passed away

ಬಾಲಿವುಡ್ ಹಿರಿಯ ಛಾಯಾಗ್ರಾಹಕ ಈಶ್ವರ ಬಿದ್ರಿ ವಿಧಿವಶ
ಬಾಲಿವುಡ್ ಛಾಯಾಗ್ರಾಹಕರಾಗಿ 1990ರ ದಶಕದಲ್ಲಿ ದೊಡ್ಡ ಹೆಸರು ಮಾಡಿದ್ದ ಕನ್ನಡಿಗ ಈಶ್ವರ ಬಿದ್ರಿ (87) ಅನಾರೋಗ್ಯದಿಂದ ಭಾನುವಾರ ಬೆಳಗಾವಿಯಲ್ಲಿ ನಿಧನರಾದರು.

ಒಡಿಶಾ ರಾಜ್ಯಪಾಲರ ಪತ್ನಿ ಸುಶೀಲಾ ದೇವಿ ಕೊರೋನಾಗೆ ಬಲಿ
ಒಡಿಶಾ ರಾಜ್ಯಪಾಲ ಪ್ರೊ. ಗಣೇಶಿ ಲಾಲ್ ಪತ್ನಿ ಸುಶೀಲಾ ದೇವಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನವೆಂಬರ್ 2 ರಂದು ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ರಾಜ್ಯದ ಮೊದಲ ಮಹಿಳೆ ಸೋಮವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಬಾಲಿವುಡ್ ನಟ ಫರಾಜ್ ಖಾನ್ ಅನಾರೋಗ್ಯದಿಂದ ನಿಧನ
ಹಲವು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಿವುಡ್ ನಟ ಫರಾಜ್ ಖಾನ್ ಬುಧವಾರ ನಿಧನರಾಗಿದ್ದಾರೆ. 60 ವರ್ಷದ ಈ ನಟ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.

ಜೇಮ್ಸ್ ಬಾಂಡ್ ಸರಣಿಯ ಮೊದಲ ಬಾಂಡ್ 'ಸೀನ್ ಕಾನರಿ' ನಿಧನ
ಚಿತ್ರರಂಗದಲ್ಲಿ ಬಾಂಡ್ ಚಿತ್ರಗಳಿಗೆ ಪ್ರತ್ಯೇಕ ಸ್ಥಾನವಿದೆ. ಇಲ್ಲಿಯವರೆಗೂ ಹಾಲಿವುಡ್ ನಲ್ಲಿ ಬಾಂಡ್ ಹೆಸರಿನಲ್ಲಿ 25 ಸಿನಿಮಾಗಳು ಬಂದಿವೆ. ಅದರಲ್ಲೂ ಮೊದಲ ಬಾಂಡ್ ಸಿನಿಮಾದಲ್ಲಿ ನಟಿಸಿದ್ದ ಸೀನ್ ಕಾನರಿ ಅವರು ನಿಧನ ಹೊಂದಿದ್ದಾರೆ.

ಸ್ಯಾಂಡಲ್ ವುಡ್ ನಟ, ನಿರ್ದೇಶಕ ದಿನೇಶ್ ಗಾಂಧಿ ವಿಧಿವಶ
ನಟ, ನಿರ್ದೇಶಕ, ನಿರ್ಮಾಪಕ ದಿನೇಶ್ ಗಾಂಧಿ (52) ಇಂದು ಮುಂಜಾನೆ ಹೃದಯಾಘಾತದಿಂದ ಅಸುನೀಗಿದ್ದಾರೆ. ಪತ್ನಿ, ಪುತ್ರ ಮತ್ತು ಅಪಾರ ಬಂಧು-ಬಳಗವನ್ನು ಅಗಲಿರುವ ಇವರ ಅಂತ್ಯಕ್ರಿಯೆ ಸ್ವಗ್ರಾಮ ಶ್ರೀರಂಗಪಟ್ಟಣದ ನಗುವಿನಹಳ್ಳಿಯಲ್ಲಿ ನಡೆಯಲಿದೆ.

ಕಲಾ ನಿರ್ದೇಶಕ ಜಿ.ಮೂರ್ತಿ ಇನ್ನಿಲ್ಲ
ಸಿನಿಮಾ ಕಲಾನಿರ್ದೇಶಕ, ಚಿತ್ರನಿರ್ದೇಶಕ, ನಿರ್ಮಾಪಕ ಜಿ.ಮೂರ್ತಿ ವಿಧಿವಶರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.

ತಮಿಳುನಾಡು ಸಿಎಂ ಪಳನಿಸ್ವಾಮಿಗೆ ಮಾತೃವಿಯೋಗ
ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರ ತಾಯಿ ಥಾವುಸಾಯಮ್ಮಾಳ್ ವಿಧಿವಶರಾಗಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ: ಖ್ಯಾತ ಸಂಗೀತ ನಿರ್ದೇಶಕ ರಾಜನ್ ವಿಧಿವಶ
ಕನ್ನಡ ಸಿನಿಮಾ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ರಾಜನ್ ವಿಧಿವಶರಾಗಿದ್ದಾರೆ. ರಾಜನ್- ನಾಗೇಂದ್ರ ಸಹೋದರರ ಪೈಕಿ ರಾಜನ್ ಹಿರಿಯರಾಗಿದ್ದರು.

ಹೆಸರಾಂತ ಕಥೆಗಾರ ಅಬ್ಬಾಸ್ ಮೇಲಿನಮನಿ ಇನ್ನಿಲ್ಲ
ನಾಡಿನ ಹಿರಿಯ ಸಾಹಿತಿ, ಹೆಸರಾಂತ ಕಥೆಗಾರ ಪ್ರೊ, ಅಬ್ಬಾಸ್ ಮೇಲಿನಮನಿ(66) ಇಂದು ತೀವ್ರ ಹೃದಯಾಘಾತದಿಂದ ದಾವಣಗೆರೆಯಲ್ಲಿ ನಿಧನ ಹೊಂದಿದ್ದಾರೆ. ಅಬ್ಬಾಸ್ ಅವರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.

