Puneet Rajkumar

ಅಕ್ಟೋಬರ್ 25ಕ್ಕೆ PRKStarFandom App ಬಿಡುಗಡೆ: ಪುನೀತ್ ರಾಜ್ ಕುಮಾರ್ ಹುಟ್ಟು-ಸಾವಿನ ಮಧ್ಯೆ ಬಾಳಿನ ವಿಡಿಯೊ ಔಟ್!
ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಬಿಡುಗಡೆ ಆಗುವ ಅಪ್ಲಿಕೇಶನ್ಗೆ ‘ಪಿಆರ್ಕೆ’ ಎಂದು ಹೆಸರಿಡಲಾಗಿದ್ದು, ಅಕ್ಟೋಬರ್ 25ರಂದು ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ.

ಪುನೀತ್ ರಾಜ್‌ಕುಮಾರ್ 50ನೇ ಜನ್ಮದಿನ; ಕುಟುಂಬಸ್ಥರು, ಅಭಿಮಾನಿಗಳಿಂದ ಸ್ಮರಣೆ; ಕನ್ನಡಿಗರ ಮನದಲ್ಲಿ 'ಕರ್ನಾಟಕ ರತ್ನ' ಅಮರ
ಭೌತಿಕವಾಗಿ ಅವರು ನಮ್ಮ ನಡುವೆ ಇಲ್ಲದಿದ್ದರೂ ಅವರ ಅಭಿಮಾನಿಗಳು ಅವರನ್ನು ಸ್ಮರಿಸುವುದೇನು ಕಡಿಮೆಯಾಗಿಲ್ಲ. ರಾಜ್ಯಾದ್ಯಂತ ಅಭಿಮಾನಿಗಳು ನಟ ಪುನೀತ್ ರಾಜ್‌ಕುಮಾರ್ 50ನೇ ಜನ್ಮದಿನವನ್ನು ಇಂದು ವಿಶೇಷವಾಗಿ ಆಚರಿಸುತ್ತಿದ್ದಾರೆ.

Junior Toes: 20 ವರ್ಷಗಳ ಅಪ್ಪು ಕನಸು ನನಸಾಗಿಸಿದ Ashwini Puneet Rajkumar!
ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ನಾಯಕತ್ವ ತರಬೇತಿದಾರರು ಮತ್ತು ಪ್ರೇರಕ ಭಾಷಣಕಾರ್ತಿ ಸ್ಪೂರ್ತಿ ವಿಶ್ವಾಸ್ ಕೈಜೋಡಿಸಿದ್ದಾರೆ.

ನಿಷ್ಕಲ್ಮಶ ನಗುವಿನ 'ಪುನೀತ' ಮರೆಯಾಗಿ ಇಂದಿಗೆ ಮೂರು ವರ್ಷ: ನೆಚ್ಚಿನ ನಟನ ಸ್ಮರಣೆಯಲ್ಲಿ ಕರುನಾಡು
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಯನ್ನು ಹೂವಿನಿಂದ ಅಲಂಕೃತ ಮಾಡಲಾಗಿದೆ. ಅಪ್ಪುನ ನೆನಪು ಮಾಡಿಕೊಳ್ಳಲು ಅಲ್ಲಿ ಇಂದು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ.

ರಾಜ್‌ಕುಮಾರ್ ಕುಟುಂಬ ಎಂದಿಗೂ ಕೆಟ್ಟದ್ದನ್ನು ಬಯಸಿಲ್ಲ: ಪುನೀತ್ ರಾಜ್ ಕುಮಾರ್ ಪ್ರತಿಮೆ ಅನಾವರಣ ಮಾಡಿದ ಸಿಎಂ ಸಿದ್ದರಾಮಯ್ಯ
ಸ್ಯಾಂಡಲ್ ವುಡ್ ನ ಖ್ಯಾತ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಪುನೀತ್ ರಾಜ್ ಕುಮಾರ್ ಒಡೆತನದ ಪಿ.ಆರ್.ಕೆ. ಸ್ಟುಡಿಯೋಸ್ ಹಾಗೂ N3K ಡಿಸೈನ್ ಸ್ಟುಡಿಯೋ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಸಂಗ್ರಹಣೀಯ ಶಿಲ್ಪಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣ ಮಾಡಿದರು.

ಬೆಂಗಳೂರು ವಿ.ವಿಯ ಅಂತಿಮ ಬಿ.ಕಾಂ ವಿದ್ಯಾರ್ಥಿಗಳ ಕನ್ನಡ ಪಠ್ಯದಲ್ಲಿ ಪುನೀತ್ ರಾಜ್ ಕುಮಾರ್ ಕುರಿತ ಪಾಠ ಅಳವಡಿಕೆ
ಅಕಾಲಿಕ ಮರಣ ಕಂಡ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೀವನಚರಿತ್ರೆ, ಸಮಾಜ ಸೇವೆಯ ಮೌಲ್ಯಗಳನ್ನು ಸಾರುವ ಪಠ್ಯವನ್ನು ಶಾಲಾ ಮಕ್ಕಳ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬೇಕೆಂಬ ಬೇಡಿಕೆ ಕಳೆದೊಂದು ವರ್ಷದಿಂದ ಕೇಳಿಬರುತ್ತಲೇ ಇದೆ.

'ಅಂಜನಿ ಪುತ್ರ'ನನ್ನು ನೆನೆದ ರಶ್ಮಿಕಾ
'ಕಿರಿಕ್ ಪಾರ್ಟಿ' ಮೂಲಕ ಚಂದನವನಕ್ಕೆ ಕಾಲಿಟ್ಟು ಜನಪ್ರಿಯ ನಟಿಯಾಗಿ ಬಳಿಕ ಕಾಲಿವುಡ್, ಬಾಲಿವುಡ್ ಗೆ ಹೋಗಿ ಅಲ್ಲಿ ಕೂಡ ನಟನೆಯಲ್ಲಿ ಸೈ ಎನಿಸಿಕೊಂಡು ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಬಂದು ಆರು ವರ್ಷಗಳೇ ಕಳೆದಿವೆ.

ದರ್ಶನ್ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ, ಅವರ ಮೇಲೆ ಚಪ್ಪಲಿ ಎಸೆದ ಘಟನೆ ನನ್ನ ಮನಸ್ಸಿಗೆ ಘಾಸಿ ಮಾಡಿದೆ: ಕಿಚ್ಚ ಸುದೀಪ್
ಮೊನ್ನೆ ಬಳ್ಳಾರಿಯ ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ತುಂಬಿದ ಜನಜಂಗುಳಿ ಮಧ್ಯೆ ನಾಯಕ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಇಡೀ ಕನ್ನಡ ಚಿತ್ರರಂಗದವರನ್ನು ಘಾಸಿಗೊಳಿಸಿದೆ, ಬಹುತೇಕ ಕಲಾವಿದರು ಈ ಘಟನೆಯನ್ನು ಖಂಡಿಸಿ ದರ್ಶನ್ ಪರ ನಿಂತಿದ್ದಾರೆ.

'ಅಪ್ಪು ಗಂಧದ ಗುಡಿಯಲ್ಲಿ ಅಭಿನಯಸಿಲ್ಲ, ಜೀವಿಸಿ ಹೋಗಿದ್ದಾರೆ, ನಮ್ಮ ನೆನಪಿನಂಗಳದಲ್ಲಿ ಜೀವಂತವಾಗಿರಿಸೋಣ': ಅಮಿತಾಬ್ ಬಚ್ಚನ್
ಕನ್ನಡ ನಾಡು-ನುಡಿ, ಪ್ರಾಕೃತಿಕ ಸೌಂದರ್ಯ, ಪ್ರಾಣಿ ಪಕ್ಷಿಗಳ ಬಗ್ಗೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ತಮ್ಮ ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿದ 'ಗಂಧದ ಗುಡಿ' ಸಾಕ್ಷ್ಯಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಕನ್ನಡ ನಾಡು- ಗಂಧದ ಬೀಡಿನ ಶ್ರೀಮಂತಿಕೆಯನ್ನು ಅದರಲ್ಲಿ ವರ್ಣಿಸಿದ್ದಾರೆ.

