ಕೆ.ಆರ್. ಮಾರುಕಟ್ಟೆ ಫ್ಲೈಓವರ್ ಮೇಲೆದ್ದು ಬಂದ ನಟ್, ಬೋಲ್ಟ್! ವಾಹನ ಸಂಚಾರಕ್ಕೆ ಅಡ್ಡಿ, ಚಾಲಕರ ಪರದಾಟ
ನಗರದ ಹೃದಯ ಭಾಗ ಕೆ.ಆರ್. ಮಾರುಕಟ್ಟೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಬಾಲಗಂಗಾಧರನಾಥ ಸ್ವಾಮಿ ಫ್ಲೈ ಓವರ್ ನಲ್ಲಿ ನಟ್, ಬೋಲ್ಟ್ ಮೇಲೆ ಬಂದು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಬೆಂಗಳೂರು: ನಗರದ ಹೃದಯ ಭಾಗ ಕೆ.ಆರ್. ಮಾರುಕಟ್ಟೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಬಾಲಗಂಗಾಧರನಾಥ ಸ್ವಾಮಿ ಫ್ಲೈ ಓವರ್ ನಲ್ಲಿ ನಟ್, ಬೋಲ್ಟ್ ಮೇಲೆ ಬಂದು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ಬೋಲ್ಟ್ ಚುಚ್ಚಿ ಹಲವು ವಾಹನಗಳು ಪಂಚರ್ ಆಗಿದ್ದರೆ, ಕೆಲವು ವಾಹನಗಳ ಪಲ್ಟಿಯಾಗಿವೆ. ಇದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ವಾಹನ ಚಾಲಕರು ಪರದಾಡುವಂತಾಗಿದೆ.
ಈ ಸಮಸ್ಯೆ ಬಗ್ಗೆ ಸಂಚಾರಿ ಪೊಲೀಸರು ಬಿಬಿಎಂಪಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ಮೇಲ್ಸುತುವೆ ಸರಿಯಾಗಿ ನಿರ್ವಹಣೆ ಮಾಡದ ಪಾಲಿಕೆ ವಿರುದ್ಧ ಚಾಲಕರು ಕಿಡಿಕಾರಿದ್ದಾರೆ. ವೇಗವಾಗಿ ಬಂದ ವಾಹನ ಪಲ್ಟಿ ಆದ್ರೆ ಯಾರು ಹೊಣೆ ಅಂತಾ ಚಾಲಕರು ಪ್ರಶ್ನೆ ಮಾಡ್ತಿದ್ದಾರೆ.
ಸದ್ಯ ಬೋಲ್ಟ್ ಎದ್ದ ಜಾಗದಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ತೆರಳಿದ್ದಾರೆ. ಇದರಿಂದಾಗಿ ಫ್ಲೈ ಓವರ್ ಮೇಲೆ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ. ಹೀಗಾಗಿ ಈ ಫ್ಲೈ ಓವರ್ ಮೇಲೆ ಸಂಚರಿಸುವಾಗ ವಾಹನ ಸವಾರರು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ತೊಂದರೆ ತಪ್ಪಿದಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


