Rashmika Mandanna

ದೇಶ 10 ವರ್ಷಗಳಲ್ಲಿ ಏನೆಲ್ಲಾ ಬದಲಾಗಿದೆ: ಪ್ರಧಾನಿ ನರೇಂದ್ರ ಮೋದಿ ಹೊಗಳಿದ 'ಕಿರಿಕ್' ಬ್ಯೂಟಿ ರಶ್ಮಿಕಾ!
ನಟಿ ರಶ್ಮಿಕಾ ಮಂದಣ್ಣ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದ್ದಾರೆ. ಯುವ ಭಾರತ ವೇಗವಾಗಿ ಬೆಳೆಯುತ್ತಿದೆ. ಭಾರತವು ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ನಟನೆಯ 'ಸಿಕಂದರ್'ಗೆ ನಟಿ ರಶ್ಮಿಕಾ ಮಂದಣ್ಣ ಎಂಟ್ರಿ; ಚಿತ್ರತಂಡದಿಂದ ಅಧಿಕೃತ ಘೋಷಣೆ
ಸಲ್ಮಾನ್ ಖಾನ್ ನಟನೆಯ ಸಿಕಂದರ್ ಚಿತ್ರತಂಡಕ್ಕೆ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಸೇರ್ಪಡೆಯಾಗಿದ್ದಾರೆ ಎಂದು ಚಿತ್ರತಂಡ ಗುರುವಾರ ಘೋಷಿಸಿದೆ. ಈ ಚಿತ್ರವು ಇವರಿಬ್ಬರ ಮೊದಲ ಸಹಯೋಗವಾಗಿದೆ. ಗಜಿನಿ (2008) ಮತ್ತು ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ (2014) ಚಿತ್ರಗಳಿಗೆ ಹೆಸರಾದ ಎಆರ್ ಮುರುಗದಾಸ್ ನಿರ್ದೇಶನದ ಸಿಕಂದರ್ ಚಿತ್ರ ಮುಂದಿನ ವರ್ಷ ಈದ್‌ನಲ್ಲಿ ಬಿಡುಗಡೆಯಾಗಲಿದೆ.

ಪುಷ್ಪ ಪುಷ್ಪ ಕನ್ನಡ ಲಿರಿಕಲ್ ವಿಡಿಯೋ ಸಾಂಗ್

ಪುನೀತ್ ರಾಜ್‌ಕುಮಾರ್- ರಶ್ಮಿಕಾ ಮಂದಣ್ಣ ಅಭಿನಯದ 'ಅಂಜನಿ ಪುತ್ರ' ರೀರಿಲೀಸ್!
ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗಳು ರಿಲೀಸ್ ಆಗುತ್ತಿವೆ. ಪುನೀತ್ ಅವರ ಜನ್ಮದಿನದಂದು ಜಾಕಿ ಸಿನಿಮಾ ದೊಡ್ಡ ಪರದೆ ಮೇಲೆ ಮತ್ತೊಮ್ಮೆ ತೆರೆಕಂಡಿತ್ತು. ಇದೀಗ ಪುನೀತ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅಂಜನಿ ಪುತ್ರ ಸಿನಿಮಾ ಮತ್ತೊಮ್ಮೆ ಬಿಡುಗಡೆಗೆ ಸಜ್ಜಾಗಿದ್ದು, ಮೇ 10 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಚಿತ್ರದ ಟೀಸರ್
ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಚಿತ್ರ ಪುಷ್ಪ-2 ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ನಟ ಅಲ್ಲು ಅರ್ಜುನ್ ರ ಜನ್ಮದಿನದ ನಿಮಿತ್ತ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಚಿತ್ರದ ಮೇಲಿನ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ.

ರಶ್ಮಿಕಾ ಮಂದಣ್ಣಗೆ 28 ನೇ ಹುಟ್ಟುಹಬ್ಬ: ಪುಷ್ಪ 2, ದಿ ಗರ್ಲ್ ಫ್ರೆಂಡ್ ಚಿತ್ರಗಳ ಫಸ್ಟ್ ಲುಕ್ ಪೋಸ್ಟರ್ ಅನಾವರಣ
ನ್ಯಾಷನಲ್ ಕ್ರಷ್' ರಶ್ಮಿಕಾ ಮಂದಣ್ಣ ಅವರಿಗೆ 28ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿನಯದ ಪುಷ್ಪ 2 ಹಾಗೂ ದಿ ಗರ್ಲ್ ಫ್ರೆಂಡ್ ಚಿತ್ರದ ಫಸ್ಟ್ ಲುಕ್ ಫೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿದೆ.

ನಮಗೆ ಸ್ಮೃತಿ ಮಂದಾನ ಬೇಕೇ ಹೊರತು ರಶ್ಮಿಕಾ ಮಂದಣ್ಣ ಅಲ್ಲ: RCB ಮ್ಯಾನೇಜ್ಮೆಂಟ್ ವಿರುದ್ಧ ಅಭಿಮಾನಿಗಳು ಗರಂ
15 ವರ್ಷಗಳಿಂದ ಈ ಸಲ ಕಪ್ ನಮ್ದೆ, ಈ ಸಲ ಕಪ್ ನಮ್ದೆ ಎಂದು ಹೇಳಿಕೊಂಡು ಬರುತ್ತಿದ್ದ RCB ಅಭಿಮಾನಿಗಳಿಗೆ ಆರ್ ಸಿಬಿ ವನಿತೆಯರ ತಂಡ ಚೊಚ್ಚಲ ಕಪ್ ಗೆದ್ದು ಎಲ್ಲರ ಮುಂದೆ ಕಾಲರ್ ಎತ್ತಿಕೊಂಡು ಓಡಾಡುವಂತೆ ಮಾಡಿದೆ ಎಂದರೆ ಅತಿಶಯೋಕ್ತಿ ಅಲ್ಲ.

ರಶ್ಮಿಕಾ ಮಂದಣ್ಣ ಸಂಚರಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ, ಪ್ರಾಣಾಪಾಯದಿಂದ ಪಾರು
ಬಹುಭಾಷಾ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಸಂಚರಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ ಮಾಡಿದ್ದು, ಕೂದಲೆಳೆ ಅಂತರದಲ್ಲಿ ನಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವೀಡಿಯೋ: ಆರೋಪಿ ಬಂಧನ!
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

