Puneet Rajkumar

ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಎಲ್ಲರೂ ಸಮಾಧಾನದಿಂದ ಬಂದು ಊಟ ಮಾಡಿಕೊಂಡು ಹೋಗಿ: ಶಿವಣ್ಣ, ರಾಘಣ್ಣ ಮನವಿ
ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದು ಮಂಗಳವಾರಕ್ಕೆ 12 ದಿನಗಳಾಗಿದ್ದು, ಪುಣ್ಯ ಸ್ಮರಣೆ ಅಂಗವಾಗಿ ಅವರ ಕುಟುಂಬಸ್ಥರು ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಿದೆ.

'ಅಪ್ಪು' ಅಗಲಿ ಇಂದಿಗೆ 12 ದಿನ: ದೊಡ್ಮನೆ ಕುಟುಂಬದಿಂದ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ, ಖಾಕಿ ಪಹರೆ
ಅಭಿಮಾನಿಗಳ ಪ್ರೀತಿಯ ಅಪ್ಪು, ದೊಡ್ಮನೆಯ ನಂದಾದೀಪ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀವ್ರ ಹೃದಯಾಘಾತದಿಂದ ನಿಧನರಾಗಿ ಇಂದು ಮಂಗಳವಾರಕ್ಕೆ 12 ದಿನ. ಅವರ ಅಗಲಿಕೆಗೆ ಇಡೀ ಕರುನಾಡು ಶೋಕಪಟ್ಟಿದೆ.

ಸಮಾಜ ಸೇವೆ ಮಾಡುವ ಉದಾತ್ತ ಕೆಲಸವನ್ನು ಬಿಟ್ಟು ಹೋಗಿದ್ದೀಯಾ, ಅದನ್ನು ಮುಂದುವರಿಸುವ ಶಕ್ತಿಯನ್ನು ನೀಡು: 'ಅಪ್ಪು' ನೆನೆದು ರಾಘಣ್ಣ ಭಾವುಕ ನುಡಿ
ಕನ್ನಡಿಗರ ಕಣ್ಮಣಿ, ಅಭಿಮಾನಿಗಳ ಅಪ್ಪು ಹಠಾತ್ ಕಣ್ಮರೆಯಾಗಿ ಅವರ ಕುಟುಂಬಸ್ಥರನ್ನು, ಬಂಧುಗಳು-ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿ ಹೋಗಿದ್ದಾರೆ. ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದು ಮಂಗಳವಾರಕ್ಕೆ 12 ದಿನಗಳಾಗಿದ್ದು, ಅವರ ಕುಟುಂಬಸ್ಥರು ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

'ಬೆಳಕು ಹೋದ ಮೇಲೆ ಕತ್ತಲು ಬರಲೇ ಬೇಕು, ಅದೇ ಜೀವನ, ಅದೇ ಅಲ್ವ ಸರ್ ವೈರಾಗ್ಯ ಅಂದಿದ್ದರು ಅಪ್ಪು': ರಮೇಶ್ ಅರವಿಂದ್
ನಟ ಪುನೀತ್ ರಾಜ್ ಕುಮಾರ್ ನಿಧನರಾಗುವ ಹಿಂದಿನ ದಿನ ರಾತ್ರಿ ಸಂಗೀತ ನಿರ್ದೇಶಕ ಗುರು ಕಿರಣ್ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲಿ ಹಲವು ವಿಚಾರಗಳ ಕುರಿತು ಮಾತನಾಡಿದ್ದರಂತೆ. ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ರಮೇಶ್ ಅರವಿಂದ್ ಅಂದು ಅಪ್ಪು ಆಡಿದ್ದ ಮಾತುಕತೆಗಳ ಬಗ್ಗೆ ಪ್ರಸ್ತಾಪಿಸಿದರು.

ಬಣ್ಣಗಳ ಪುಡಿಯಲ್ಲಿ ಚಿತ್ತಾರ: ಮಹಿಳಾ ಪ್ರಧಾನ ಕಲೆಯಲ್ಲಿ ಪೂಜಾರಿ ಅಕ್ಷಯ್ ಜಾಲಿಹಾಲ್ ಕೈಚಳಕ!
ತಮ್ಮ ಸೃಜನಶೀಲತೆ, ಚತುರ ಬೆರಳುಗಳುಗಳಿಂದ ಪುರಾತನ ಕಲಾ ಸಂಪ್ರದಾಯದ ಮೇಲೆ ಪಾಂಡಿತ್ಯದಿಂದ ಪೂಜಾರಿ ಅಕ್ಷಯ್ ಜಾಲಿಹಾಲ್ ಮಾಂತ್ರಿಕತೆಯನ್ನು ತಮ್ಮ ಕೈಚಳಕದಲ್ಲಿ ತೋರಿಸುತ್ತಾರೆ.

ನನ್ನ ಮಗನಿಗೆ ಈ ಸಮಸ್ಯೆ ಎದುರಾಗಿದ್ದರೆ ಏನು ಮಾಡುತ್ತಿದ್ದೆನೋ ಅದನ್ನೇ ನಾನು ಅಪ್ಪುಗೆ ಮಾಡಿದ್ದೇನೆ: ಡಾ. ರಮಣ್ ರಾವ್
ಪುನೀತ್ ರಾಜ್ ಕುಮಾರ್ ಅವರು ಕಳೆದ ಶುಕ್ರವಾರ ಹೃದಯಾಘಾತದಿಂದ ಹಠಾತ್ ನಿಧನರಾದ ಬಳಿಕ ಅವರ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿರುವ ಡಾ ರಮಣ ರಾವ್ ಮೇಲೆ ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದಾರೆ.

ಸಾವಿನಲ್ಲಿಯೂ ಬೇರೆಯವರ ಬಾಳಿಗೆ ಬೆಳಕಾದ 'ಅಪ್ಪು': ಪುನೀತ್ ಎರಡು ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ
ಸಾವಿನಲ್ಲೂ ಸಾರ್ಥಕತೆಯನ್ನು ನಟ ಪುನೀತ್ ರಾಜ್ ಕುಮಾರ್ ಮೆರೆದಿದ್ದಾರೆ. ಅವರಿಂದಾಗಿ ನಾಲ್ವರು ಜಗತ್ತನ್ನು ಇಂದು ನೋಡುವಂತಾಗಿದೆ. ಪುನೀತ್ ರಾಜ್ ಕುಮಾರ್ ಅವರ ಎರಡು ಕಣ್ಣುಗಳಿಂದ ನಾಲ್ವರು ಅಂಧಹೀನರಿಗೆ ಅತ್ಯಾಧುನಿಕ ಹೊಸ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ದೃಷ್ಟಿ ನೀಡಲಾಗಿದೆ.

ಪುನೀತ್ ಎರಡು ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ನೀಡಿದ್ದು ಹೇಗೆ? ನೇತ್ರತಜ್ಞ ಡಾ ಭುಜಂಗ ಶೆಟ್ಟಿ ವಿವರಿಸಿದ್ದು ಹೀಗೆ
ಕಳೆದ ಶುಕ್ರವಾರ ತೀವ್ರ ಹೃದಯಾಘಾತದಿಂದ ದಿಢೀರನೆ ಅಗಲಿದ ಪುನೀತ್ ರಾಜ್ ಕುಮಾರ್ ಅವರ ನೇತ್ರಗಳನ್ನು ಅವರ ಕುಟುಂಬಸ್ಥರು ತೀವ್ರ ಆಘಾತ-ದುಃಖದ ನಡುವೆಯೂ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದರು.

ಕನ್ನಡಿಗರ ಕಣ್ಮಣಿ ಪುನೀತ್ ಸ್ಮರಣೆ: ಬೆಂಗಳೂರಿನ ಶ್ರೀನಿವಾಸ ಚಿತ್ರಮಂದಿರದಲ್ಲಿ ಇಂದು 'ರಾಜಕುಮಾರ' ಉಚಿತ ಪ್ರದರ್ಶನ
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿ ಸೋಮವಾರ ಬೆಳಗ್ಗೆ ಅವರ ಯಶಸ್ವಿ ಚಿತ್ರ 'ರಾಜಕುಮಾರ'ನ ವಿಶೇಷ ಉಚಿತ ಪ್ರದರ್ಶನ ಏರ್ಪಡಿಸಲಾಯಿತು.

