quarantine

ಬೆಂಗಳೂರು: ಕ್ವಾರಂಟೈನ್ ತಪ್ಪಿಸಿಕೊಳ್ಳಬೇಕೆ? ಹೊಸ ದಂಧೆಯ ಬಲೆಗೆ ಬಿದ್ದು ಮೋಸ ಹೋಗಬೇಡಿ!
ಇತ್ತೀಚೆಗೆ ದಂಪತಿಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಭ್ರಷ್ಟಾಚಾರವನ್ನು ಬಯಲಿಗೆ ತಂದಿದ್ದರು. ಗಾಂಧಿ ನಗರದ ಹೊಟೇಲ್ ವೊಂದರಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದ ದಂಪತಿ ಬಳಿ ಬಂದ ವ್ಯಕ್ತಿ ತಾನು ವೈದ್ಯ ಎಂದು ಹೇಳಿಕೊಂಡು, ಮೆಡಿಕಲ್ ಟೆಸ್ಟ್ ನಿಂದ ಬಚಾವು ಮಾಡುತ್ತೇನೆ 25 ಸಾವಿರ ರು. ಕೊಡಿ ಎಂದು ಹೇಳಿದ್ದಾನೆ.

ಕ್ವಾರಂಟೈನ್ ನಿಯಮಗಳ ಬಗ್ಗೆ ಸರ್ಕಾರದ ಬಳಿಯೇ ಸ್ಪಷ್ಟ ಮಾಹಿತಿಯಿಲ್ಲ!
ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಂಕಿತರನ್ನು ಕ್ವಾರಂಟೈನ್ ನಲ್ಲಿರಿಸುವ ನಿಯಮಗಳ ಬಗ್ಗೆ ಸರ್ಕಾರ ಬಳಿಯೇ ಸ್ಪಷ್ಟ ಮಾಹಿತಿಗಳಿಲ್ಲ ಎಂಬುದು ಇದೀಗ ತಿಳಿದುಬಂದಿದೆ.

ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್'ನಲ್ಲಿರಿಸಿ ಕ್ಯಾರೇ ಎನ್ನದ ಅಧಿಕಾರಿಗಳು: ಬಿಬಿಎಂಪಿ ಎಡವಟ್ಟು ಬಹಿರಂಗ
ಹೊರ ರಾಜ್ಯದಿಂದ ಬಂದ ಜನರನ್ನು ಹೋಟೆಲ್ ಗಳಲ್ಲಿ ಕ್ವಾರಂಟೈನ್ ನಲ್ಲಿರಿಸಿ, 2-3 ದಿನಗಳಾದರೂ ಆರೋಗ್ಯ ತಪಾಸಣೆ ನಡೆಸದೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಕ್ವಾರಂಟೈನ್ ಭಯ: ಬಾಗಲಕೋಟೆ ವ್ಯಕ್ತಿ ಆತ್ಮಹತ್ಯೆಗೆ ಯತ್ನ
ಎರಡು ವಾರಗಳ ಕಾಲ ಕ್ವಾರಂಟೈನ್ ನಲ್ಲಿರಬೇಕೆಂಬ ಭಯದಿಂದಾಗಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಚಿಕ್ಕೂರು ಗ್ರಾಮದಲ್ಲಿ ನಡೆದಿದೆ.

ಹೊರರಾಜ್ಯದಿಂದ ಬಂದವರಿಗೆ ಕಡ್ಡಾಯ ಕ್ವಾರಂಟೈನ್, ಮಹಾನಗರ ವಾಸಿಗಳ ಆರೋಗ್ಯ ತಪಾಸಣೆ: ಬಿಬಿಎಂಪಿ ಮಹತ್ವದ ತೀರ್ಮಾನ
ಕೊರೋನಾ ತಡೆಗಟ್ತುವ ಸಲುವಾಗಿ ಹೊರರಾಜ್ಯಗಳಿಂದ ಬೆಂಗಲೂರಿಗೆ ಆಗಮಿಸುವವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಲಾಗುತ್ತದೆ ಎಂದು ಬಿಬಿಎಂಪಿ ಮತ್ತೊಮ್ಮೆ ಪುನರುಚ್ಚರಿಸಿದೆ. ಕೊರೋನಾ ತಡೆಗೆ ಗೊಳ್ಳಲಾಗುವ ಕ್ರಮಗಳ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಬಿಎಂಪಿ ಸರ್ಕಾರದ ಸೂಚನೆಯ ಮೇರೆಗೆ ಬಿಬಿಎಂಪಿ ವ್ಯಾಪ್ತಿಗೆ ಬರುವ ಎಲ್ಲಾ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲಾ

ಮಾಹಿತಿ ಕೊರತೆಯಿಂದ ಕ್ವಾರಂಟೈನ್ ಗೊಂದಲ; ಹಿಂದಿರುಗಲು ಬಯಸಿದವರಿಗೆ ರೈಲು ವ್ಯವಸ್ಥೆ; ಸುರೇಶ್ ಕುಮಾರ್
ಕೆಲ ಮಾಹಿತಿಗಳ ಕೊರತೆಯಿಂದ ರೈಲಿನ ಮೂಲಕ ಬೆಂಗಳೂರಿಗೆ ಆಗಮಿಸಿದ ಕೆಲವರು ಕ್ವಾರಂಟೈನ್ ಗೆ ನಿರಾಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಅದನ್ನು ಸರಿಪಡಿಸಲಾಗುವುದು ಎಂದರು.

ವಿಶೇಷ ರೈಲಿನಲ್ಲಿ ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕರಿಗೆ 14 ದಿನಗಳ ಕ್ವಾರಂಟೈನ್
ದೇಶದಲ್ಲಿ ನಿಗದಿತ ರೈಲು ಸೇವೆ ಪುನರ್ ಆರಂಭಗೊಂಡ ನಂತರ ಇದೇ ಮೊದಲ ಬಾರಿಗೆ ದೆಹಲಿಯಿಂದ ಸುಮಾರು 1 ಸಾವಿರ ಪ್ರಯಾಣಿಕರು ಗುರುವಾರ ಬೆಂಗಳೂರಿಗೆ ಬಂದಿಳಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೋಮ್ ಕ್ವಾರಂಟೈನ್ ನಲ್ಲಿರುವವರಿಗೆ ಗುರುತು ಹಾಕಲು ಮೈಸೂರಿನ ಶಾಹಿ ಪೂರೈಕೆ
ಹೋಮ್ ಕ್ವಾರಂಟೈನ್ ನಲ್ಲಿರುವವರಿಗೆ ಮಾರ್ಕ್ ಮಾಡಲು ಮೈಸೂರು ಪೈಂಟ್ಸ್ ಮತ್ತು ವಾರ್ನಿಶ್ ಕಂಪನಿ ಇಂಕ್ ಪೂರೈಸಲಾಗುತ್ತಿದೆ. ಇದೇ ಶಾಹಿಯನ್ನು ಚುನಾವಣೆ ಮತ್ತು ಪಲ್ಸ್ ಪೊಲಿಯೋ ಲಸಿಕೆ ಸಮಯದಲ್ಲೂ ಹಾಕಲಾಗುತ್ತದೆ.

ಲಕ್ಷಣಗಳಿಲ್ಲದಿದ್ದರೂ ಹೊರಗಿನಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ: ರಾಜ್ಯ ಸರ್ಕಾರ ಆದೇಶ
ಲಾಕ್ಡೌನ್ ವಿನಾಯಿತಿ ಬೆನ್ನಲ್ಲೇ ರಾಜ್ಯಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯಕ್ಕೆ ಆಗಮಿಸುವ ಎಲ್ಲರನ್ನೂ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಮಾಡುವುದಾಗಿ ರಾಜ್ಯ ಸರ್ಕಾರ ಆದೇಶಿಸಿದೆ.

