Sri Lanka

ಪತ್ನಿ, ಮಗನ ಜೊತೆ ಅಮೆರಿಕದಲ್ಲಿ ನೆಲೆಸಲು ಲಂಕಾ ಮಾಜಿ ಅಧ್ಯಕ್ಷ ಗೊಟಬಯ ‘ಗ್ರೀನ್ ಕಾರ್ಡ್’ಗೆ ಅರ್ಜಿ!
ಶ್ರೀಲಂಕಾದಿಂದ ಪರಾರಿಯಾಗಿರುವ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಅಮೆರಿಕದಲ್ಲಿ ಪತ್ನಿ ಮತ್ತು ಮಗನೊಂದಿಗೆ ನೆಲೆಸಲು ‘ಗ್ರೀನ್ ಕಾರ್ಡ್’ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಭಾರತ, ಅಮೆರಿಕಾ ಕಳವಳದ ನಡುವೆಯೂ ಲಂಕಾ ಬಂದರಿಗೆ ಚೀನಾದ ಸರ್ವೇಕ್ಷಣಾ ನೌಕೆ ಆಗಮನ!
ಭದ್ರತಾ ಕಾಳಜಿ ವಿಚಾರವಾಗಿ ಭಾರತದ ತೀವ್ರ ವಿರೋಧದ ನಡುವೆಯೂ ಚೀನಾದ ಬೇಹುಗಾರಿಕೆ ನೌಕೆ ಎಂದು ಕರೆಯಲ್ಪಡುವ ಯುವಾನ್ ವಾಂಗ್ ಸರ್ವೇಕ್ಷಣಾ ನೌಕೆ ಶ್ರೀಲಂಕಾದ ಹಂಬನ್ತೋಟ ಬಂದರಿಗೆ ಬಂದಿಳಿದಿದೆ.

ವಿವಾದಾತ್ಮಕ ಚೀನಾ ಹಡಗು ಪ್ರವೇಶಕ್ಕೆ ಲಂಕಾ ಅನುಮತಿ!
ಭಾರತದ ವಿರೋಧ, ಆತಂಕದ ನಡುವೆಯೂ ಶ್ರೀಲಂಕ ಚೀನಾದ ವಿವಾದಾತ್ಮಕ ಸಂಶೋಧನಾ ಹಡಗು ಪ್ರವೇಶಕ್ಕೆ ಅನುಮತಿ ನೀಡಿದೆ.

ಶ್ರೀಲಂಕಾಗೆ ಡಾರ್ನಿಯರ್ 228 ಸೇನಾ ವಿಮಾನ ನೀಡಲು ಮುಂದಾದ ಭಾರತ
ಭಾರತ ಮುಂದಿನ ಕೆಲವೇ ದಿನಗಳಲ್ಲಿ ಮೇಡ್-ಇನ್-ಇಂಡಿಯಾ ಸೇನಾ ವಿಮಾನ ಡೋರ್ನಿಯರ್ 228 ಅನ್ನು ಶ್ರೀಲಂಕಾಗೆ ಹಸ್ತಾಂತರಿಸುವ ಸಾಧ್ಯತೆಯಿದೆ.

ಶ್ರೀಲಂಕಾಗೆ ನೆರವು ನೀಡಲು ವಿಶ್ವಬ್ಯಾಂಕ್ ಷರತ್ತುಗಳಿವು...
ಶ್ರೀಲಂಕಾಗೆ ಆರ್ಥಿಕ ನೆರವು ನೀಡುವುದಕ್ಕೆ ವಿಶ್ವ ಬ್ಯಾಂಕ್ ಒಂದಷ್ಟು ಷರತ್ತುಗಳನ್ನು ವಿಧಿಸಿದೆ.

ಶ್ರೀಲಂಕಾದ 15ನೇ ಪ್ರಧಾನಿಯಾಗಿ ದಿನೇಶ್ ಗುಣವರ್ಧನ ಪ್ರಮಾಣ ವಚನ ಸ್ವೀಕಾರ
ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಇದೀಗ ಹಿರಿಯ ರಾಜಕಾರಣಿ ದಿನೇಶ್ ಗುಣವರ್ಧನ ಶ್ರೀಲಂಕಾದ 15ನೇ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಶ್ರೀಲಂಕಾದ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕಾರ
ಶ್ರೀಲಂಕಾದ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಜುಲೈ 20 ರಂದು ಬುಧವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವ ಮುಖೇನ ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾದ ಒಂಬತ್ತನೇ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ.

ಶ್ರೀಲಂಕಾ ಅತ್ಯಂತ ಗಂಭೀರ ಬಿಕ್ಕಟ್ಟು ಎದುರಿಸುತ್ತಿದೆ, ಸಹಜವಾಗಿಯೇ ಭಾರತಕ್ಕೆ ಚಿಂತೆ: ಸರ್ವಪಕ್ಷ ಸಭೆಯಲ್ಲಿ ಜೈಶಂಕರ್
ನೆರೆಯ ಶ್ರೀಲಂಕಾವು "ಅತ್ಯಂತ ಗಂಭೀರ ಬಿಕ್ಕಟ್ಟನ್ನು" ಎದುರಿಸುತ್ತಿದೆ. ಇದು ಸಹಜವಾಗಿಯೇ ಭಾರತವನ್ನು ಚಿಂತಿಸುವಂತೆ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮಂಗಳವಾರ ನಡೆದ ಸರ್ವಪಕ್ಷ...

ಶ್ರೀಲಂಕಾ: ಪ್ರಧಾನಿ ನಿವಾಸದಲ್ಲಿನ 4,000 ಪುಸ್ತಕ, ಪಿಯಾನೋ ಬೆಂಕಿಗೆ ಆಹುತಿ!
ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ನೆರೆಯ ದ್ವೀಪರಾಷ್ಟ್ರದಲ್ಲಿ ಸರ್ಕಾರದ ವಿರುದ್ಧ ಜುಲೈ 9 ರಂದು ನಡೆಸಿದ ಪ್ರತಿಭಟನೆಯಲ್ಲಿ ಉದ್ರಿಕ್ತ ಗುಂಪೊಂದು ತಮ್ಮ ಖಾಸಗಿ ನಿವಾಸದಲ್ಲಿ ಬೆಂಕಿ ಹಚ್ಚಿದ್ದರಿಂದ 125 ವರ್ಷ ಹಳೆಯದಾದ ಪಿಯಾನೋ ಹಾಗೂ 4,000 ಪುಸ್ತಕಗಳು ನಾಶವಾಗಿರುವುದಾಗಿ ಶ್ರೀಲಂಕಾದ ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮ್ ಸಿಂಘೆ ಹೇಳಿದ್ದಾರೆ.

