ಬಿಬಿಎಂಪಿ

ನಟ ಪ್ರಕಾಶ್ ರಾಜ್ ಹೆಸರು ಮತದಾರರ ಪಟ್ಟಿಯಿಂದ ಅಳಿಸಿಲ್ಲ; 'ಶಿಫ್ಟೆಡ್' ಎಂದು ಗುರುತಿಸಲಾಗಿದೆ: BBMP
ಪಾಲಿಕೆ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, SIR ಚಟುವಟಿಕೆಗಳಿಗಾಗಿ ಮತದಾರರ ಪಟ್ಟಿಯ ದತ್ತಾಂಶವನ್ನು ಅಂತಿಮಗೊಳಿಸಿದ 2026ರ ಜೂನ್ 16ರಂದು, 163ನೇ ಶಾಂತಿನಗರ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 1ರಲ್ಲಿ ಕ್ರಮಸಂಖ್ಯೆ 970ರಲ್ಲಿ ಪ್ರಕಾಶ್ ರಾಜ್ ಅವರ ಹೆಸರು ಸಕ್ರಿಯವಾಗಿ ನೋಂದಣಿಯಾಗಿತ್ತು.

ಇದು 'ಕಾಪಿ-ಪೇಸ್ಟ್' ಟ್ರಾಫಿಕ್ ಡೇಟಾ: BBMPಯ ಅಂತಿಮ ವರದಿ ಬಗ್ಗೆ ತೀವ್ರ ಆಕ್ಷೇಪ
ಅಲ್ಟಿನೊಕ್ ಕನ್ಸಲ್ಟೆನ್ಸಿ ಎಂಜಿನಿಯರಿಂಗ್ ಇಂಕ್ ತಯಾರಿಸಿದ ಈ ಸಾಧ್ಯತಾ ವರದಿ, ಟನಲ್ ರಸ್ತೆ ಯೋಜನೆ ಸೇರಿ ಹಲವು ಸಂಚಾರ ನಿರ್ವಹಣಾ ಯೋಜನೆಗಳಿಗೆ ಆಧಾರವಾಗಿದೆ.

ED ದಾಳಿ ಭೀತಿ, ಉದ್ಯಮಿ CJ Roy ರೀತಿಯಲ್ಲೇ BBMP ನಿವೃತ್ತ ಎಂಜಿನಿಯರ್ ಆತ್ಮಹತ್ಯೆಗೆ ಶರಣು!
ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಮಾದರಿಯಲ್ಲೇ ಬಿಬಿಎಂಪಿಯ ನಿವೃತ್ತ ಮುಖ್ಯ ಇಂಜಿನಿಯರ್ ಪರಮೇಶ್ವರಯ್ಯ ಇಂದು ಬೆಳ್ಳಂಬೆಳಗ್ಗೆ ಕೋರಮಂಗಲದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

BBMP ಯುಗಾಂತ್ಯ: ಬೀದಿ ನಾಯಿಗಳಿಗೆ 'ಬಿರಿಯಾನಿ ಭಾಗ್ಯ' ಯೋಜನೆ ಸ್ಥಗಿತ?
ಬೀದಿ ನಾಯಿಗಳಿಗೆ ಪ್ರತಿ ದಿನ ಪೌಷ್ಟಿಕ ಆಹಾರ ನೀಡಲು ರೂ.2.88 ಕೋಟಿ ವೆಚ್ಚದ ಯೋಜನೆಯೊಂದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರೂಪಿಸಿತ್ತು.

ಬೆಂಗಳೂರು: 1.3 ಕಿ.ಮೀ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲಾಗಿದೆ; ಅಕ್ಟೋಬರ್ 15 ರೊಳಗೆ S ಕ್ರಾಸ್ ಕಾಮಗಾರಿ ಮುಗಿಯಲಿದೆ; BECC
ಪಣತ್ತೂರು ರಸ್ತೆಯ ಹಳ್ಳಕ್ಕೆ ಶಾಲಾ ಬಸ್ ಸ್ಕಿಡ್ ಆದ ನಂತರ ಮಹದೇವಪುರ ವಿಧಾನಸಭೆಯ ನಿವಾಸಿಗಳು ಕಳೆದ ಶನಿವಾರ ರಸ್ತೆ ಗುಂಡಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.

BBMP ಯುಗಾಂತ್ಯ: ನಗರದಲ್ಲಿ 'Greater Bengaluru Authority' ಕಾರ್ಯಾರಂಭ; ಆಯುಕ್ತರಾಗಿ ಮಹೇಶ್ವರ್ ರಾವ್ ಅಧಿಕಾರ ಸ್ವೀಕಾರ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 5 ನಗರ ಪಾಲಿಕೆಗಳಿಗೆ ಅನ್ವಯವಾಗುವಂತೆ ಕಾರ್ಯ ನಿರ್ವಹಿಸುವ ಅಧಿಕಾರಿ, ನೌಕರರ ಹುದ್ದೆಯನುಸಾರ ಇ-ಆಫೀಸ್ ತಂತ್ರಾಂಶದಲ್ಲಿ ಹೊಸದಾಗಿ ಲಾಗಿನ್ ನೀಡಲಾಗಿದ್ದು. ಲಾಗಿನ್ ಮ್ಯಾಪಿಂಗ್ ಕಾರ್ಯವು ಪ್ರಗತಿಯಲ್ಲಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ 500 ಕಾರ್ಪೊರೇಟರ್‌ಗಳು; ಶೇ 50 ರಷ್ಟು ವಾರ್ಡ್‌ಗಳು ಮಹಿಳೆಯರಿಗೆ ಮೀಸಲು
ನಿನ್ನೆ ಹೊರಡಿಸಲಾದ ಗೆಜೆಟ್ ಅಧಿಸೂಚನೆಯ ಪ್ರಕಾರ, ಪ್ರತಿ ನಿಗಮದ ಅಡಿಯಲ್ಲಿ ವಾರ್ಡ್‌ಗಳ ಸಂಖ್ಯೆಯನ್ನು ಪ್ರತಿ ವಾರ್ಡ್‌ನಲ್ಲಿನ ಸರಾಸರಿ ಜನಸಂಖ್ಯೆಯನ್ನು ಪರಿಗಣಿಸಿದ ನಂತರ ರಚಿಸಲಾಗುತ್ತದೆ.

'Greater Bengaluru Authority' ಹೆಸರಿಗೆ ಕನ್ನಡ ಸಂಘಟನೆಗಳ ವಿರೋಧ: ಕನ್ನಡದ ಹೆಸರಿಡುವಂತೆ ಆಗ್ರಹ
ಮುಂಬೈ ನಾಗರಿಕ ಸಂಸ್ಥೆಯನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆ ಎಂದು ಹೆಸರಿಸಲಾಗಿದೆ. ಅದೇ ರೀತಿ ಚೆನ್ನೈನ ನಾಗರಿಕ ಸಂಸ್ಥೆಯನ್ನು 'ಪೆರುನಗರ ಚೆನ್ನೈ ಮಾನಾಗ್-ಆರಾಚಿ' ಎಂದು ಹೆಸರಿಸಲಾಗಿದೆ.

ಸೆಪ್ಟೆಂಬರ್ 2 ರಿಂದ ಗ್ರೇಟರ್ ಬೆಂಗಳೂರು ಆಡಳಿತ; ಐದು ಪಾಲಿಕೆಗಳ ರಚನೆ: ಸುಲಲಿತ ಆಡಳಿತಕ್ಕೆ ಸಿಬ್ಬಂದಿ ಕೊರತೆಯೇ ಪ್ರಮುಖ ಅಡ್ಡಿ!
198 ವಾರ್ಡ್‌ಗಳನ್ನು ಹೊಂದಿರುವ ಬೆಂಗಳೂರಿನಲ್ಲಿ ಒಂದು ನಿಗಮವಿತ್ತು, ಈ ವ್ಯವಸ್ಥೆಗೆ ಪೌರಕಾರ್ಮಿಕರು (ಪಿಕೆ) ಹೊರತುಪಡಿಸಿ 5,000 ಕ್ಕೂ ಹೆಚ್ಚು ಸಿಬ್ಬಂದಿ ಕೊರತೆ ಇತ್ತು. ಪೌರ ಕಾರ್ಮಿಕರು ಸೇರಿದಂತೆ 22,000 ಸಿಬ್ಬಂದಿ ಮಂಜೂರು ಮಾಡಲಾಗಿದೆ.

