Social Media

ಉಪ ಚುನಾವಣೆ ಸಮಯ: ಚುನಾವಣಾ ಆಯೋಗಕ್ಕೆ ಸೋಷಿಯಲ್ ಮೀಡಿಯಾ ಪೋಸ್ಟ್ ಗಳದ್ದೇ ದೊಡ್ಡ ಸವಾಲು!
ನವೆಂಬರ್ 3ರ ಉಪ ಚುನಾವಣೆಗೆ ಮುನ್ನ ಸೋಷಿಯಲ್ ಮೀಡಿಯಾಗಳಲ್ಲಿ ಸಂದೇಶಗಳನ್ನು ಪತ್ತೆಹಚ್ಚುವ ಕೆಲಸ ಚುನಾವಣಾ ಆಯೋಗದ ಅಧಿಕಾರಿಗಳಿಗೆ ತಲೆನೋವಾಗಿದೆ.

ಶಿರಾ ಉಪಚುನಾವಣೆ: ವೋಟಿಗಾಗಿ ನೋಟುಗಳ ಸುರಿಮಳೆ; ವಿಡಿಯೋ ವೈರಲ್
ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದ್ದು, ಈ ನಡುವಲ್ಲೇ ರಾಜಕೀಯ ಪಕ್ಷದ ಅಭ್ಯರ್ಥಿಯೊಬ್ಬರ ಪರ ಬೆಂಬಲಿಗರು ಹಣ ಹಂಚಿಕೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಕೊಟ್ರು ಸರ್ಪ್ರೈಸ್! ಮದುವೆಯ ಮುನ್ಸೂಚನೆಯೋ?
ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರು ಹುಡುಗಿಯ ಕೈ ಹಿಡಿದುಕೊಂಡಿರುವ ವಿಡಿಯೋವೊಂದನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.

ಅನ್ಯಾಯದ ಟೀಕೆಗಳಿಗೆ ನ್ಯಾಯಾಧೀಶರು ಹೆಚ್ಚು ಗುರಿಯಾಗುತ್ತಾರೆ:ಸಿಜೆಐ ಎಸ್ ಎ ಬೊಬ್ಡೆ, ಜಸ್ಟೀಸ್ ಎನ್ ವಿ ರಮಣ
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ನ್ಯಾಯಾಧೀಶರು ಸುಲಭವಾಗಿ ಅಪಹಾಸ್ಯ, ಟೀಕೆಗಳಿಗೆ ಗುರಿಯಾಗುತ್ತಾರೆ, ಟೀಕಿಸುವ ಭರದಲ್ಲಿ ಅನೇಕ ರಸಭರಿತ ಗಾಸಿಪ್ ಗಳು ಬರುತ್ತವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ ಮತ್ತು ನ್ಯಾಯಾಧೀಶ ನ್ಯಾಯಮೂರ್ತಿ ಎನ್ ವಿ ರಮಣ ವಿಷಾದ ವ್ಯಕ್ತಪಡಿಸಿದ್ದಾರೆ.

ಜಾಲತಾಣಗಳಲ್ಲಿ ಚಾರಿತ್ರ್ಯ ವಧೆ ಸಂದೇಶ: ಕ್ರಮಕ್ಕೆ ಶಾಸಕ ಎನ್.ಮಹೇಶ್ ಮನವಿ
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಗಳ ಚಾರಿತ್ರ್ಯವಧೆಯಾಗುವಂತಹ ಸಂದೇಶ ಗಳನ್ನು ಹರಡುವುದಕ್ಕೆ ನಿಯಂತ್ರಣ ಮಾಡದಿದ್ದರೆ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ.ಹೀಗಾಗಿ ವ್ಯಕ್ತಿತ್ವ ಚಾರಿತ್ರ್ಯವಧೆಯಾಗುವಂತಹ ಸಂದೇಶಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎನ್.ಮಹೇಶ್ ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದರೆ ಕಠಿಣ ಕ್ರಮ: ಗೃಹ ಸಚಿವ ಬೊಮ್ಮಾಯಿ
ಡಿಜೆ ಹಳ್ಳಿ, ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಯಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಇನ್ನು ಮುಂದೆ ಫೇಸ್ಬುಕ್, ಇನ್ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುವವರ ವಿರುದ್ಧ ಕ್ರಮ ಜರುಗಿಸಲು ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಮಧ್ಯಪ್ರದೇಶ: ವಿದ್ಯಾರ್ಥಿಗೆ 2 ತಿಂಗಳು ಸಾಮಾಜಿಕ ಜಾಲತಾಣದಿಂದ ದೂರವಿರುವ ಷರತ್ತಿನ ಮೇಲೆ ಜಾಮೀನು!
ಸಾಮಾಜಿಕ ಮಾಧ್ಯಮದಿಂದ ಎರಡು ತಿಂಗಳ ದೂರವಿರುವಂತೆ ಸೂಚಿಸಿ ಷರತ್ತಿನೊಂದಿಗೆ ಮಧ್ಯಪ್ರದೇಶದ ಹೈಕೋರ್ಟ್ನ ಗ್ವಾಲಿಯರ್ ಪೀಠವು 18 ವರ್ಷದ ವಿದ್ಯಾರ್ಥಿಗೆ ಜಾಮೀನು ನೀಡಿದೆ.

ಸೋಷಿಯಲ್ ಮೀಡಿಯಾಗಳನ್ನು ಯುಪಿಎಸ್ಸಿ ಟಾಪರ್ ಗಳು ಎಷ್ಟು, ಯಾವ ರೀತಿ ಬಳಕೆ ಮಾಡುತ್ತಿದ್ದರು?
ಈಗ ಸೋಷಿಯಲ್ ಮೀಡಿಯಾಗಳದ್ದೇ ಜಮಾನ, ಸೋಷಿಯಲ್ ಮೀಡಿಯಾಗಳಿಗೆ ಮಾರು ಹೋಗದವರಿಲ್ಲ, ಅದರಿಂದ ದೂರವುಳಿಯುವವರು ಬೆರಳೆಣಿಕೆಯಲ್ಲಿರಬಹುದಷ್ಟೆ.

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಸಾಮಾಜಿಕ ಜಾಲತಾಣದಲ್ಲಿ ಬಿಎಸ್ ಎಫ್ 'ರೆಟ್ರೋ ಸ್ಟೈಲ್' ಅನಾವರಣ!
ಕೊರೋನಾ ಸಾಂಕ್ರಾಮಿಕ ನಡುವೆಯೇ ಭಾರತ ದೇಶ 74ನೇ ಸ್ವಾತಂತ್ರ್ಯ ದಿನೋತ್ಸವದ ಸಿದ್ಧತೆಯಲ್ಲಿ ತೊಡಗಿದ್ದು, ಈ ವಿಶೇಷ ದಿನದಂದು ಭಾರತೀಯ ಸೇನೆಯ ಪ್ರಮುಖ ವಿಭಾಗವಾಗಿರುವ ಗಡಿ ಭದ್ರತಾ ಪಡೆ (ಬಿಎಸ್ಎಫ್) ತನ್ನ ರೆಟ್ರೋ ಲುಕ್ ಅನಾವರಣಗೊಳಿಸುವುದಾಗಿ ಹೇಳಿದೆ.

