T20 World Cup

ಎಬಿ ಡಿ ಅಂತರಾಷ್ಟ್ರೀಯ ನಿವೃತ್ತಿಯಿಂದ ಹಿಂದೆ ಸರಿಯಲ್ಲ: ಸಿಎಸ್ಎ ಸ್ಪಷ್ಟನೆ
ಭಾರತದಲ್ಲಿ ನಡೆಯಲಿರುವ ಮುಂದಿನ ಟಿ 20 ವಿಶ್ವಕಪ್‌ಗೆ ಮುಂಚಿತವಾಗಿ ಎಬಿ ಡಿ ವಿಲಿಯರ್ಸ್ ಅಂತರರಾಷ್ಟ್ರೀಯ ನಿವೃತ್ತಿಯನ್ನು ಹಿಂಪಡೆಯುವುದಿಲ್ಲ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಮಂಗಳವಾರ ತಿಳಿಸಿದೆ.

ಕೊರೋನಾ ಉಲ್ಬಣ: ಮೂರು ಟಿ 20 ವಿಶ್ವಕಪ್ ಯುರೋಪಿಯನ್ ಅರ್ಹತಾ ಪಂದ್ಯಗಳು ರದ್ದು-ಐಸಿಸಿ ಘೋಷಣೆ
ಮೂರು ಟಿ 20 ವಿಶ್ವಕಪ್ ಸಬ್ ರೀಜನಲ್ ಯುರೋಪ್ ಕ್ವಾಲಿಫೈಯರ್ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದ 2022 ರ ಪುರುಷರ ವಿಭಾಗದ ಪಾಥ್‌ವೇ ಪಂದ್ಯಾವಳಿಗಳು ಕೋವಿಡ್ 19 ರ ಕಾರಣದಿಂದಾಗಿ ರದ್ದುಗೊಂಡಿವೆ ಎಂದು ಐಸಿಸಿ ಶುಕ್ರವಾರ ತಿಳಿಸಿದೆ.

ಐಪಿಎಲ್ ರದ್ದು: ನವೆಂಬರ್‌ನಲ್ಲಿ 3ನೇ ಅಲೆ ಸಾಧ್ಯತೆ ಹಿನ್ನೆಲೆ ಯುಎಇಗೆ ಟಿ20 ವಿಶ್ವಕಪ್ ಶಿಫ್ಟ್‌ಗೆ ಸಿದ್ಧತೆ!
ಬಯೋ ಬಬಲ್ ನಲ್ಲಿದ್ದರೂ ಆಟಗಾರರಿಗೆ ಕೊರೋನಾ ವಕ್ಕರಿಸಿದ್ದರಿಂದ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿದ ಬೆನ್ನಲ್ಲೇ ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಅನ್ನು ಯುಎಇಗೆ ಸ್ಥಳಾಂತರಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರದಿದ್ದರೆ ಟಿ20 ವಿಶ್ವಕಪ್‌ಗೆ ಯುಎಇ ಸ್ಟ್ಯಾಂಡ್‌ಬೈ: ಬಿಸಿಸಿಐ
ಭಾರತದಲ್ಲಿ ಹದಗೆಡುತ್ತಿರುವ ಕೋವಿಡ್ -19 ಪರಿಸ್ಥಿತಿ ಸುಧಾರಿಸದಿದ್ದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಟಿ 20 ವಿಶ್ವಕಪ್‌ಗೆ ನಡೆಸುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ಉನ್ನತ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಟಿ20 ವಿಶ್ವಕಪ್‌ಗೆ ಬೆಂಗಳೂರು ಸೇರಿದಂತೆ 9 ಸ್ಥಳಗಳನ್ನು ಆಯ್ಕೆ ಮಾಡಿದ ಬಿಸಿಸಿಐ
ಈ ವರ್ಷ ಅಕ್ಟೋಬರ್-ನವೆಂಬರ್ ನಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬೆಂಗಳೂರು ಸೇರಿದಂತೆ ಭಾರತದಲ್ಲಿ ಒಂಬತ್ತು ಸ್ಥಳಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶನಿವಾರ ಆಯ್ಕೆ ಮಾಡಿದೆ.

ಮುಂದಿನ ವರ್ಷ ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಗೆ ಸೆಹ್ವಾಗ್ ಹೆಸರಿಸಿದ ಮೂರನೇ ವೇಗಿ ಯಾರು ಗೊತ್ತಾ?
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ದೀರ್ಘ ಕಾಲ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆಗಳು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿವೆ.

ಟಿ20 ವಿಶ್ವಕಪ್ ಮುಂದೂಡಿಕೆ: ಟಿಕೆಟ್ ಮುಂದಿನ ವರ್ಷಕ್ಕೂ ಅನ್ವಯ, ಒಂದು ಷರತ್ತು!
ಪ್ರಸ್ತುತ ಮುಂದೂಡಿಕೆಯಾಗಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಮಾರಾಟವಾಗಿರುವ ಟಿಕೆಟ್ ಗಳು ಮುಂದಿನ ವರ್ಷಕ್ಕೆ ಅನ್ವಯವಾಗಲಿದೆ ಎಂದು ಐಸಿಸಿ ತಿಳಿಸಿದೆ. ಆದರೆ ಮುಂದೂಡಿಕೆಯಾಗಿರುವ ಟೂರ್ನಿ ಆಸ್ಟ್ರೇಲಿಯದಲ್ಲಿ ನಡೆದರೆ ಮಾತ್ರ ಎಂದಿದೆ.

ಮಹಿಳಾ ಕ್ರಿಕೆಟ್ ಇತಿಹಾಸದಲ್ಲೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ-20 ವಿಶ್ವಕಪ್ ಅತಿ ಹೆಚ್ಚು ವೀಕ್ಷಣೆ: ಐಸಿಸಿ
ಆಸ್ಟ್ರೇಲಿಯಾದಲ್ಲಿ ನಡೆದ 2020 ಮಹಿಳಾ ಟಿ 20 ವಿಶ್ವಕಪ್ ದಾಖಲೆ ಮಟ್ಟದ ವೀಕ್ಷಕರನ್ನು ಪಡೆದುಕೊಂಡಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಸೋಮವಾರ ಹೇಳಿದೆ.

ಟಿ20 ವಿಶ್ವಕಪ್ ಮುಂದೂಡಿಕೆಯಾದರೆ ಐಪಿಎಲ್ ಆಡುವುದು ಖಚಿತ: ಡೇವಿಡ್ ವಾರ್ನರ್
ಕೋವಿಡ್-19 ಹಿನ್ನೆಲೆಯಲ್ಲಿ ಈ ವರ್ಷದ ಟಿ20 ವಿಶ್ವ ಕಪ್ ಮುಂದೂಡಿಕೆಯಾದರೆ ತಮಗೆ ಮತ್ತು ಆಸ್ಟ್ರೇಲಿಯಾದ ಇತರ ಆಟಗಾರರಿಗೆ ಐಪಿಎಲ್ ಆಡಲು ಸಾಧ್ಯವಾಗಲಿದೆ ಎಂದು ಡೇವಿಡ್ ವಾರ್ನರ್ ಆಶಾವಾದ ವ್ಯಕ್ತಪಡಿಸಿದ್ದಾರೆ.

