ಬೆಂಗಳೂರಿನಲ್ಲಿ CJP 'ಚಪ್ಪಲ್ ಪ್ರೊಟೆಸ್ಟ್'; 'ಕಾಕ್ರೋಚ್'ಗಳ ಈ ವಿಶಿಷ್ಟ ಪ್ರತಿಭಟನೆಗೆ ಇಲ್ಲಿದೆ ಕಾರಣ...
ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಸಹ-ಸಂಯೋಜಕ ಅಶುತೋಷ್ ರಂಕಾ ಮತ್ತು ವಕ್ತಾರ ಸೌರವ್ ದಾಸ್ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಹಿಳೆಯರೊಂದಿಗೆ ಒಗ್ಗಟ್ಟು ಪ್ರದರ್ಶಿಸಿದರು.

ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಮತ್ತು ಅವರ ಸುರಕ್ಷತೆ ಹಾಗೂ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ(CJP) ಸದಸ್ಯರು ಗುರುವಾರ ಬೆಂಗಳೂರಿನಲ್ಲಿ "ಚಪ್ಪಲಿ ಪ್ರತಿಭಟನೆ" ನಡೆಸಿದರು.
ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಸಹ-ಸಂಯೋಜಕ ಅಶುತೋಷ್ ರಂಕಾ ಮತ್ತು ವಕ್ತಾರ ಸೌರವ್ ದಾಸ್ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಹಿಳೆಯರೊಂದಿಗೆ ಒಗ್ಗಟ್ಟು ಪ್ರದರ್ಶಿಸಿದರು.
ಪ್ರತಿಭಟನಾಕಾರರು "ಆಜಾದಿ"(ಸ್ವಾತಂತ್ರ್ಯ), "ಏಕ್ ಕಚೋರಿ, ದೋ ಸಮೋಸಾ" ಮತ್ತು "ಮಹಿಳಾ ಮಾಂಗೇ ಆಜಾದಿ" (ಮಹಿಳೆಯರು ಸ್ವಾತಂತ್ರ್ಯವನ್ನು ಬಯಸುತ್ತಾರೆ) ಎಂಬ ಘೋಷಣೆಗಳನ್ನು ಕೂಗಿದರು.
ದೆಹಲಿಯ ಜಂತರ್ ಮಂತರ್ ನಲ್ಲಿ ಮುಖ್ಯ ಚುನಾವಣಾ ಆಯುಕ್ತ(CEC) ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಲೈಂಗಿಕ ಕಿರುಕುಳನೀಡಿದ್ದಾರೆ ಎಂದು ಆರೋಪಿಸಿರುವ ಮಹಿಳಾ ಪತ್ರಕರ್ತರೊಂದಿಗೆ ಒಗ್ಗಟ್ಟು ಪ್ರದರ್ಶಿಸುವ ಉದ್ದೇಶದಿಂದ ಈ ಪ್ರತಿಭಟನೆ ಆಯೋಜಿಸಲಾಗಿತ್ತು.
ಸುರಕ್ಷಿತವಾಗಿ ಬದುಕುವ ಮತ್ತು ಭಯವಿಲ್ಲದೆ ತಮ್ಮ ಹಕ್ಕುಗಳನ್ನು ಚಲಾಯಿಸುವ ಹಕ್ಕಿಗಾಗಿ ನಾವಿಲ್ಲಿ ಬಂದಿದ್ದೇವೆ ಎಂದು ಸಿಜೆಪಿ ಸದಸ್ಯರು ಹೇಳಿದೆ. ಈ ವೇಳೆ "ಎಸ್‌ಐಆರ್ (SIR) ರದ್ದುಗೊಳಿಸಿ, ಪ್ರಜಾಪ್ರಭುತ್ವ ಉಳಿಸಿ" ಎಂದು ಬರೆದಿದ್ದ ಫಲಕಗಳನ್ನು ಸಹ ಅವರು ಹಿಡಿದಿದ್ದರು. ಅಲ್ಲದೆ ಪ್ರತಿಭಟನಾಕಾರರೊಬ್ಬರು ಚಪ್ಪಲಿಯನ್ನು ಹಿಡಿದು, ತಮ್ಮನ್ನು ದಮನಿಸಲು ಪ್ರಯತ್ನಿಸುವವರ ವಿರುದ್ಧ ಮಹಿಳೆಯರು ಇದನ್ನು ಬಳಸಬೇಕು ಎಂದು ಹೇಳಿದರು.
ಸುರಕ್ಷತೆಯು ಕೇವಲ ಮಹಿಳೆಯ ಹಕ್ಕಲ್ಲ, ಬದಲಾಗಿ ಸರ್ಕಾರದ ಜವಾಬ್ದಾರಿಯೂ ಹೌದು ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



