ಸಲ್ಮಾನ್ ಖಾನ್ ನಟನೆಯ 'ಸಿಕಂದರ್'ಗೆ ನಟಿ ರಶ್ಮಿಕಾ ಮಂದಣ್ಣ ಎಂಟ್ರಿ; ಚಿತ್ರತಂಡದಿಂದ ಅಧಿಕೃತ ಘೋಷಣೆ
ಸಲ್ಮಾನ್ ಖಾನ್ ನಟನೆಯ ಸಿಕಂದರ್ ಚಿತ್ರತಂಡಕ್ಕೆ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಸೇರ್ಪಡೆಯಾಗಿದ್ದಾರೆ ಎಂದು ಚಿತ್ರತಂಡ ಗುರುವಾರ ಘೋಷಿಸಿದೆ. ಈ ಚಿತ್ರವು ಇವರಿಬ್ಬರ ಮೊದಲ ಸಹಯೋಗವಾಗಿದೆ. ಗಜಿನಿ (2008) ಮತ್ತು ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ (2014) ಚಿತ್ರಗಳಿಗೆ ಹೆಸರಾದ ಎಆರ್ ಮುರುಗದಾಸ್ ನಿರ್ದೇಶನದ ಸಿಕಂದರ್ ಚಿತ್ರ ಮುಂದಿನ ವರ್ಷ ಈದ್‌ನಲ್ಲಿ ಬಿಡುಗಡೆಯಾಗಲಿದೆ.

ಸಲ್ಮಾನ್ ಖಾನ್ ನಟನೆಯ ಸಿಕಂದರ್ ಚಿತ್ರತಂಡಕ್ಕೆ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಸೇರ್ಪಡೆಯಾಗಿದ್ದಾರೆ ಎಂದು ಚಿತ್ರತಂಡ ಗುರುವಾರ ಘೋಷಿಸಿದೆ. ಈ ಚಿತ್ರವು ಇವರಿಬ್ಬರ ಮೊದಲ ಸಹಯೋಗವಾಗಿದೆ. ಗಜಿನಿ (2008) ಮತ್ತು ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ (2014) ಚಿತ್ರಗಳಿಗೆ ಹೆಸರಾದ ಎಆರ್ ಮುರುಗದಾಸ್ ನಿರ್ದೇಶನದ ಸಿಕಂದರ್ ಚಿತ್ರ ಮುಂದಿನ ವರ್ಷ ಈದ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಸಾಜಿದ್ ನಾಡಿಯಾದ್ವಾಲಾ ಬಂಡವಾಳ ಹೂಡಿದ್ದಾರೆ.
ಈ ಕುರಿತು ಪ್ರೊಡಕ್ಷನ್ ಹೌಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, 'ಸಿಕಂದರ್‌ನಲ್ಲಿ ನಟ ಸಲ್ಮಾನ್ ಖಾನ್ ಅವರಿಗೆ ಜೋಡಿಯಾಗಿ ನಟಿಸಲು ಅಸಾಧಾರಣ ಪ್ರತಿಭೆ ನಟಿ ರಶ್ಮಿಕಾ ಮಂದಣ್ಣ ಅವರನ್ನು ಸ್ವಾಗತಿಸುತ್ತೇನೆ! ಮುಂದಿನ ವರ್ಷ ಈದ್ ವೇಳೆಗೆ ಅವರ ಆನ್-ಸ್ಕ್ರೀನ್ ಜೋಡಿ ತೆರೆಮೇಲೆ ಮ್ಯಾಜಿಕ್ ಮಾಡಲಿದೆ. ಎಆರ್ ಮುರುಗದಾಸ್ ನಿರ್ದೇಶನದ ಸಾಜಿದ್ ನಾಡಿಯಾದ್ವಾಲಾ ನಿರ್ಮಾಣದ ಸಿಕಂದರ್ 2025ರ ಈದ್ ವೇಳೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ' ಎಂದಿದೆ.
ಈ ಹಿಂದೆ ಸಂಗೀತ ನಿರ್ದೇಶಕ ಪ್ರೀತಮ್ ಈ ಯೋಜನೆಗೆ ಸೇರ್ಪಡೆಯಾಗಿದ್ದಾರೆ ಎಂದು ಘೋಷಿಸಲಾಗಿತ್ತು.
ರಶ್ಮಿಕಾ ಕೊನೆಯದಾಗಿ ರಣಬೀರ್ ಕಪೂರ್ ಅವರ ಅನಿಮಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿಕಂದರ್ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶಕ ಎಆರ್ ಮುರುಗದಾಸ್ ಮತ್ತು ನಟ ಸಲ್ಮಾನ್ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಸಲ್ಮಾನ್ ನಟನೆಯ 2014 ರ ಜೈ ಹೋ ಚಿತ್ರದ ಕಥೆಯನ್ನು ಮುರುಗದಾಸ್ ಬರೆದಿದ್ದರು ಮತ್ತು ಇದು 2006 ರ ತೆಲುಗು ಚಿತ್ರ ಸ್ಟಾಲಿನ್ ಅನ್ನು ಆಧರಿಸಿದೆ. ಮನೀಶ್ ಶರ್ಮಾ ನಿರ್ದೇಶನದ ಟೈಗರ್ 3 ಚಿತ್ರದಲ್ಲಿ ಸಲ್ಮಾನ್ ಕೊನೆಯದಾಗಿ ಕಾಣಿಸಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


