ಶ್ರೀಲಂಕಾ ಬಿಕ್ಕಟ್ಟು: ಅಮೆರಿಕಾ ಪ್ರವೇಶಿಸಲು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆಗೆ ವೀಸಾ ನಿರಾಕರಣೆ!
ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ನಿನ್ನೆ ರಾತ್ರಿ ದ್ವೀಪದಿಂದ ಪಲಾಯನ ಮಾಡಲು ಪ್ರಯತ್ನಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಯುಎಸ್ ರಾಯಭಾರ ಕಚೇರಿಯು ದೇಶಕ್ಕೆ ಪ್ರವೇಶಿಸಲು ವೀಸಾವನ್ನು ನಿರಾಕರಿಸಿದೆ ಎಂದು ವರದಿಯಾಗಿದೆ.

ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ನಿನ್ನೆ ರಾತ್ರಿ ದ್ವೀಪದಿಂದ ಪಲಾಯನ ಮಾಡಲು ಪ್ರಯತ್ನಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಯುಎಸ್ ರಾಯಭಾರ ಕಚೇರಿಯು ದೇಶಕ್ಕೆ ಪ್ರವೇಶಿಸಲು ವೀಸಾವನ್ನು ನಿರಾಕರಿಸಿದೆ ಎಂದು ವರದಿಯಾಗಿದೆ.
ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರಿಗೆ ಯಾವುದೇ ವೀಸಾ ನೀಡಲಾಗುವುದಿಲ್ಲ ಎಂದು ಅವರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಕೊಲಂಬೊದಲ್ಲಿರುವ ಯುಎಸ್ ರಾಯಭಾರ ಕಚೇರಿಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.
ವಾರಾಂತ್ಯದಲ್ಲಿ ಕ್ಯಾಲಿಫೋರ್ನಿಯಾಗೆ ಪ್ರಯಾಣಿಸಲು ರಾಜಪಕ್ಸೆ ಅವರು ಸಂದರ್ಶಕ ವೀಸಾವನ್ನು ಕೋರಿದ್ದರು. ಮನವಿಯನ್ನು ತಿರಸ್ಕರಿಸಲಾಯಿತು ಎಂದು ವರದಿಯಾಗಿದೆ. ಗೋಟಬಯ ರಾಜಪಕ್ಸೆ ಅವರು ವೀಸಾ ಇಲ್ಲದೆ ರಾಷ್ಟ್ರದ ಮುಖ್ಯಸ್ಥರಾಗಿ ಅಲ್ಲಿಗೆ ಹೋಗಬಹುದು, ಆದರೆ ಪ್ರಸ್ತುತ ಸಂದರ್ಭಗಳು ವಿಭಿನ್ನವಾಗಿವೆ ಎಂದು ರಾಯಭಾರ ಕಚೇರಿಯ ಪ್ರತಿನಿಧಿ ಹೇಳಿದರು.
ಕೊಲಂಬೊದಲ್ಲಿನ ಯುಎಸ್ ರಾಯಭಾರ ಕಚೇರಿಯು ಗೋಟಬಯ ರಾಜಪಕ್ಸೆ ಸಹೋದರ ಬಾಸಿಲ್ ರಾಜಪಕ್ಸೆಗೆ ಹೊಸ ಯುಎಸ್ ಪಾಸ್‌ಪೋರ್ಟ್ ನೀಡಿತು, ಅವರು ಶನಿವಾರದಂದು ಪ್ರತಿಭಟನಾಕಾರರಿಂದ ದಾಳಿಗೊಳಗಾದ ಅಧ್ಯಕ್ಷರ ನಿವಾಸವನ್ನು ತೊರೆದರು ಎಂದು ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


