ದಂಡ ಬಾಕಿ ಉಳಿಸಿಕೊಂಡಿರುವ ವಾಹನಗಳನ್ನು ಟ್ರ್ಯಾಕ್ ಮಾಡಲು ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ತಂತ್ರಜ್ಞಾನದ ಮೊರೆ!
ಈ ನೂತನ ತಾಂತ್ರಿಕ ವ್ಯವಸ್ಥೆ ರಸ್ತೆ ಮೇಲೆ ಸಾಗುತ್ತಿರುವ ವಾಹನದ ನಂಬರ್ ಪ್ಲೇಟನ್ನು ಗಮನಿಸಿ, ಆ ನಂಬರಿನಲ್ಲಿ ದಂಡ ಶುಲ್ಕ ಬಾಕಿ ಇರುವ ಬಗ್ಗೆ ಜಾಲಾಡುತ್ತದೆ.

ಬೆಂಗಳೂರು: ದಿನಸಿ ಸಾಮಾನಿನ ಪಟ್ಟಿಯಷ್ಟು ಉದ್ದದ ಟ್ರಾಫಿಕ್ ಉಲ್ಲಂಘನೆಗಳ ಸರಮಾಲೆಯನ್ನು ಹೊಂದಿರುವ ವಾಹನ ಸವಾರರು ಇನ್ನುಮುಂದೆ ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಿ ನಗರದಲ್ಲಿ ಓಡಾಡುವುದು ಕಷ್ಟಕರವಾಗಲಿದೆ. ಅದಕ್ಕೆ ಕಾರಣ ಸಂಚಾರಿ ಪೊಲೀಸ್ ಇಲಾಖೆ ಹೊಸ ತಂತ್ರಜ್ಞಾನವೊಂದಕ್ಕೆ ಮೊರೆ ಹೋಗಿರುವುದು.
ಈ ನೂತನ ತಾಂತ್ರಿಕ ವ್ಯವಸ್ಥೆ ರಸ್ತೆ ಮೇಲೆ ಸಾಗುತ್ತಿರುವ ವಾಹನದ ನಂಬರ್ ಪ್ಲೇಟನ್ನು ಗಮನಿಸಿ, ಆ ನಂಬರಿನಲ್ಲಿ ದಂಡ ಶುಲ್ಕ ಬಾಕಿ ಇರುವ ಬಗ್ಗೆ ಜಾಲಾಡುತ್ತದೆ. ಒಂದು ವೇಳೆ ದಂಡ ಶುಲ್ಕ ಬಾಕಿ ಉಳಿಸಿಕೊಂಡಿದ್ದರೆ ಅದೇ ರಸ್ತೆಯಲ್ಲಿ ಮುಂದೆ ನಿಂತಿರುವ ಸಂಚಾರ ಪೊಲೀಸರಿಗೆ ಮಾಹಿತಿ ನೀಡುತ್ತದೆ. ಹೀಗಾಗಿ ಇನ್ನುಮುಂದೆ ಸಂಚಾರಿ ಪೊಲೀಸರು ದಂಡ ಶುಲ್ಕ ಬಾಕಿ ಉಳಿಸಿಕೊಂಡಿರುವ ವಾಹನಗಳನ್ನು ಮಾತ್ರವೇ ತಡೆದು ನಿಲ್ಲಿಸುವುದು ಸಾಧ್ಯವಾಗಲಿದೆ.
ಈ ನೂತನ ತಾಂತ್ರಿಕತೆ ಉದ್ಘಾಟ್ಘನಾ ಸಮಾರಂಭದಲ್ಲಿ ಮಾತನಾಡಿದ ಸಿ.ಎಂ ಬಸವರಾಜ ಬೊಮ್ಮಾಯಿ ಸಂಚಾರ ಪೊಲೀಸ್ ಇಲಾಖೆ ಆಧುನೀಕರಣಕ್ಕೆ ತಂತ್ರಜ್ಞಾನದ ನೆರವು ಪಡೆದುಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಮಾತನಾಡಿದ ಗೃಹಸಚಿವ ಅರಗ ಜ್ಞಾನೇಂದ್ರ ಬೆಂಗಳೂರು ವಾಹನ ಸವಾರರು ಬಾಕಿ ಉಳಿಸಿಕೊಂಡಿರುವ ದಂಡ ಶುಲ್ಕದ ಒಟ್ಟು ಮೊತ್ತ ನೂರಾರು ಕೋಟಿ ರೂ.ಗಳಷ್ಟಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


