supreme court

"ಕಡಲೆ"ಯಷ್ಟು ಬೆಂಬಲ: ಕರ್ನಾಟಕ ಸರ್ಕಾರದ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅರವಿಂದ್ ಕುಮಾರ್ ಬೇಸರ
ಹೆಚ್ಚುತ್ತಿರುವ ವ್ಯಾಜ್ಯಗಳು, ಹುದ್ದೆಗಳ ಕಡಿತ ಮತ್ತು ಮೂಲಸೌಕರ್ಯದ ಕೊರತೆಯನ್ನು ಅವರು ಎತ್ತಿ ತೋರಿಸಿದರು. ನ್ಯಾಯಾಂಗವು ಸರ್ಕಾರಕ್ಕೆ ಕೋಟಿಗಟ್ಟಲೆ ಆದಾಯ ತರುತ್ತಿದ್ದರೂ, ಅದರ ಅಭಿವೃದ್ಧಿಗೆ ಕನಿಷ್ಠ ಹಣ ನೀಡಲಾಗುತ್ತಿದೆ ಎಂದು ದೂರಿದರು.

ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ: IAS ಅಧಿಕಾರಿ ರೋಹಿಣಿ ಸಿಂಧೂರಿಗೆ ತಾತ್ಕಾಲಿಕ ರಿಲೀಫ್; 'ಹೈ' ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ..!
ಹೈಕೋರ್ಟ್ ತನ್ನ ಹಿಂದಿನ ಆದೇಶದಲ್ಲಿ, ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅಗತ್ಯ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಆದರೆ, ಆ ಆದೇಶವನ್ನು ಪ್ರಶ್ನಿಸಿ ಸಿಂಧೂರಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

SIR ಗೆ ಆಕ್ಷೇಪ: ಪಶ್ಚಿಮ ಬಂಗಾಳ ಚುನಾವಣೆ ರದ್ದತಿಗೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ವಿರೋಧಿಗಳಿಗೆ ತೀವ್ರ ಹಿನ್ನಡೆ!
ಅಸಮಾಧಾನಗೊಂಡ ಪಕ್ಷಗಳಿಗೆ ಈಗಾಗಲೇ ಸ್ಥಾಪಿತವಾಗಿರುವ ಮೇಲ್ಮನವಿ ನ್ಯಾಯಮಂಡಳಿಗಳನ್ನು ಸಂಪರ್ಕಿಸಲು ಸೂಚಿಸಿದೆ. ಈ ಅರ್ಜಿಯನ್ನು “ಅಕಾಲಿಕ” ಎಂದು ಅಭಿಪ್ರಾಯಪಟ್ಟಿದೆ.

'ಪತ್ನಿ ಮತ್ತು ಮಕ್ಕಳ ಪೋಷಣೆ ಪತಿಯ ಕರ್ತವ್ಯ’: ಮಹಿಳೆಗೆ 5 ಕೋಟಿ ರೂ ಪರಿಹಾರ ಪ್ರಕಟಿಸಿದ ಸುಪ್ರೀಂ ಕೋರ್ಟ್
ನ್ಯಾಯಾಲಯವು, ಪ್ರಾಯೋಗಿಕವಾಗಿ ಈ ವಿವಾಹ ಸಂಪೂರ್ಣವಾಗಿ ಅಂತ್ಯಗೊಂಡಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದೆ. ಜೊತೆಗೆ, ಈ ದೀರ್ಘಕಾಲದ ವಿವಾದಕ್ಕೆ ಅಂತ್ಯ ಮಾಡಲು, ಪರಸ್ಪರ ದಾಖಲಾದ ಎಲ್ಲ ಪ್ರಕರಣಗಳು, ಸಂಬಂಧಿಕರು ಹಾಗೂ ವಕೀಲರ ವಿರುದ್ಧ ಇರುವ ವಿಚಾರಣೆಗಳನ್ನೂ ರದ್ದುಪಡಿಸಿದೆ.

ರಾಜ್ಯಗಳು ಕೇಂದ್ರದ ಅಧೀನ ಅಲ್ಲ; ಸಮಾನ ಪಾಲುದಾರ; ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿವಿ ನಾಗರತ್ನ
ಕೇಂದ್ರ ಮತ್ತು ರಾಜ್ಯಗಳ ಸಂಬಂಧಗಳು ಸಾಂವಿಧಾನಿಕ ಆಡಳಿತವನ್ನು ಆಧರಿಸಿರಬೇಕು. ಯಾವ ರಾಜಕೀಯ ಪಕ್ಷ ಅಧಿಕಾರದಲ್ಲಿದೆ ಎಂಬುದರ ಮೇಲೆ ಅವಲಂಬಿತವಾಗಬಾರದು. ಅಭಿವೃದ್ಧಿ ಅಥವಾ ಆಡಳಿತದ ವಿಷಯಗಳಲ್ಲಿ ಯಾವುದೇ ರಾಜ್ಯದ ನಾಗರಿಕರಿಗೆ ತಾರತಮ್ಯ ಮಾಡಬಾರದು.

SIR ಅಧಿಕಾರಿಗಳನ್ನೇ ಕೂಡಿ ಹಾಕಿದ ಜನರು: ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಕೆಂಡಾಮಂಡಲ; ಸುರಕ್ಷತೆಗೆ ಕೇಂದ್ರ ಸಶಸ್ತ್ರ ಪಡೆ ನಿಯೋಜಿಸಲು ಸೂಚನೆ
ಪಶ್ಚಿಮ ಬಂಗಾಳ ಅತ್ಯಂತ ಧ್ರುವೀಕರಣಗೊಂಡಿರುವ ರಾಜ್ಯವಾಗಿದೆ. ನ್ಯಾಯಾಂಗದ ಅಧಿಕಾರಿಗಳನ್ನು ಒತ್ತೆ ಇರಿಸಿಕೊಂಡಿದ್ದು ನ್ಯಾಯಾಂಗದ ಮೇಲೆ ನಡೆದ ವ್ಯವಸ್ಥಿತ ದಾಳಿ. ರಾಜ್ಯದಲ್ಲಿ ಅರಾಜಕತೆಯನ್ನು ಸಹಿಸುವುದಿಲ್ಲ.

ಮಾಲ್ಡಾದಲ್ಲಿ ಭಾರೀ ಅಶಾಂತಿ: 7 ನ್ಯಾಯಾಂಗ ಅಧಿಕಾರಿಗಳನ್ನು 9 ಗಂಟೆ ಒತ್ತೆಯಾಳಾಗಿಸಿದ ಜನರು; ದೀದಿ ವಿರುದ್ಧ CJI ಗರಂ
ಪಶ್ಚಿಮ ಬಂಗಾಳದ ಮಾಲ್ಡಾದ ಕಲಿಯಾಚಕ್‌ನಲ್ಲಿ ಗಲಭೆ ಭುಗಿಲೆದ್ದಿದೆ. 7 ನ್ಯಾಯಾಂಗ ಅಧಿಕಾರಿಗಳನ್ನು ಒತ್ತೆಯಾಳಾಗಿ ಇರಿಸಲಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಸೂರ್ಯಕಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ನನ್ನ ಸಹೋದರನಿಗೆ ಫೋನ್ ಮಾಡಿ, ಆದೇಶ ಪ್ರಶ್ನಿಸಲು ಎಷ್ಟು ಧೈರ್ಯ': ನ್ಯಾಯಾಂಗ ನಿಂದನೆ ವಾರ್ನಿಂಗ್ ನೀಡಿದ CJI; ಏನಿದು ಕೇಸ್?
ಯಾರೋ ನನ್ನ ಸಹೋದರನಿಗೆ ಕರೆ ಮಾಡಿ ಹೇಗೆ ಅಂತಹ ಆದೇಶ ಹೊರಡಿಸಿದ್ದಾರೆ ಅಂತಾ ಕೇಳಿದ್ದಾರೆ. ಅವರ ವಿರುದ್ಧ ಯಾಕೆ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ತೆಗೆದುಕೊಳ್ಳಬಾರದು? ಎಂದಿದ್ದಾರೆ.

ಹಿಂದೂ, ಬೌದ್ಧ, ಸಿಖ್ ಧರ್ಮದವರು ಮಾತ್ರ ಪರಿಶಿಷ್ಟ ಜಾತಿ ಹಕ್ಕು ಪಡೆಯಬಹುದು: ಸುಪ್ರೀಂ ಕೋರ್ಟ್
ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಮನ್ಮೋಹನ್ ಅವರನ್ನೊಳಗೊಂಡ ನ್ಯಾಯಪೀಠ, ಪಾಸ್ಟರ್ ಚಿಂತಾಡ ಆನಂದ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ಮಾಡುವ ವೇಳೆ ಈ ತೀರ್ಪು ನೀಡಿತು.

