Sri Lanka

ಸಂಸತ್ ಮತದಾನದಲ್ಲಿ ವಿಕ್ರಮಸಿಂಘೆಗೆ ಬೆಂಬಲ ನೀಡಲು ಶ್ರೀಲಂಕಾದ ಅಡಳಿತಾರೂಢ ಪಕ್ಷ ನಿರ್ಧಾರ
ಶ್ರೀಲಂಕಾದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಅಲ್ಲಿನ ಸಂಸತ್ ನಲ್ಲಿ ನಡೆಯಲಿರುವ ಮತದಾನದಲ್ಲಿ ಲಂಕಾದ ಆಡಳಿತಾರೂಢ ಪಕ್ಷ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ ಅವರನ್ನು ಬೆಂಬಲಿಸಲು ನಿರ್ಧರಿಸಿದೆ.

ಗೋಟಬಯ ರಾಜಪಕ್ಸೆ ಸಹೋದರರಾದ ಮಹಿಂದಾ ಮತ್ತು ಬಸಿಲ್ ಲಂಕಾ ತೊರೆಯದಂತೆ ಸುಪ್ರೀಂ ಕೋರ್ಟ್ ನಿರ್ಬಂಧ
ಶ್ರೀಲಂಕಾದ ಅಧ್ಯಕ್ಷ ಸ್ಥಾನಕ್ಕೆ ಗೋಟಬಯ ರಾಜಪಕ್ಸೆ ಅವರು ರಾಜೀನಾಮೆ ನೀಡಿದ ಮಾರನೇ ದಿನವೇ ಅವರ ಇಬ್ಬರು ಸಹೋದರರು ಜುಲೈ 28 ರವರೆಗೆ ದೇಶ ತೊರೆಯದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು: ಗೋಟಬಯ ರಾಜೀನಾಮೆ; ಏಳು ದಿನಗಳೊಳಗೆ ನೂತನ ಅಧ್ಯಕ್ಷರ ಆಯ್ಕೆ- ಸ್ಪೀಕರ್
ದ್ವೀಪರಾಷ್ಟ್ರದಲ್ಲಿನ ಆರ್ಥಿಕ ದಿವಾಳಿತ, ಅಸಮರ್ಪಕ ನಿರ್ವಹಣೆಗಾಗಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಾಗೂ ಒಂದು ವಾರ ನಡೆದ ನಾಟಕೀಯ ಬೆಳವಣಿಗೆ ನಂತರ ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸಂಸತ್ತಿನ ಸ್ಪೀಕರ್ ಮಹಿಂದಾ ಯಾಪಾ ಅಬೇವರ್ದನ ಶುಕ್ರವಾರ ಅಧಿಕೃತವಾಗಿ ಘೋಷಿಸಿದ್ದಾರೆ

ಶ್ರೀಲಂಕಾ ಬಿಕ್ಕಟ್ಟು: ಇನ್ನೂ ರಾಜೀನಾಮೆ ನೀಡದ ಗೋಟಬಯ ರಾಜಪಕ್ಸ, ಮಾಲ್ಡೀವ್ಸ್ ನಿಂದ ಸಿಂಗಾಪುರಕ್ಕೆ ಪಲಾಯನ
ದ್ವೀಪ ರಾಷ್ಟ್ರ ಅತ್ಯಂತ ಭೀಕರ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ತತ್ತರಿಸಿರುವಂತೆಯೇ, ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸ ಗುರುವಾರ ಮಾಲ್ಡೀವ್ಸ್ನಿಂದ ಸಿಂಗಾಪುರಕ್ಕೆ ಪಲಾಯನ ಮಾಡಿದ್ದಾರೆ.

ವಿರೋಧದ ನಡುವೆಯೂ ಹಂಗಾಮಿ ಅಧ್ಯಕ್ಷರಾಗಿ ವಿಕ್ರಮಸಿಂಘೆ ಆಯ್ಕೆ: ಭುಗಿಲೆದ್ದ ಆಕ್ರೋಶ, ಪ್ರಧಾನಿ ನಿವಾಸಕ್ಕೆ ಮುತ್ತಿಗೆ!
ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಮತ್ತು ಆಂತರಿಕ ಸಂಘರ್ಷ ಮುಂದುವರೆದಿದ್ದು, ವಿರೋಧದ ನಡುವೆಯೂ ರಣಿಲ್ ವಿಕ್ರಮಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರಾಗೆ ಆಯ್ಕೆ ಮಾಡಿದ ಬೆನ್ನಲ್ಲೇ ರಾಜಧಾನಿ ಕೊಲಂಬೋದಲ್ಲಿ ಪ್ರತಿಭಟನೆ ಮತ್ತೆ ಭುಗಿಲೆದ್ದಿದೆ.

ಅಧ್ಯಕ್ಷ ಗೋಟಬಯ ಮಾಲ್ಡೀವ್ಸ್ ಗೆ ಪರಾರಿ: ಶ್ರೀಲಂಕಾದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಜಾರಿ; ತೀವ್ರಗೊಂಡ ಪ್ರತಿಭಟನೆ
ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದ ಜನರ ಆಕ್ರೋಶಕ್ಕೆ ತುತ್ತಾಗಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡೀವ್ಸ್ ಪರಾರಿಯಾದ ಬೆನ್ನಲ್ಲೇ ಇದೀಗ ಶ್ರೀಲಂಕಾದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಜಾರಿ ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.

ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸ ಕುಟುಂಬ ಸಮೇತ ಮಾಲ್ಡೀವ್ಸ್ ಗೆ ಪರಾರಿ!
ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದ ಜನರ ಆಕ್ರೋಶಕ್ಕೆ ತುತ್ತಾಗಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ, ಬುಧವಾರ ಮುಂಜಾನೆ ಕುಟುಂಬ ಸಮೇತ ದೇಶ ಬಿಟ್ಟು ಮಾಲ್ಡೀವ್ಸ್ಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀಲಂಕಾ ಬಿಕ್ಕಟ್ಟು: ಅಮೆರಿಕಾ ಪ್ರವೇಶಿಸಲು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆಗೆ ವೀಸಾ ನಿರಾಕರಣೆ!
ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ನಿನ್ನೆ ರಾತ್ರಿ ದ್ವೀಪದಿಂದ ಪಲಾಯನ ಮಾಡಲು ಪ್ರಯತ್ನಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಯುಎಸ್ ರಾಯಭಾರ ಕಚೇರಿಯು ದೇಶಕ್ಕೆ ಪ್ರವೇಶಿಸಲು ವೀಸಾವನ್ನು ನಿರಾಕರಿಸಿದೆ ಎಂದು ವರದಿಯಾಗಿದೆ.

ವಿದೇಶಕ್ಕೆ ಪರಾರಿ ಯತ್ನ: ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಜೊತೆ ಗಲಾಟೆ; ಗೋಟಬಯ, ಮಾಜಿ ಸಚಿವ ಬೆಸಿಲ್ ಗೆ ಫ್ಲೈಟ್ ಮಿಸ್
ಈ ಹಿಂದೆ ರಾಜಿನಾಮೆ ಘೋಷಣೆ ಮಾಡಿದ್ದ ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆಗೆ ವಿಮಾನ ನಿಲ್ದಾಣದಲ್ಲಿ ಮತ್ತೆ ತೀವ್ರ ಮುಖಭಂಗವಾಗಿದ್ದು, ಸಂಘರ್ಷ ಪೀಡಿತ ಶ್ರೀಲಂಕಾವನ್ನು ತೊರೆಯಲು ಯತ್ನಿಸಿದ್ದ ರಾಜಪಕ್ಸೆ ಅವರು ವಿಮಾನ ನಿಲ್ದಾಣದ ಸಿಬ್ಬಂದಿಗಳ ಜೊತೆಗಿನ ಗಲಾಟೆಯಿಂದಾಗಿ ಹಲವು ಬಾರಿ ವಿಮಾನಗಳನ್ನು ಮಿಸ್ ಮಾಡಿಕೊಂಡು ನಿಲ್ದಾಣದಲ್ಲೇ ಸಿಲುಕಿದ ಘಟನೆ ವರದಿಯಾಗಿದೆ.

