Reliance Jio

ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ಭಾರತದ ಉದ್ಯಮಿ ಮುಖೇಶ್ ಅಂಬಾನಿ
ಭಾರತದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 9 ಸ್ಥಾನ ಮೇಲಕ್ಕೆ ಜಿಗಿದಿದ್ದು, ಆ ಮೂಲಕ ಜಗತ್ತಿನ 5ನೇ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ಕಣ್ಣ ಮುಂದೆಯೇ ತೆರೆದುಕೊಳ್ಳಲಿದೆ 3ಡಿ ಜಗತ್ತು: ರಿಲಯನ್ಸ್ ನಿಂದ ಜಿಯೋ ಗ್ಲಾಸ್ ಬಿಡುಗಡೆ
ಕಣ್ಣ ಮುಂದೆಯೇ 3ಡಿ ಸಂವಹನ, ಹೊಲೊಗ್ರಾಫಿಕ್ ಗಳನ್ನು ವೀಕ್ಷಿಸುವ ಸಲುವಾಗಿ ರಿಲಯನ್ಸ್ ಸಂಸ್ಥೆ ಹೊಸದಾಗಿ ಜಿಯೀಗ್ಲಾಸ್ ಸಲಕರಣೆಯನ್ನು ಬಿಡುಗಡೆ ಮಾಡಿದೆ,

ಅಮೆರಿಕ ಸಂಸ್ಥೆಯಿಂದ 4,546 ಕೋಟಿ ರೂ ಹೂಡಿಕೆ; 1 ಲಕ್ಷ ಕೋಟಿ ರೂಗೆ ಏರಿಕೆಯಾದ ರಿಲಯನ್ಸ್ ಜಿಯೋ ಹೂಡಿಕೆ ಸಂಗ್ರಹಣೆ
ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಸಂಸ್ಥೆಯಲ್ಲಿ ಅಮೆರಿಕ ಸಂಸ್ಥೆಯೊಂದು 4,546 ಕೋಟಿ ರೂ ಹೂಡಿಕೆ ಮಾಡಿದೆ. ಆ ಮೂಲಕ ಸಂಸ್ಥೆಯ ಹೂಡಿಕೆ ಸಂಗ್ರಹಣೆ 1 ಲಕ್ಷ ಕೋಟಿ ರೂ ಗೆ ಏರಿಕೆಯಾಗಿದೆ.

ಮತ್ತೊಂದು ಬೊಂಬಾಟ್ ರೀಚಾರ್ಜ್ ಆಫರ್ ಪ್ರಕಟಿಸಿದ ಜಿಯೋ
ದೇಶದಲ್ಲಿ ಗರಿಷ್ಠ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ರಿಲಯನ್ಸ್ ಜಿಯೋ, ಜೂನ್ ತಿಂಗಳ ಸ್ಪೇಷಲ್ ರಿಚಾರ್ಜ್ ಪ್ಯಾಕ್ ಕೊಡುಗೆ ಪ್ರಕಟಿಸಿದೆ. ಬಳಕೆದಾರರಿಗೆ ಬೆಸ್ಟ್ ಆಫರ್ ನೀಡಲಿದ್ದು ಗರಿಷ್ಠ ಡೇಟಾ ಮತ್ತು ಕರೆ ಪ್ರಯೋಜನದೊಂದಿಗೆ ರಿಲಯನ್ಸ್ ಇತರೆ ಉತ್ಪನ್ನಗಳ ಲಾಭವನ್ನು ರೀಚಾರ್ಜ್ ಮಾಡಿಸಿಕೊಂಡವರು ಪಡೆಯಬಹುದಾಗಿದೆ.

ಜಿಯೋದಿಂದ ಗ್ರಾಹಕರಿಗೆ ಆಡಿಯೋ, ವೀಡಿಯೊ ವೈಫೈ ಕರೆ ಮಾಡುವ ಅವಕಾಶ
ತನ್ನ ಗ್ರಾಹಕರಿಗೆ ಇನ್ನಷ್ಟು ಉತ್ತಮ ಉತ್ಪನ್ನಗಳು ಮತ್ತು ಅನುಭವವನ್ನು ನೀಡಲು ಮುಂದಾಗಿರುವ ಜಿಯೋ, ಇಂದು ರಾಷ್ಟ್ರವ್ಯಾಪಿ ಆಡಿಯೋ ಮತ್ತು ವಿಡಿಯೋ ಓವರ್ ವೈ-ಫೈ ಸೇವೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದೆ.

ಹೊಸ ವರ್ಷಕ್ಕೆ ಮುನ್ನವೇ 'ಹ್ಯಾಪಿ ನ್ಯೂ ಇಯರ್' ಎಂದ ಜಿಯೋ ಗ್ರಾಹಕರಿಗೆ ಕೊಟ್ಟ ಕೊಡುಗೆ ಏನು ಗೊತ್ತಾ?
ಟೆಲಿಕಾಂ ಕ್ಷೇತ್ರದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸವರ್ಷಕ್ಕೆ '2020 ಹ್ಯಾಪಿ ನ್ಯೂ ಇಯರ್ ಆಫರ್' ಅನ್ನು ಬಿಡುಗಡೆ ಮಾಡಿದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು ಎರಡು ಬಗೆಯಲ್ಲಿ ಲಭ್ಯವಿದೆ. ಒಂದು ಜಿಯೋ ಫೋನ್ ಗ್ರಾಹಕರಿಗೆ ಮತ್ತು ಇನ್ನೊಂದು ಇತರ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ರೀಚಾರ್ಜ್ ಕೊಡುಗೆಯಾಗಿದೆ.

ಜಿಯೋ ಗ್ರಾಹಕರಿಗೆ ಕಹಿ ಸುದ್ದಿ! ಡಿ.6ರಿಂದ ಮೊಬೈಲ್ ಕರೆ, ಡೇಟಾ ಶುಲ್ಕದಲ್ಲಿ ಹೆಚ್ಚಳ
ಭಾರತೀಯರ ಅಚ್ಚುಮೆಚ್ಚಿನ ಮೊಬೈಲ್ ನೆಟ್ ವರ್ಕ್ ಗಳಲ್ಲಿ ಒಂದಾಗಿರುವ ರಿಲಯನ್ಸ್ ಜಿಯೋ ಇದೇ ಡಿಸೆಂಬರ್ 6ರಿಂಡ ಕರೆ ಹಾಗೂ ಡೇಟಾ ಬಳಕೆ ಶುಲ್ಕಗಳನ್ನು ಕಡಾ 40 ರಷ್ಟು ಹೆಚ್ಚಿಸಲಿದೆ. ಡಿಸೆಂಬರ್ 6 ರಿಂದ ಹೊಸ ಅನಿಯಮಿತ ಯೋಜನೆಗಳನ್ನು ಪ್ರಾರಂಭಿಸುವುದಾಗಿ ಹೇಳಿರುವ ಮೊಬೈಲ್ ಸೇವಾ ಸಂಸ್ಥೆ ಇದೀಗ ಶುಲ್ಕ ಹೆಚ್ಚಳದ ಮಾತುಗಳನ್ನು ಸಹ ಆಡಿದೆ.

ಆದಾಯದ ಮಾರುಕಟ್ಟೆ ಪಾಲು ಹೆಚ್ಚಿಸಿಕೊಂಡ ಜಿಯೋ
ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್ ತನ್ನ ಆದಾಯದ ಮಾರುಕಟ್ಟೆ ಪಾಲನ್ನು(ರೆವೆನ್ಯೂ ಮಾರ್ಕೆಟ್ ಶೇರ್, RMS) ಬಲಪಡಿಸಿಕೊಂಡಿದ್ದು, ಈ ಅಂಕದಲ್ಲಿ...

ದೇಶ 2ಜಿ-ಮುಕ್ತವಾದರೆ ಮಾತ್ರ ‘ಡಿಜಿಟಲ್ ಇಂಡಿಯಾ’ ನಿರ್ಮಾಣ ಸಾಧ್ಯ: ರಿಯಲನ್ಸ್ ಜಿಯೋ
ಭಾರತ ವಿಶ್ವದ ಅತಿದೊಡ್ಡ ಡೇಟಾ-ಮಾರುಕಟ್ಟೆಯಾಗಿ ಬೆಳೆಯುವುದನ್ನು ಜಿಯೋ ಸಾಧ್ಯವಾಗಿಸಿದ್ದು, 2016ರಲ್ಲಿ ತಿಂಗಳಿಗೆ 20 ಕೋಟಿ ಜಿಬಿಯಷ್ಟಿದ್ದ ನಮ್ಮ ಡೇಟಾ ಬಳಕೆ ಇದೀಗ ತಿಂಗಳಿಗೆ 600 ಕೋಟಿ ಜಿಬಿಗೆ ಹೆಚ್ಚಿದೆ ಎಂದು ರಿಯಲನ್ಸ್ ಜಿಯೋ ತಿಳಿಸಿದೆ.

