quarantine

ಹೊಸದಾಗಿ ಬರುವ ಕೈದಿಗಳಿಗೆ 14 ದಿನ ಕ್ವಾರಂಟೈನ್ ಕಡ್ಡಾಯ: ರಾಜ್ಯ ಕಾರಾಗೃಹ ಇಲಾಖೆ
ಜೈಲಿಗೆ ಬರುವ ಹೊಸ ಕೈದಿಗಳಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯವೆಂದು ರಾಜ್ಯ ಕಾರಾಗೃಹ ಇಲಾಖೆ ತಿಳಿಸಿದೆ.

ಅಧಿಕಾರಿಗಳ ಎಡವಟ್ಟು: ಬೇರೆಯವರಿಗೆ ಸ್ಥಳಾವಕಾಶ ಕಲ್ಪಿಸಲು ಕೋವಿಡ್ ಟೆಸ್ಟ್ ಇಲ್ಲದೆಯೆ ಕ್ವಾರಂಟೈನ್ ಅವಧಿ ಕಡಿತ!
ಇತರೆ ರಾಜ್ಯ ಹಾಗೂ ವಿದೇಶಗಳಿಂದ ಜನ ಭಾರಿ ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಅವರೆಲ್ಲರನ್ನೂ ಕ್ವಾರಂಟೈನ್ ಗೆ ಒಳಪಡಿಸುವ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು ದೊಡ್ಡ ಎಡವಟ್ಟು ಮಾಡುತ್ತಿದ್ದು, ಕೊರೋನಾ ವೈರಸ್ ಮತ್ತಷ್ಟು ಹರಡುವ ಭೀತಿ ಎದುರಾಗಿದೆ.

ಲಾಕ್ ಡೌನ್ ಮುಗಿಯುವವರೆಗೂ ಸೋನಿಯಾ ಮತ್ತು ರಾಹುಲ್ ರನ್ನು ಕ್ವಾರಂಟೈನ್ ನಲ್ಲಿರಿಸಿ
ಲಾಕ್ ಡೌನ್ ವಿಫಲವಾಗಿದೆ ಎಂದು ಹೇಳುವ ಮೂಲಕ ಜನರಲ್ಲಿ ಭೀತಿ ಹುಟ್ಟಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಲಾಕ್‌ಡೌನ್ ಕೊನೆಗೊಳ್ಳುವವರೆಗೂ ಕ್ವಾರಂಟೈನ್ ಮಾಡಬೇಕು ಎಂದು ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿದ್ದಾರೆ.

ಬೀದರ್: ಕ್ವಾರಂಟೈನ್ ನಲ್ಲಿದ್ದ ಯುವಕ ಆತ್ಮಹತ್ಯೆ
ಕ್ವಾರಂಟೈನ್‍ನಲ್ಲಿದ್ದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪ್ಪಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ದುಬೈಯಲ್ಲಿ ಕೆಲಸ ತೊರೆದು ತಾಯಿ ನೋಡಿಕೊಳ್ಳಲು ಬಂದ, ಕ್ವಾರಂಟೈನ್ ನಲ್ಲಿದ್ದಾಗ ಬಂತು ಹೆತ್ತವಳ ಸಾವಿನ ಸುದ್ದಿ!
ದುಬೈಯಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಕೆಲಸ ತೊರೆದು ಭಾರತದಲ್ಲಿದ್ದ ತನ್ನ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ತವರಿಗೆ ಬಂದಿದ್ದಾರೆ. ಆದರೆ ಕೆಲವು ಬಾರಿ ಜೀವನ ನಾವು ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ. ಕೊವಿಡ್-19 ಪರಿಣಾಮ ದೆಹಲಿಯಲ್ಲಿ 14 ದಿನ ಕ್ವಾರಂಟೈನ್ ಗೆ ಒಳಗಾಗಿದ್ದು, ಕ್ವಾರಂಟೈನ್ ಮುಗಿಯುವ ಮೊದಲೇ ತಾಯಿಯ ಸಾವಿನ ಸುದ್ದಿ ಬಂದಿದೆ.

ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ವಿವಾದಕ್ಕೆ ಗುರಿಯಾದ ಸದಾನಂದಗೌಡ!
ದೆಹಲಿಯಿಂದ ವಿಮಾನವೊಂದರಲ್ಲಿ ಸೋಮವಾರ ಬೆಂಗಳೂರಿಗೆ ಆಗಮಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ನೇರವಾಗಿ ವಿಧಾನಸೌಧಕ್ಕೆ ತೆರಳಿ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಇದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಕ್ವಾರಂಟೈನ್ ನಿಂದಾಗಿ ಮಾನಸಿಕ ಒತ್ತಡ ಹಾಗೂ ಖಿನ್ನತೆ ಸಮಸ್ಯೆ ಹೆಚ್ಚುತ್ತಿದೆ: ಅಧ್ಯಯನ ವರದಿ
ಕೊರೋನಾ ಕಡ್ಡಾಯ ಕ್ವಾರಂಟೈನ್ ಮಾನವನ ಮಾನಸಿಕ ಸ್ವಾಸ್ಥ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ವೈದ್ಯಕೀಯ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಯನವು ಈ ಮಾಹಿತಿಯನ್ನು ಬಹಿರಂಗಪಡಿಸಿದೆ.

ಕ್ವಾರಂಟೈನ್'ನಿಂದ ನಾಪತ್ತೆಯಾಗಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಮಹಿಳೆ ಪತ್ತೆ
ಗೋಕಾಕ್'ನ ಸಾಂಸ್ಥಿಕ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ಪೊಲೀಸರಿಗೆ ಭಾರೀ ತಲೆನೋವು ಸೃಷ್ಟಿಸಿದ್ದ ಮಹಿಳೆ, ಪತಿಯೊಂದಿಗೆ ಸಿಕ್ಕಿಬಿದ್ದಿದ್ದಾರೆ.

ಕಲಬುರಗಿ: ಕ್ವಾರಂಟೈನ್ ಕೇಂದ್ರದಲ್ಲಿ ಚಿಕನ್ ಮತ್ತು ಚಿಪ್ಸ್ ಕೊಟ್ಟಿಲ್ಲವೆಂದು ಆಶಾ ಕಾರ್ಯಕರ್ತೆ ಕೈ ಮುರಿದ ಭೂಪ!
ಕ್ವಾರಂಟೈನ್ ಕೇಂದ್ರದಲ್ಲಿದ್ದ ವ್ಯಕ್ತಿ ಓರ್ವ ಆಶಾ ಕಾರ್ಯಕರ್ತೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಕಿಣ್ಣಿ ಅಬ್ಬಾಸ್ ಗ್ರಾಮದಲ್ಲಿ ನಡೆದಿದೆ. ಆಶಾ ಕಾರ್ಯಕರ್ತೆ ರೇಣುಕಾ ಕುಡಕಿ ಮೇಲೆ ಸೋಮನಾಥ್ ಕಾಂಬಳೆ ಎಂಬುವವರು ಹಲ್ಲೆ ಮಾಡಿ ಕೈ ಮುರಿದಿದ್ದಾರೆ.

