Puneet Rajkumar

ಪುನೀತ್ ರಾಜ್ ಕುಮಾರ್ ನಿಧನದಿಂದ ಖಿನ್ನತೆ: ಅಪ್ಪು ಕಟ್ಟಾ ಅಭಿಮಾನಿ ಮಯೂರ ಆತ್ಮಹತ್ಯೆ
ಅಭಿಮಾನಿಗಳ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಠಾತ್ತನೆ ಅಗಲಿ ಒಂದು ತಿಂಗಳಾಗುತ್ತಾ ಬಂದಿದ್ದು, ವಾಸ್ತವ ಸ್ಥಿತಿಯನ್ನು ಇನ್ನೂ ಹಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ನಿಧನಕ್ಕೆ ಇಡೀ ಕರುನಾಡು ಶೋಕ ವ್ಯಕ್ತಪಡಿಸಿದೆ.

'ಅಪ್ಪು ಅವರ ಕನಸೊಂದನ್ನು ಸಾಕಾರಗೊಳಿಸಲು ಮುಂದಾಗಿದ್ದೇವೆ, ನಿಮ್ಮ ಸಹಕಾರ ಎಂದಿನಂತಿರಲಿ': ಅಶ್ವಿನಿ ಪುನೀತ್ ರಾಜ್ ಕುಮಾರ್
ಅಭಿಮಾನಿಗಳ ಪ್ರೀತಿಯ ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕಳೆದ ತಿಂಗಳು(ಅ.29) ತೀವ್ರ ಹೃದಯಾಘಾತದಿಂದ ಹಠಾತ್ ನಿಧನರಾದರು.

'ನನ್ನ ತಮ್ಮ ಮೃತ್ಯುಂಜಯ, ಮೃತ್ಯುವಾದ ಮೇಲೂ ಜಯ ನೋಡುತ್ತಿದ್ದಾನೆ, ಅಪ್ಪನನ್ನು ತಮ್ಮನಲ್ಲಿ ಕಂಡಿದ್ದೇವೆ: ನಟ ರಾಘವೇಂದ್ರ ರಾಜ್ ಕುಮಾರ್
ನಟ ಪುನೀತ್ ರಾಜ್ ಕುಮಾರ್ ಅಗಲಿ 23 ದಿನಗಳಾಗಿದ್ದು, ರಾಜ್ಯ ಪೊಲೀಸ್ ಮೀಸಲು ಪಡೆ ಮತ್ತು ನಗರ ಸಂಚಾರ ಪೊಲೀಸ್ ಇಲಾಖೆ ಜಂಟಿಯಾಗಿ 66ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಪುನೀತ್ ಸ್ಮರಣೆ ಸೈಕಲ್ ಜಾಥಾ ಹಮ್ಮಿಕೊಂಡಿದ್ದವು.

'ಅಪ್ಪುಗೆ ಸೈಕಲ್ ರೈಡ್ ಅಂದರೆ ಇಷ್ಟವಾಗಿತ್ತು, ನನ್ನ ಹುಟ್ಟುಹಬ್ಬಕ್ಕೆ ಸೈಕಲ್ ಗಿಫ್ಟ್ ಮಾಡಿದ್ದ': ಜಾಥಾಕ್ಕೆ ಚಾಲನೆ ನೀಡಿ ಸ್ಮರಿಸಿಕೊಂಡ ನಟ ಶಿವರಾಜ್ ಕುಮಾರ್
ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿನ ಅಪ್ಪು ಅಗಲಿ ಇಂದು ಭಾನುವಾರಕ್ಕೆ 23 ದಿನ. ಪುನೀತ್ ರಾಜ್ ಕುಮಾರ್ ಅವರಿಗೆ ಸೈಕಲ್ ಪ್ರಯಾಣ ಎಂದರೆ ಅಚ್ಚುಮೆಚ್ಚು. ಬಿಡುವಿದ್ದಾಗ ಕಿಲೋಮೀಟರ್ ಗಟ್ಟಲೆ ಒಬ್ಬನೇ ಇಲ್ಲವೇ ಸ್ನೇಹಿತರ ಜೊತೆ ಸೈಕಲ್ ನಲ್ಲಿ ಸವಾರಿ ಹೋಗುತ್ತಿದ್ದರಂತೆ.

ಉಜ್ವಲ ಭವಿಷ್ಯ ರೂಪಿಸಲು ಪ್ರಯಾಣ ಪುನರಾರಂಭಿಸುತ್ತೇವೆ, ಸಹಕಾರ ನೀಡಿ: ಪಿಆರ್ ಕೆ ಮೂಲಕ ಅಶ್ವಿನಿ ಪುನೀತ್ ರಾಜ್ ಕುಮಾರ್ ಮನವಿ
ಕನ್ನಡಿಗರ ಕಣ್ಮಣಿ ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್(Puneet Rajkumar) ಹಠಾತ್ ನಿಧನರಾಗಿ ಇಂದು ಶನಿವಾರಕ್ಕೆ 23 ದಿನಗಳಾಗುತ್ತಿದೆ. ಈ ಸಂದರ್ಭದಲ್ಲಿ ಅವರು ಮಾಡಿರುವ ಕಲಾಸೇವೆ, ಸಮಾಜ ಸೇವೆಗಳ ಬಗ್ಗೆ ಚರ್ಚೆ ಒಂದೆಡೆಯಾದರೆ 2016ರಲ್ಲಿ ಅವರು ಸ್ಥಾಪಿಸಿದ್ದ ಪಿಆರ್ ಕೆ ಪ್ರೊಡಕ್ಷನ್ ಹೌಸ್(PRK production house) ನ ಭವಿಷ್ಯದ ಬಗ್ಗೆ ಕೂಡ ಅಭಿಮಾನಿಗ

'ತಮ್ಮ ಹೋದ ನೋವು ಸದಾ ಕಾಡುತ್ತಿರುತ್ತದೆ, ತಾಳಿಕೊಂಡು ಮುಂದೆ ಹೋಗಬೇಕಷ್ಟೆ, ಅಪ್ಪು ಮಕ್ಕಳು ಧೈರ್ಯ ತೆಗೆದುಕೊಂಡಿದ್ದಾರೆ': ಶಿವರಾಜ್ ಕುಮಾರ್
ಕರುನಾಡಿನ ಕಣ್ಮಣಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದು ನವೆಂಬರ್ 16ಕ್ಕೆ 19 ದಿನಗಳಾಗುತ್ತಿದೆ. ಈ ಸಂದರ್ಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಪುನೀತ್ ನಮನ'ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.

ಅರಮನೆ ಮೈದಾನದಲ್ಲಿ 'ಪುನೀತ್ ನಮನ' ಕಾರ್ಯಕ್ರಮ: ಗಣ್ಯರಿಗೆ ಆಹ್ವಾನ, ಸಿನಿಮಾ ಪ್ರದರ್ಶನ ಹೊರತುಪಡಿಸಿ ಬೇರೆಲ್ಲಾ ಚಟುವಟಿಕೆಗೆ ಬ್ರೇಕ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರ ಪ್ರೀತಿಯ ಅಪ್ಪು ನಿಧನರಾಗಿ ಇಂದು ಮಂಗಳವಾರಕ್ಕೆ 19 ದಿನಗಳಾಗುತ್ತಿದೆ. ಅವರ ಅಭಿಮಾನಿಗಳ ನೋವು ಇನ್ನೂ ಕಡಿಮೆಯಾಗಿಲ್ಲ. ಪುನೀತ್ ಸಮಾಧಿಯಿರುವ ಸ್ಥಳ ಕಂಠೀರವ ಸ್ಟುಡಿಯೊಕ್ಕೆ ಈಗಲೂ ಜನಸಾಗರ ಹರಿದುಬರುತ್ತಿವೆ.

ಪುನೀತ್ ರಾಜ್ ಕುಮಾರ್ ಕಣ್ಣುಗಳಿಂದ ಇನ್ನೂ ಹತ್ತು ಜನಕ್ಕೆ ದೃಷ್ಟಿಭಾಗ್ಯ: ವಿನೂತನ ಪ್ರಯತ್ನದಲ್ಲಿ ನಾರಾಯಣ ನೇತ್ರಾಲಯ
ಕಳೆದ ತಿಂಗಳು ಅಕ್ಟೋಬರ್ 29ರಂದು ಹಠಾತ್ ನಿಧನರಾದ ಸ್ಯಾಂಡಲ್ ವುಡ್ ಪವರ್ ಸ್ಟಾರ್, ಎಲ್ಲರ ಪ್ರೀತಿಯ ಅಪ್ಪು ಪುನೀತ್ ರಾಜ್ಕುಮಾರ್ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿತ್ತು.

'ಏಕ್ ಲವ್ ಯಾ'ಚಿತ್ರತಂಡದಿಂದ ಅಪ್ಪು ಭಾವಚಿತ್ರ ಮುಂದೆ ಶಾಂಪೇನ್ ಸಂಭ್ರಮ: ಅಭಿಮಾನಿಗಳ ಆಕ್ರೋಶ, ಕ್ಷಮೆಯಾಚನೆಗೆ ಆಗ್ರಹ
ನಿರ್ದೇಶಕ ಜೋಗಿ ಪ್ರೇಮ್ ಅವರ 'ಏಕ್ ಲವ್ ಯಾ' ಸಿನಿಮಾ ಬಿಡುಗಡೆಗೆ ಕಾಯುತ್ತಿದೆ. ಚಿತ್ರದ ಎಣ್ಣಿಗೂ ಹೆಣ್ಣಿಗೂ ಏನು ಸಂಬಂಧ ಎಂಬ ಹಾಡಿನ ವಿಡಿಯೊ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಸದ್ದು ಮಾಡುತ್ತಿದೆ.

