ಟಿ20 ವಿಶ್ವಕಪ್ ಮುಂದೂಡಿಕೆಯಾದರೆ ಐಪಿಎಲ್ ಆಡುವುದು ಖಚಿತ: ಡೇವಿಡ್ ವಾರ್ನರ್
ಕೋವಿಡ್-19 ಹಿನ್ನೆಲೆಯಲ್ಲಿ ಈ ವರ್ಷದ ಟಿ20 ವಿಶ್ವ ಕಪ್ ಮುಂದೂಡಿಕೆಯಾದರೆ ತಮಗೆ ಮತ್ತು ಆಸ್ಟ್ರೇಲಿಯಾದ ಇತರ ಆಟಗಾರರಿಗೆ ಐಪಿಎಲ್ ಆಡಲು ಸಾಧ್ಯವಾಗಲಿದೆ ಎಂದು ಡೇವಿಡ್ ವಾರ್ನರ್ ಆಶಾವಾದ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಕೋವಿಡ್-19 ಹಿನ್ನೆಲೆಯಲ್ಲಿ ಈ ವರ್ಷದ ಟಿ20 ವಿಶ್ವ ಕಪ್ ಮುಂದೂಡಿಕೆಯಾದರೆ ತಮಗೆ ಮತ್ತು ಆಸ್ಟ್ರೇಲಿಯಾದ ಇತರ ಆಟಗಾರರಿಗೆ ಐಪಿಎಲ್ ಆಡಲು ಸಾಧ್ಯವಾಗಲಿದೆ ಎಂದು ಡೇವಿಡ್ ವಾರ್ನರ್ ಆಶಾವಾದ ವ್ಯಕ್ತಪಡಿಸಿದ್ದಾರೆ.
ಈ ವರ್ಷ ಅಕ್ಟೋಬರ್-ನವೆಂಬರ್ ನಲ್ಲಿ 16 ತಂಡಗಳು ವಿಶ್ವ ಕಪ್ ಆಯೋಜಿಸುವುದು ಅವಾಸ್ತವಿಕ ಸಂಗತಿ ಎನಿಸಿಕೊಳ್ಳಲಿದೆ ಎಂದು ಕೆಲವು ದಿನಗಳ ಹಿಂದೆ ಕ್ರಿಕೆಟ್ ಆಸ್ಟ್ರೇಲಿಯಾ ಅಧ್ಯಕ್ಷ ಅರ್ಲ್ ಅಡ್ಡಿಂಗ್ ಹೇಳಿದ ಹೊರತಾಗಿಯೂ, ಐಸಿಸಿ ಮಾತ್ರ ಇಲ್ಲಿಯವರೆಗೆ ಟೂರ್ನಿ ಬಗ್ಗೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಮುಂದಿನ ತಿಂಗಳು ಅಂತಿಮ ತೀರ್ಮಾನ ಹೊರಬೀಳುವ ನಿರೀಕ್ಷೆ ಇದೆ.
ಕೊರೊನಾ ಆತಂಕದ ನಡುವೆ 16 ತಂಡಗಳ ಟಿ20 ವಿಶ್ವಕಪ್ ಆಯೋಜಿಸುವುದು ತುಂಬ ಕಷ್ಟದ ಕೆಲಸ ಎಂದು ಎಡಗೈ ಆರಂಭಿಕ ಆಟಗಾರ ವಾರ್ನರ್ ಇದಕ್ಕೂ ಮೊದಲು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


