ಕ್ರಿಕೆಟ್

RCB ಹೆಸರು ಬದಲಾಗುತ್ತಾ? ವದಂತಿಗಳಿಗೆ ತೆರೆ ಎಳೆದ ಫ್ರಾಂಚೈಸಿ ಅಧ್ಯಕ್ಷ ಆರ್ಯಮನ್ ಬಿರ್ಲಾ!

IPL ಫ್ರಾಂಚೈಸಿಯ ಕಾರ್ಪೊರೇಟ್ ಪುನರ್‌ರಚನೆಯಿಂದಾಗಿ ಹೊಸ ನಾಯಕತ್ವ ಬಂದ ಹಿನ್ನೆಲೆಯಲ್ಲಿ ತಂಡದ ಹೆಸರು ಹಾಗೂ ಬ್ರ್ಯಾಂಡ್ ಬದಲಾಗಬಹುದು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದ್ದವು.

RCB ಹೆಸರು ಬದಲಾಗುತ್ತಾ? ವದಂತಿಗಳಿಗೆ ತೆರೆ ಎಳೆದ ಫ್ರಾಂಚೈಸಿ ಅಧ್ಯಕ್ಷ  ಆರ್ಯಮನ್ ಬಿರ್ಲಾ!
ವಿರಾಟ್ ಕೊಹ್ಲಿ
Published On :

ಆರ್ ಸಿಬಿ ಮಾಲೀಕರ ಬದಲಾವಣೆಯಿಂದಾಗಿ ತಂಡದ ಹೆಸರು ಕೂಡಾ ಬದಲಾಗಲಿದೆ ಎಂಬ ಮಾತುಗಳು ಕೆಲವು ದಿನಗಳಿಂದ ಕೇಳಿಬರುತ್ತಿದೆ.

IPL ಫ್ರಾಂಚೈಸಿಯ ಕಾರ್ಪೊರೇಟ್ ಪುನರ್‌ರಚನೆಯಿಂದಾಗಿ ಹೊಸ ನಾಯಕತ್ವ ಬಂದ ಹಿನ್ನೆಲೆಯಲ್ಲಿ ತಂಡದ ಹೆಸರು ಹಾಗೂ ಬ್ರ್ಯಾಂಡ್ ಬದಲಾಗಬಹುದು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದ್ದವು.

ಆದರೆ ಇದೀಗ ಆ ಎಲ್ಲ ಊಹಾಪೋಹಗಳಿಗೆ ಫ್ರಾಂಚೈಸಿ ಅಧ್ಯಕ್ಷರಾದ ಆರ್ಯಮನ್ ಬಿರ್ಲಾಶನಿವಾರ ತೆರೆ ಎಳೆದಿದ್ದಾರೆ. ಯಾವುದೇ ಕಾರಣಕ್ಕೂ ತಂಡದ ಹೆಸರು ಬದಲಾಗುವುದಿಲ್ಲ. ಇದು ದೊಡ್ಡ ಬ್ರ್ಯಾಂಡ್, ನಮಗೆ ಈ ಹೆಸರು ತುಂಬಾ ಇಷ್ಟ ಎಂದಿದ್ದಾರೆ.

ಇಂದಿನ ಫ್ರಾಂಚೈಸಿ ಕ್ರೀಡೆಗಳ ಜಗತ್ತಿನಲ್ಲಿ ಆರ್ ಸಿಬಿ ಹೆಸರು ಬದಲಾವಣೆ ಗೊಂದಲ ಮುಂದುವರೆದರೆ ಆರ್ಥಿಕವಾಗಿ ಹೆಚ್ಚು ಹಾನಿಯಾಗಬಹುದು. ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಬ್ರಾಂಡ್ ನೊಂದಿಗೆ ಆರ್‌ಸಿಬಿ ವರ್ಷದಿಂದ ವರ್ಷಕ್ಕೆ ಏಷ್ಯನ್ ಕ್ರೀಡೆಯಲ್ಲಿ ಕಮರ್ಷಿಯಲ್ ಆಗಿ ಹೆಚ್ಚಿನ ಮನ್ನಣೆ ಪಡೆದಿದೆ. ಜಾಗತಿಕ ಕಮರ್ಷಿಯಲ್ ಅಂಕಿಅಂಶಗಳು ಮತ್ತು ಡಿಜಿಟಲ್ ಇಂಪ್ರೆಶನ್‌ಗಳು, ಯೂಟ್ಯೂಬ್ ವೀಕ್ಷಣೆ ಸಂಖ್ಯೆಗಳೆರಡರಲ್ಲೂ ಪ್ರತಿಸ್ಪರ್ಧಿ ಕ್ರೀಡಾ ಫ್ರಾಂಚೈಸಿಗಳನ್ನು ಮೀರಿಸುತ್ತದೆ. ಹಾಗಾಗೀ ಬ್ರ್ಯಾಂಡ್ ನಿರಂತರತೆಯು ಉದ್ಯಮ ಮೌಲ್ಯಮಾಪನವನ್ನು ಹೆಚ್ಚಿಸುತ್ತದೆ ಎಂದು ಬಿರ್ಲಾ ಅರ್ಥಮಾಡಿಕೊಂಡಿದ್ದಾರೆ.

ಐತಿಹಾಸಿಕ ಹೆಸರನ್ನು ಹಾಗೆಯೇ ಇಟ್ಟುಕೊಳ್ಳುವುದರಿಂದ ಲಾಭದಾಯಕ ಕಮರ್ಷಿಯಲ್ ಪಾಲುದಾರಿಕೆಗಳನ್ನು ರಕ್ಷಿಸುತ್ತದೆ. ಅಲ್ಲದೇ ಫ್ರಾಂಚೈಸ್ ತನ್ನ ಅಭಿಮಾನಿಗಳೊಂದಿಗೆ ಹೊಂದಿರುವ ಬಾಂಧವ್ಯ ಆಳವಾಗಿದೆ. ಸ್ಥಳೀಯ ಕನ್ನಡ ಭಾವನೆಗೆ ಗೌರವ ಸಲ್ಲಿಸಲು (2024 ರಲ್ಲಿ) "Bangalore"ನಿಂದ "ಬೆಂಗಳೂರು" ಎಂದು ಈಗಾಗಲೇ ಮರುಬ್ರಾಂಡ್ ಮಾಡಲಾಗಿದ್ದು, ನಗರದ ಕ್ರೀಡಾಸಕ್ತರಲ್ಲಿ ಈಗಾಗಲೇ ತನ್ನ ಹೆಸರನ್ನು ನೆಲೆಗೊಳಿಸಿಕೊಂಡಿದೆ.

ಪ್ರತಿ ಬಾರಿಯೂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವ ಲಕ್ಷಾಂತರ ಅಭಿಮಾನಿಗಳ ಮಾತು ಒಂದೇ ಮಾತು 'ಆರ್ ಸಿಬಿ' ಆಗಿರುತ್ತದೆ. ಬೆಂಗಳೂರು ತಂಡವನ್ನು ಎಲ್ಲಾ ಕಷ್ಟಗಳ ನಡುವೆಯೂ ಬೆಂಬಲಿಸುವ ಉತ್ಸಾಹಭರಿತ ಅಭಿಮಾನಿಗಳ ಗುಂಪನ್ನು ಹೊಂದಿದೆ. ಹೀಗಾಗಿ ಹೆಸರನ್ನು ಬದಲಾಯಿಸಲು ನಿರಾಕರಿಸುವ ಮೂಲಕ, ಬಿರ್ಲಾ ಅಭಿಮಾನಿಗಳ ಮನಸ್ಥಿತಿಯನ್ನು ಗೌರವಿಸುವ ನಿರ್ಧಾರ ಘೋಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.