ಜಿಯೋದಿಂದ ಗ್ರಾಹಕರಿಗೆ ಆಡಿಯೋ, ವೀಡಿಯೊ ವೈಫೈ ಕರೆ ಮಾಡುವ ಅವಕಾಶ
ತನ್ನ ಗ್ರಾಹಕರಿಗೆ ಇನ್ನಷ್ಟು ಉತ್ತಮ ಉತ್ಪನ್ನಗಳು ಮತ್ತು ಅನುಭವವನ್ನು ನೀಡಲು ಮುಂದಾಗಿರುವ ಜಿಯೋ, ಇಂದು ರಾಷ್ಟ್ರವ್ಯಾಪಿ ಆಡಿಯೋ ಮತ್ತು ವಿಡಿಯೋ ಓವರ್ ವೈ-ಫೈ ಸೇವೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದೆ.

ಮುಂಬೈ: ತನ್ನ ಗ್ರಾಹಕರಿಗೆ ಇನ್ನಷ್ಟು ಉತ್ತಮ ಉತ್ಪನ್ನಗಳು ಮತ್ತು ಅನುಭವವನ್ನು ನೀಡಲು ಮುಂದಾಗಿರುವ ರಿಲಯನ್ಸ್ ಜಿಯೋ, ಇಂದು ರಾಷ್ಟ್ರವ್ಯಾಪಿ ಆಡಿಯೋ ಮತ್ತು ವಿಡಿಯೋ ಓವರ್ ವೈ-ಫೈ ಸೇವೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದೆ.
ಪ್ರಾರಂಭದಲ್ಲಿಯೇ ಪ್ರತಿಯೊಬ್ಬ ಗ್ರಾಹಕರಿಗೆ ಉತ್ತಮವಾದ ಅನುಭವವನ್ನು ಒದಗಿಸಲು ಜಿಯೋ ಕಳೆದ ಕೆಲವು ತಿಂಗಳುಗಳಿಂದ ಈ ಸೇವೆಯನ್ನು ಪರೀಕ್ಷಿಸುತಿತ್ತು. ಇದೀಗ ಆಡಿಯೋ, ವಿಡಿಯೋ ಕರೆ ಮಾಡುವ ಸೇವೆಗೆ ಚಾಲನೆ ನೀಡಿದ್ದು, ಗ್ರಾಹಕರು ಜಿಯೊ ವೈಫೈ ಕರೆ ಮಾಡಲು ಯಾವುದೇ ವೈ-ಫೈ ಸಂಪರ್ಕ ಜಾಲವನ್ನೂ ಬಳಸಬಹುದು.
ಆಡಿಯೋ ಮತ್ತು ವಿಡಿಯೊ ಕರೆಗಳು VoLTE ಮತ್ತು Wi-Fi ನಡುವೆ ಬದಲಾಗಲಿವೆ. ಜಿಯೋ ವೈ-ಫೈ ಕರೆ ಚಾಲನೆಗೊಳಿಸಲು, Jio.com/wificalling ನಲ್ಲಿ ವಿವರಗಳಿವೆ. ಇದೇ 16ರ ಒಳಗೆ ದೇಶದಾದ್ಯಂತ ಈ ಸೇವೆ ವಿಸ್ತರಣೆಯಾಗಲಿದೆ ಎಂದು ಕಂಪನಿ ತಿಳಿಸಿದೆ.
ವೈಫೈ ಮೂಲಕ ಸ್ಪಷ್ಟವಾದ ವಾಯ್ಸ್ ಮತ್ತು ವಿಡಿಯೊ ಕರೆ ಸಾಧ್ಯವಾಗಲಿದ್ದು ಇದಕ್ಕಾಗಿ ಹೆಚ್ಚಿನ ಶುಲ್ಕ ತೆರಬೇಕಾಗಿಲ್ಲ ಎಂದು ಜಿಯೊ ಭರವಸೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


