Puneet Rajkumar

'ಎರಡು ತಿಂಗಳ ಹಿಂದೆ ನನಗೆ ಹಾರ್ಟ್ ಪ್ರಾಬ್ಲಂ ಆದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪೇಸ್ ಮೇಕರ್ ಹಾಕಿಸಿ ಕರೆದುಕೊಂಡು ಬಂದಿದ್ದ': ರಾಘವೇಂದ್ರ ರಾಜ್ ಕುಮಾರ್
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾಗಿ ಇಂದು ನವೆಂಬರ್ 1ಕ್ಕೆ ನಾಲ್ಕು ದಿನವಾಗಿದೆ. ಅವರ ಕುಟುಂಬಸ್ಥರು, ಬಂಧುಗಳು, ಅಭಿಮಾನಿಗಳು ಈ ಆಘಾತದಿಂದ ಇನ್ನೂ ಹೊರಬಂದಿಲ್ಲ.

ಈ ವರ್ಷದ ಕನ್ನಡ ಹಬ್ಬ 'ಯುವರತ್ನ' ಪುನೀತ್ ಗೆ ಅರ್ಪಣೆ: ಹೆಚ್ ಡಿ ಕುಮಾರಸ್ವಾಮಿ
ಕನ್ನಡಿಗರ ಪಾಲಿಗೆ ಇಂದು ನವೆಂಬರ್ 1 ಹಬ್ಬದ ದಿನ. 66ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಇಡೀ ಕರುನಾಡಿನಲ್ಲಿ ಮನೆ ಮಾಡಿದೆ. ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕಿದ್ದ ಹೊತ್ತಲ್ಲೇ ಅಭಿಮಾನಿಗಳಿಂದ ಪ್ರೀತಿಯಿಂದ ಅಪ್ಪು, ಪವರ್ ಸ್ಟಾರ್, ಯುವರತ್ನ ಎಂದು ಕರೆಸಿಕೊಳ್ಳುವ ನಟ ಪುನೀತ್ ರಾಜಕುಮಾರ್ ಹಠಾತ್ ನಿಧನರಾಗಿ ಕಾರ್ಮೋಡ ಕವಿದಿದೆ.

'ಅಲ್ಲಿ ಕೂತಿರುವಾಗ ಅವರ ಮಕ್ಕಳ ಬಗ್ಗೆ ಯೋಚನೆಯಾಯಿತು, ರಾಯಲ್ ಆಗಿ ಹುಟ್ಟಿ ಬೆಳೆದು ಜೀವಿಸಿದ ಪುನೀತ್ ರಾಯಲ್ ಆಗಿಯೇ ಹೋದರು': ಕಿಚ್ಚ ಸುದೀಪ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ಸಾವಿನಿಂದ ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಕರುನಾಡು ಶಾಕ್ ಗೊಳಗಾಗಿದೆ. ಅವರ ಅಂತ್ಯಕ್ಕೆ ಕಂಬನಿಮಿಡಿದವರು ಅದೆಷ್ಟೋ ಮಂದಿ. ತೀವ್ರ ಹೃದಯಾಘಾತ ಹಾಗೂ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ.

ಮಣ್ಣಲ್ಲಿ ಮಣ್ಣಾದ ಕನ್ನಡಿಗರ ಕಣ್ಮಣಿ 'ಅಪ್ಪು': ಸಿಎಂ ಬಸವರಾಜ ಬೊಮ್ಮಾಯಿ ಭಾವಪೂರ್ಣ ವಿದಾಯ
ಕಳೆದ ಶುಕ್ರವಾರ ತೀವ್ರ ಹೃದಯಾಘಾತದಿಂದ ನಿಧನರಾದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನೆರವೇರಿತು.

ನೆಚ್ಚಿನ ನಟ 'ಅಪ್ಪು'ಗೆ ಭಾವಪೂರ್ಣ ವಿದಾಯ: ನಾಲ್ವರು ಅಭಿಮಾನಿಗಳ ಸಾವು
ಕುಟುಂಬದಲ್ಲಿ ಯಾರಾದರೊಬ್ಬರು ತೀರಿಕೊಂಡಾಗ ಆ ಸಮಯದಲ್ಲಿ ಮನೆಯಲ್ಲಿ ಇತರ ಸದಸ್ಯರು ಅಡುಗೆ ಮಾಡಿ ಊಟ ಮಾಡುವುದಿಲ್ಲ ಎಂದು ಸ್ಯಾಂಡಲ್ ವುಡ್ ನ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಲಕ್ಷ್ಮಮ್ಮ ಹೇಳುತ್ತಾರೆ.

ಭಾನುವಾರ ಬೆಳಗ್ಗೆ ಪುನೀತ್ ರಾಜ್ ಕುಮಾರ್ ಅಂತ್ಯಸಂಸ್ಕಾರ; ಮುಂಜಾನೆಯೇ ಅಂತಿಮಯಾತ್ರೆ, ಪಾರ್ಥೀವ ಶರೀರ ಸಾಗುವ ಮಾರ್ಗ ವಿವರ ಇಂತಿದೆ
ಹೃದಯಾಘಾತದಿಂದ ನಿಧನರಾದ ಪವರ್ ಸ್ಚಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ ನೆರವೇರಲಿದ್ದು, ಪಾರ್ಥೀವ ಶರೀರದ ಅಂತಿಮಯಾತ್ರೆಯು ಭಾನುವಾರ (ಅಕ್ಟೋಬರ್ 31) ಮುಂಜಾನೆಯೇ ನಡೆಯಲಿದೆ.

ಪುನೀತ್ ರಾಜ್ ಕುಮಾರ್ ನಿಧನ ಸುದ್ದಿ ಪ್ರಸಾರ ಮಾಡಿದ ಬಿಬಿಸಿ ವರ್ಲ್ಡ್, ಶ್ರದ್ದಾಂಜಲಿ ಸಲ್ಲಿಕೆ
ನಿನ್ನೆ ಹೃದಯಾಘಾತದಿಂದ ನಿಧನರಾದ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿ ದೇಶ ವಿದೇಶಗಳ ಸುದ್ದಿ ವಾಹಿನಿಗಳಲ್ಲೂ ಪ್ರಸಾರವಾಗಿದ್ದು, ಬಿಬಿಸಿ ವರ್ಲ್ಡ್ ನ್ಯೂಸ್ ಪುನೀತ್ ಸಾವು ಮತ್ತು ಅಭಿಮಾನಿಗಳ ಆಕ್ರಂದನದ ಬಗ್ಗೆ ವರದಿ ಮಾಡಿದೆ.

'ಅಪ್ಪು' ಇನ್ನಿಲ್ಲ: ನಾಳೆ ಬೆಳಗ್ಗೆ 6ಕ್ಕೆ ಪುನೀತ್ ಪಾರ್ಥೀವ ಶರೀರದ ಮೆರವಣಿಗೆ ಆರಂಭ, 10.30ರೊಳಗೆ ಅಂತ್ಯಕ್ರಿಯೆ
ನಿನ್ನೆ ಹೃದಯಾಘಾತದಿಂದ ನಿಧನರಾದ ಕನ್ನಡದ ಪವರ್ ಸ್ಚಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 10.30ರೊಳಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಬದುಕನ್ನು ಪ್ರೀತಿಸುತ್ತಿದ್ದ 'ಯುವರತ್ನ' ಪುನೀತ್ ರಾಜ್ ಕುಮಾರ್
ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿದ್ದ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ವ್ಯಕ್ತಿತ್ವದಿಂದಲೂ ಜನಮೆಚ್ಚುಗೆ ಗಳಿಸಿದವರು. ದೇಹದ ಸದೃಢತೆಗೆ ಪ್ರತಿನಿತ್ಯ ಜಿಮ್ ಗೆ ಹೋಗಿ ವ್ಯಾಯಾಮ ಮಾಡುತ್ತಿದ್ದರು. ಕೇವಲ ತಾವು ಮಾತ್ರವಲ್ಲದೆ ತಮ್ಮ ಸುತ್ತಮುತ್ತಲಿನವರೂ ಆರೋಗ್ಯವಾಗಿರಲು ಸ್ಪೂರ್ತಿ ತುಂಬುತ್ತಿದ್ದರು.

