಪೊಲೀಸರು ಯಾವುದೇ ವಾಹನಗಳ ದಾಖಲೆಗಳನ್ನು ದುರುದ್ದೇಶ ಇಟ್ಟುಕೊಂಡು ಪರಿಶೀಲನೆ ಮಾಡುವಂತಿಲ್ಲ, ಕಣ್ಣಿಗೆ ಕಾಣುವ ಸಂಚಾರ ನಿಯಮ ಉಲ್ಲಂಘನೆ ಕಂಡುಬಂದರೆ ಮಾತ್ರ ಕ್ರಮ ಜರುಗಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ನೀಡಿದ್ದಾರೆ.

