'ನನ್ನ ಸಹೋದರನಿಗೆ ಫೋನ್ ಮಾಡಿ, ಆದೇಶ ಪ್ರಶ್ನಿಸಲು ಎಷ್ಟು ಧೈರ್ಯ': ನ್ಯಾಯಾಂಗ ನಿಂದನೆ ವಾರ್ನಿಂಗ್ ನೀಡಿದ CJI; ಏನಿದು ಕೇಸ್?
ಯಾರೋ ನನ್ನ ಸಹೋದರನಿಗೆ ಕರೆ ಮಾಡಿ ಹೇಗೆ ಅಂತಹ ಆದೇಶ ಹೊರಡಿಸಿದ್ದಾರೆ ಅಂತಾ ಕೇಳಿದ್ದಾರೆ. ಅವರ ವಿರುದ್ಧ ಯಾಕೆ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ತೆಗೆದುಕೊಳ್ಳಬಾರದು? ಎಂದಿದ್ದಾರೆ.

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರು ಹೊರಡಿಸಿದ ಆದೇಶವನ್ನು ಪ್ರಶ್ನಿಸುವ ಪ್ರಯತ್ನವನ್ನು ಕಟುವಾಗಿ ಖಂಡಿಸಿದ್ದಾರೆ ಮತ್ತು ಸಂಭಾವ್ಯ ಕ್ರಿಮಿನಲ್ ನ್ಯಾಯಾಂಗ ನಿಂದನೆ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ವೈದ್ಯಕೀಯ ಪ್ರವೇಶ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಸಿಜೆಐ ಆಶ್ಚರ್ಯಕರ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಯಾರೋ ನನ್ನ ಸಹೋದರನಿಗೆ ಕರೆ ಮಾಡಿ ಹೇಗೆ ಅಂತಹ ಆದೇಶ ಹೊರಡಿಸಿದ್ದಾರೆ ಅಂತಾ ಕೇಳಿದ್ದಾರೆ. ಅವರ ವಿರುದ್ಧ ಯಾಕೆ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ತೆಗೆದುಕೊಳ್ಳಬಾರದು? ಎಂದಿದ್ದಾರೆ.
ಹರಿಯಾಣ ಸರ್ಕಾರದ ಪರ ವಕೀಲರನ್ನು ಉದ್ದೇಶಿಸಿ ಮಾತನಾಡಿದ ಸಿಜೆಐ " ನನ್ನ ಸಹೋದರನಿಗೆ ಫೋನ್ ಮಾಡಿ ಹೇಗೆ ಆದೇಶ ಹೊರಡಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅವರು ನನಗೆ ಷರತ್ತುಗಳನ್ನು ನಿರ್ದೇಶಿಸುತ್ತಾರೆಯೇ? ನೀವು ಇದನ್ನು ಪರಿಶೀಲಿಸಬೇಕು. ವಕೀಲರಾಗಿ, ಮೊದಲು ಇದನ್ನು ಹಿಂಪಡೆಯಬೇಕು ಎಂದು ಹೇಳಿದರು.
ಅವರು ಭಾರತದ ಹೊರಗೆ ಅಡಗಿಕೊಂಡರೂ, ಅಂತಹವರೊಂದಿಗೆ ಹೇಗೆ ವರ್ತಿಸಬೇಕು ಎಂಬುದು ನನಗೆ ತಿಳಿದಿದೆ. ಇದನ್ನು ಎಂದಿಗೂ ಪ್ರಯತ್ನಿಸಬೇಡಿ. ಕಳೆದ 23 ವರ್ಷಗಳಿಂದ ನಾನು ಅಂತಹ ಅಂಶಗಳನ್ನು ನಿಭಾಯಿಸಿದ್ದೇನೆ ಎಂದರು.
ಏನಿದು ಕೇಸ್? ಅಲ್ಪಸಂಖ್ಯಾತರ ಪ್ರಮಾಣಪತ್ರ ವಿವಾದ: ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಯೋಗದಿಂದ (NCMEI) ಮಾನ್ಯಗೊಂಡ ಮೀರತ್‌ನ ಬೌದ್ಧ ಅಲ್ಪಸಂಖ್ಯಾತ ಸಂಸ್ಥೆಯಾದ ಸುಭಾರ್ತಿ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಕೋರ್ಸ್‌ಗೆ ಬೌದ್ಧ ಅಲ್ಪಸಂಖ್ಯಾತ ಕೋಟಾದಡಿಯಲ್ಲಿ ಪ್ರಯೋಜನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ CJI ಈ ರೀತಿಯ ಹೇಳಿಕೆ ನೀಡಿದ್ದಾರೆ.
ಸಹೋದರರಾದ ನಿಖಿಲ್ ಕುಮಾರ್ ಪುನಿಯಾ ಮತ್ತು ಏಕ್ತಾ ಪುನಿಯಾ ಅವರು ಈ ಹಿಂದೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಾಗಿ ಕಾಣಿಸಿಕೊಂಡಿದ್ದರೂ ಸಹ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ನಂತರ ಅಲ್ಪಸಂಖ್ಯಾತ ಪ್ರಯೋಜನಗಳಿಗೆ ಅರ್ಹರು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಉತ್ತರ ಪ್ರದೇಶ ಸರ್ಕಾರದ ಅಧಿಸೂಚನೆಯ ನಂತರ ವೈದ್ಯಕೀಯ ಕಾಲೇಜಿಗೆ ಅವರ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ. ಪ್ರಕರಣದ ವಿಮರ್ಶಾತ್ಮಕ ದೃಷ್ಟಿಕೋನವನ್ನು ತೆಗೆದುಕೊಂಡ ಪೀಠವು ವ್ಯವಸ್ಥೆಯ ದುರುಪಯೋಗಕ್ಕೆ ಸಂಬಂಧಿಸಿದ ಪರಿಸ್ಥಿತಿಯನ್ನು ವಿವರಿಸಿದೆ. "ಇದೊಂದು ಹೊಸ ರೀತಿಯ ವಂಚನೆ ಎಂದು ಸಿಜೆಐ ಹೇಳಿದ್ದರು.
ಸಾಮಾನ್ಯ ವರ್ಗದ ಅಡಿಯಲ್ಲಿ ವರ್ಗೀಕರಿಸಲ್ಪಟ್ಟಿರುವ ಪುನಿಯಾ ಜಾಟ್ ಸಮುದಾಯದ ಅಭ್ಯರ್ಥಿಗಳು ಅಲ್ಪಸಂಖ್ಯಾತ ಪ್ರಮಾಣಪತ್ರಗಳನ್ನು ಹೇಗೆ ಪಡೆಯಬಹುದು ಎಂದು ನ್ಯಾಯಾಲಯವು ಪ್ರಶ್ನಿಸಿದೆ. ಮನವಿಯನ್ನು ವಜಾಗೊಳಿಸಿದ ನ್ಯಾಯಾಲಯ ಮುಂದೆ ಆಗುವ ಪರಿಣಾಮಗಳ ಕುರಿತು ವಿವರಿಸಿತು. ಅಲ್ಲದೇ ಅಲ್ಪಸಂಖ್ಯಾತ ಪ್ರಮಾಣಪತ್ರಗಳನ್ನು ನೀಡಲು ಮಾರ್ಗಸೂಚಿಗಳನ್ನು ಒದಗಿಸುವಂತೆ ಹರಿಯಾಣದ ಮುಖ್ಯ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿತು.
ಮೇಲ್ವರ್ಗದ ಅಭ್ಯರ್ಥಿಗಳಿಗೆ -- ವಿಶೇಷವಾಗಿ ಈ ಹಿಂದೆ ತಮ್ಮನ್ನು "ಜನರಲ್" ಎಂದು ಘೋಷಿಸಿಕೊಂಡ EWS ಮಿತಿಗಿಂತ ಮೇಲಿರುವವರಿಗೆ ಕಾಲೇಜಿನಲ್ಲಿ ಪ್ರವೇಶಕ್ಕಾಗಿ ಬೌದ್ಧ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಲು ಅನುಮತಿ ಇದೆಯೇ ಎಂದು ನ್ಯಾಯಾಲಯವು ಪ್ರಶ್ನಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



