Shreyas Iyer

'ಸೋಲಿಗೆ ಹೆದರಬೇಡಿ': ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಯುವ ಆಟಗಾರರಿಗೆ ಶ್ರೇಯಸ್ ಅಯ್ಯರ್ ಸಂದೇಶ!
'ನಮ್ಮಲ್ಲಿ ಕೆಲವರು ಇಲ್ಲಿ ಮೊದಲ ಬಾರಿಗೆ ಆಡುತ್ತಿದ್ದಾರೆ. ಹಾಗಾಗಿ ನಾವು ಎಷ್ಟು ಬೇಗನೆ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುತ್ತೇವೆಯೋ, ಅಷ್ಟು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೇವೆ' ಎಂದು ಅಯ್ಯರ್ ಕರೆ ನೀಡಿದರು.

ಸೂರ್ಯಕುಮಾರ್ ಯಾದವ್‌ಗೆ ಭಾರತ T20 ತಂಡದ 'ಬಾಗಿಲು ತೆಗೆದಿದೆ' ಆದರೆ, ಷರತ್ತುಗಳು ಅನ್ವಯ: BCCI
ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು, ಒಂದು ವೇಳೆ ಅಲ್ಲಿ ನಿರೀಕ್ಷಿತ ಪ್ರದರ್ಶನ ಮೂಡಿಬರದಿದ್ದರೆ, ಆಯ್ಕೆಗಾರರು ಮತ್ತೆ ಸೂರ್ಯಕುಮಾರ್ ಯಾದವ್ ಅವರತ್ತ ಮುಖ ಮಾಡುವ ಸಾಧ್ಯತೆಯಿದೆ.
'ನಾಯಕತ್ವ ಕಳಪೆಯಾಗಿತ್ತೆಂದು ಭಾವಿಸಬೇಡಿ': ಶ್ರೇಯಸ್ ಅಯ್ಯರ್ ಪರ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಬ್ಯಾಟಿಂಗ್!
ಮುಂದಿನ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡಗಳ ಸಂಯೋಜನೆಯನ್ನು ಪರೀಕ್ಷಿಸುವ ಗುರಿಯೊಂದಿಗೆ ಸರಣಿಯನ್ನು ಆಡಿದೆ ಎಂದು ಮಾಜಿ ಅಂತಾರಾಷ್ಟ್ರೀಯ ಆಟಗಾರ ಹೇಳಿದರು.
'ಅದು ಫಾರ್ಮ್‌ಗೆ ಸಂಬಂಧಿಸಿದ್ದಲ್ಲ': ವೈಭವ್ ಸೂರ್ಯವಂಶಿ ಕೈಬಿಟ್ಟಿದ್ದರ ಅಸಲಿ ಕಾರಣ ತಿಳಿಸಿದ ಶ್ರೇಯಸ್ ಅಯ್ಯರ್!
ಇಂಗ್ಲೆಂಡ್‌ಗೆ ಬಂದು ಸರಣಿಯನ್ನು ಗೆಲ್ಲಬಹುದು ಎಂಬ ಮನಸ್ಥಿತಿಯನ್ನು ಮಾತ್ರ ಹೊಂದಿದ್ದರೆ ಸಾಲದು. ಕಠಿಣ ಪರಿಶ್ರಮ ಪಡಬೇಕು ಮತ್ತು ಏಕಾಗ್ರತೆಯಿಂದ ಇರಬೇಕು; ತಂಡವಾಗಿ ನಾವು ಹಾಗೆಯೇ ಇದ್ದೆವು ಎಂದರು.

England: ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಟೀಂ ಇಂಡಿಯಾ, 45 ನಿಮಿಷ ಕಾಲ ಪಂದ್ಯ ಮುಂದೂಡಿಕೆ!
ಟ್ರಾಫಿಕ್ ಜಾಮ್‌ನಿಂದಾಗಿ ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಕೂಡ ನಿಗದಿತ ಸಮಯಕ್ಕೆ ನಡೆಯದ ಪರಿಸ್ಥಿತಿ ಎದುರಾದರೆ, ಮೈದಾನದಲ್ಲಿ ಭಾರತ ಸತತ ಸೋಲುಗಳನ್ನು ಅನುಭವಿಸಿ ಟಿ20 ಸರಣಿಯನ್ನು ಗೆಲುವಿಲ್ಲದೆ ಮುಗಿಸಿದೆ.

'10 Snakes' ಪೋಸ್ಟ್ ಗೆ ಶ್ರೇಷ್ಠ ಅಯ್ಯರ್ ಲೈಕ್; ಭಾರಿ ವಿವಾದಕ್ಕೆ ಗುರಿಯಾದ ಶ್ರೇಯಸ್ ಅಯ್ಯರ್! ನೆಟ್ಟಿಗರು ತೀವ್ರ ಚರ್ಚೆ
ಶ್ರೇಯಸ್ ಅಯ್ಯರ್ ಕೇಂದ್ರೀಕರಿಸಿದ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಶ್ರೇಸ್ತಾ ಅಯ್ಯರ್ ಲೈಕ್ ಮಾಡಿರುವುದನ್ನು ನೆಟ್ಟಿಗರು ಗಮನಿಸಿದ ಬಳಿಕ ಆನ್‌ಲೈನ್ ನಲ್ಲಿ ಚರ್ಚೆ ಪ್ರಾರಂಭವಾಯಿತು.

ಬ್ಯಾಕ್ ಟು ಬ್ಯಾಕ್ ಸರಣಿ ಸೋಲು: ಕೋಚ್ Gautam Gambhir ರೆಕ್ಕೆಪುಕ್ಕ ಕಟ್? BCCI ಮಹತ್ವದ ರೀವ್ಯೂ ಮೀಟಿಂಗ್!
ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋಲು ವಿಶ್ವ ಚಾಂಪಿಯನ್ ಟೀಮ್ ಇಂಡಿಯಾ ಕಂಗೆಡುವಂತೆ ಮಾಡಿದ್ದು, ಆಟಗಾರರು ಮಾತ್ರವಲ್ಲ ತಂಡದ ಸಿಬ್ಬಂದಿ ವರ್ಗದ ಪ್ರದರ್ಶನದ ಪರಿಶೀಲನೆಗೆ ಬಿಸಿಸಿಐ ಮಹತ್ವದ ಸಭೆ ಕರೆದಿದೆ.

ಕೇವಲ ಎರಡ್ಮೂರು ಪಂದ್ಯಗಳಿಂದ ಯಾರನ್ನೂ ಅಳೆಯಬೇಡಿ: ಶ್ರೇಯಸ್ ಅಯ್ಯರ್ ಪರ ಎಬಿಡಿ ಬ್ಯಾಟಿಂಗ್!
ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಭಾರತ ಸತತ ನಾಲ್ಕು ಸೋಲುಗಳನ್ನು ಅನುಭವಿಸಿದ್ದು, ಅಯ್ಯರ್ ನಾಯಕತ್ವದಲ್ಲಿ ಭಾರತ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ.

'ಶ್ರೇಯಸ್ ಅಯ್ಯರ್ ತಮ್ಮ ಕೋಪವನ್ನು ಚಾನಲೈಸ್ ಮಾಡಬೇಕು': ತಂಡದ ಬ್ಯಾಟಿಂಗ್ ಸಂಕಷ್ಟ ನಿವಾರಣೆಗೆ ದಿನೇಶ್ ಕಾರ್ತಿಕ್ ಸಲಹೆ
ಭಾರತದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್, ಐಪಿಎಲ್ 2026ರಲ್ಲಿ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಪರ ಮಾಡಿದಂತೆ ಚೆನ್ನಾಗಿ ಬ್ಯಾಟಿಂಗ್ ಮಾಡಿದಾಗ ಮಾತ್ರ ಭಾರತ ತಂಡವು ವಿಭಿನ್ನವಾಗಿ ಕಾಣುತ್ತದೆ ಎಂದು ಹೇಳಿದರು.

