Traffic Police

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಪ್ರಾಣ ಪಣಕ್ಕಿಟ್ಟು ಬಂಧಿಸಿದ ಟ್ರಾಫಿಕ್ ಪೊಲೀಸ್, ವಿಡಿಯೋ ವೈರಲ್!
ಚಾಣಾಕ್ಷತನ ತೋರಿದ ಟ್ರಾಫಿಕ್ ಪೊಲೀಸ್ ಚಾಲಕನನ್ನು ನಿಯಂತ್ರಿಸಿ ಕಾರನ್ನು ನಿಲ್ಲಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೋರ್ಷೆ ಕಾರು ಅಪಘಾತ ಪ್ರಕರಣ: ಇಬ್ಬರ ಸಾವಿಗೆ ಕಾರಣನಾದ ಬಾಲಕನಿಗೆ 15 ಗಂಟೆಗಳಲ್ಲಿ ಜಾಮೀನು, ಪ್ರಬಂಧ ಬರೆಯಲು ಸೂಚನೆ!
ಪುಣೆಯಲ್ಲಿ ಐಷಾರಾಮಿ ಕಾರು ಪೋರ್ಷೆ ಚಲಾಯಿಸಿ ಇಬ್ಬರನ್ನು ಬಲಿ ಪಡೆದ 17 ವರ್ಷದ ಬಾಲಕನಿಗೆ ಬಂಧನಕ್ಕೆ ಒಳಗಾದ 15 ಗಂಟೆಗಳಲ್ಲಿ ಜಾಮೀನು ಮಂಜೂರಾಗಿದೆ.

ಬೆಂಗಳೂರು: ತಲಾ 1 ಲಕ್ಷ ರೂ. ಟ್ರಾಫಿಕ್ ಫೈನ್ ಹೊತ್ತ 123 ವಾಹನ ಓಡಾಡುತ್ತಿವೆ; ದಂಡ ವಸೂಲಿಗೆ ಸಂಚಾರಿ ಪೊಲೀಸರು ಚಾಲನೆ!
ನಗರದ ಸುಮಾರು 123 ವಾಹನಗಳು ತಲಾ 1 ಲಕ್ಷಕ್ಕೂ ಅಧಿಕ ಟ್ರಾಫಿಕ್ ದಂಡವನ್ನು ಬಾಕಿ ಉಳಿಸಿಕೊಂಡಿವೆ. ಈ ಸಂಬಂಧ ಬೆಂಗಳೂರು ಟ್ರಾಫಿಕ್ ಪೊಲೀಸರು (ಬಿಟಿಪಿ) 2,858 ವಾಹನಗಳನ್ನು ಪಟ್ಟಿ ಮಾಡಿದ್ದಾರೆ.

ಬೆಂಗಳೂರು: ನಂಬರ್ ಪ್ಲೇಟ್ ಬಿಚ್ಚಿಕೊಡ್ತೀನಿ, ಎಷ್ಟು ಕೇಸ್ ಬೇಕಾದ್ರೂ ಹಾಕ್ಕೋ; ಟ್ರಾಫಿಕ್ ಪೊಲೀಸ್ ಕೈಕಚ್ಚಿ, ಹಾವಳಿ ನಡೆಸಿದ್ದ ಸವಾರನ ಬಂಧನ
ಹೆಲ್ಮೆಟ್ ಹಾಕದೇ ವಾಹನ ಚಲಾಯಿಸಿದ್ದನ್ನು ಮೊಬೈಲ್ನಲ್ಲಿ ಫೋಟೋ ತೆಗೆದಿದ್ದಕ್ಕೆ ಕೋಪಗೊಂಡ ವಾಹನ ಸವಾರ ಟ್ರಾಫಿಕ್ ಕಾನ್ಸ್ಟೆಬಲ್ ಕೈ ಬೆರಳು ಕಚ್ಚಿ ಗಾಯಗೊಳಿಸಿರುವ ಘಟನೆ ನಗರದಲ್ಲಿ ನಡೆದಿದೆ.

Traffic violations: 300 ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ, 3 ಲಕ್ಷ ರೂ. ದಂಡ; ಸ್ಕೂಟರ್ ವ್ಯಾಲ್ಯು 20 ಸಾವಿರ ರೂ.!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಲ್ಲೋರ್ವ ವ್ಯಕ್ತಿಯ ಸ್ಕೂಟರ್ ಮೇಲೆ 300ಕ್ಕೂ ಅಧಿಕ ಬಾರಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿದ್ದು, 3 ಲಕ್ಷ ರೂ. ಗೂ ಅಧಿಕ ದಂಡ ಬಾಕಿ ಉಳಿದಿದೆ.

ಬೆಂಗಳೂರು: ಮದ್ಯ ಸೇವಿಸಿ ಚಾಲನೆ; 16 ಶಾಲಾ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲು
ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ 16 ಶಾಲಾ ವಾಹನ ಚಾಲಕರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಅಭಿಯಾನದಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಗಾಂಗ ಕಸಿ: ಕಳೆದ ವರ್ಷ 22 ಬಾರಿ 'ಗ್ರೀನ್ ಕಾರಿಡಾರ್' ಕಲ್ಪಿಸಿ ಹಲವು ಜೀವನಗಳಿಗೆ ಬೆಂಗಳೂರು ಪೊಲೀಸರು ನೆರವು!
ತುರ್ತು ಚಿಕಿತ್ಸೆಗೆ ಅವಶ್ಯವಿದ್ದ ರೋಗಿಗಳಿಗೆ ಅಂಗಾಂಗ ಜೋಡಣೆಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೃದಯ ಸೇರಿದಂತೆ ವಿವಿಧ ಅಂಗಾಗಳನ್ನು ಸಾಗಿಸಲು ನಗರ ಸಂಚಾರ ವಿಭಾಗದ ಪೊಲೀಸರು, 2023ರಲ್ಲಿ 22 ಬಾರಿ ‘ಗ್ರೀನ್ ಕಾರಿಡಾರ್’ ವ್ಯವಸ್ಥೆ ಕಲ್ಪಿಸಿ, ಹಲವು ಜೀವನಗಳಿಗೆ ನೆರವಾಗಿದ್ದಾರೆ.

ಕುಡಿದು ವಾಹನ ಚಾಲನೆ: 700ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು ಟ್ರಾಫಿಕ್ ಪೊಲೀಸರು (ಬಿಟಿಪಿ) ನಗರದಾದ್ಯಂತ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಒಟ್ಟು 717 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸುವ ಗುರಿ: ಐಐಎಸ್ಸಿ ಜೊತೆ ಟ್ರಾಫಿಕ್ ಪೊಲೀಸರ ಒಪ್ಪಂದ
ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸ್ (ಬಿಟಿಪಿ) ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್'ಸಿ) ನಡುವೆ ಮಾಡಿಕೊಂಡಿರುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

