ಕ್ರಿಕೆಟ್

ನಮಗೆ ಸ್ಮೃತಿ ಮಂದಾನ ಬೇಕೇ ಹೊರತು ರಶ್ಮಿಕಾ ಮಂದಣ್ಣ ಅಲ್ಲ: RCB ಮ್ಯಾನೇಜ್​ಮೆಂಟ್ ವಿರುದ್ಧ ಅಭಿಮಾನಿಗಳು ಗರಂ

15 ವರ್ಷಗಳಿಂದ ಈ ಸಲ ಕಪ್ ನಮ್ದೆ, ಈ ಸಲ ಕಪ್ ನಮ್ದೆ ಎಂದು ಹೇಳಿಕೊಂಡು ಬರುತ್ತಿದ್ದ RCB ಅಭಿಮಾನಿಗಳಿಗೆ ಆರ್ ಸಿಬಿ ವನಿತೆಯರ ತಂಡ ಚೊಚ್ಚಲ ಕಪ್ ಗೆದ್ದು ಎಲ್ಲರ ಮುಂದೆ ಕಾಲರ್ ಎತ್ತಿಕೊಂಡು ಓಡಾಡುವಂತೆ ಮಾಡಿದೆ ಎಂದರೆ ಅತಿಶಯೋಕ್ತಿ ಅಲ್ಲ.

ನಮಗೆ ಸ್ಮೃತಿ ಮಂದಾನ ಬೇಕೇ ಹೊರತು ರಶ್ಮಿಕಾ ಮಂದಣ್ಣ ಅಲ್ಲ: RCB ಮ್ಯಾನೇಜ್​ಮೆಂಟ್ ವಿರುದ್ಧ ಅಭಿಮಾನಿಗಳು ಗರಂ
ಸ್ಮೃತಿ ಮಂದಾನ-ರಶ್ಮಿಕಾ ಮಂದಣ್ಣ
Published On :

15 ವರ್ಷಗಳಿಂದ ಈ ಸಲ ಕಪ್ ನಮ್ದೆ, ಈ ಸಲ ಕಪ್ ನಮ್ದೆ ಎಂದು ಹೇಳಿಕೊಂಡು ಬರುತ್ತಿದ್ದ RCB ಅಭಿಮಾನಿಗಳಿಗೆ ಆರ್ ಸಿಬಿ ವನಿತೆಯರ ತಂಡ ಚೊಚ್ಚಲ ಕಪ್ ಗೆದ್ದು ಎಲ್ಲರ ಮುಂದೆ ಕಾಲರ್ ಎತ್ತಿಕೊಂಡು ಓಡಾಡುವಂತೆ ಮಾಡಿದೆ ಎಂದರೆ ಅತಿಶಯೋಕ್ತಿ ಅಲ್ಲ.

ಆದರೆ ಈ ಮಧ್ಯೆ ಆರ್ ಸಿಬಿ ಫ್ರಾಂಚೈಸಿಯ ಒಂದು ನಡೆ ಇದೀಗ ಅಭಿಮಾನಿಗಳು ಕೆರಳುವಂತೆ ಮಾಡಿದೆ. ಹೌದು ಅದಕ್ಕೆ ಕಾರಣವಾಗಿರುವುದು ನಟಿ ರಶ್ಮಿಕಾ ಮಂದಣ್ಣ. ತುಂಬಾ ವರ್ಷಗಳಿಂದ ಅಭಿಮಾನಿಗಳು ಆರ್ ಸಿಬಿ ಹೆಸರನ್ನು ಬದಲಿಸುವಂತೆ ಒತ್ತಾಯಿಸುತ್ತಾ ಬಂದಿದ್ದರು. ಅದಕ್ಕೆ ಪ್ರತಿಯಾಗಿ ಫ್ರಾಂಚೈಸಿ ಸಹ ಇದೀಗ ಇಂಗ್ಲಿಷ್ ನಲ್ಲಿ (Royal Challengers Bangalore) ಬದಲಿಗೆ (Royal Challengers Bengaluru) ಮಾಡಲು ಉದ್ದೇಶಿಸಿದೆ.

ಅದರಂತೆ ಐಪಿಎಲ್​ ಆರಂಭಕ್ಕೂ ಮುನ್ನ ಅನೇಕ ಸೆಲೆಬ್ರಿಟಿಗಳ ಜೊತೆ ಆರ್​ಸಿಬಿ ಸಹಯೋಗ ಮಾಡಿಕೊಂಡಿದೆ. ರಶ್ಮಿಕಾ ಮಂದಣ್ಣ ಜೊತೆ RCB ಮ್ಯಾನೇಜ್​ಮೆಂಟ್​ ಕೈ ಜೋಡಿಸಿರುವುದಕ್ಕೆ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಇದು ಆರ್​ಸಿಬಿ ತೆಗೆದುಕೊಂಡ ಅತಿ ಕೆಟ್ಟ ನಿರ್ಧಾರ ಎಂದು ಅಭಿಮಾನಿಗಳು ಗರಂ ಆಗಿದ್ದಾರೆ.

ಆರ್​ಸಿಬಿ ಅನ್​ಬಾಕ್ಸ್ ವಿಡಿಯೋದಲ್ಲಿ ಈಗಾಗಲೇ ನಟರಾದ ಶಿವರಾಜ್​ಕುಮಾರ್​, ರಿಷಬ್​ ಶೆಟ್ಟಿ, ಕಿಚ್ಚ ಸುದೀಪ್​ ಮುಂತಾದ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ. ಪ್ರೋಮೋದಲ್ಲಿ ಈ ಎಲ್ಲಾ ನಟರು ಹೆಸರು ಬದಲಾವಣೆಯ ಕುರಿತು ಹಿಂಟ್ ನೀಡುತ್ತಿದ್ದಾರೆ. ಅಂತೆ ರಶ್ಮಿಕಾ ಮಂದಣ್ಣ ಸಹ ಅನ್​ಬಾಕ್ಸ್​ ವಿಡಿಯೋದಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕಕ್ಕೆ ಸ್ಮೃತಿ ಮಂಧಾನ ಬೇಕೇ ಹೊರತು ರಶ್ಮಿಕಾ ಮಂದಣ್ಣ ಅಲ್ಲ ಎಂದು ಕೂಡ ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಅಷ್ಟು ಒಳ್ಳೆಯ ಮನುಷ್ಯರ ಮಧ್ಯೆ ಈ ಕಹಿ ಯಾಕೆ ಎಂದು ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.