ವಿದೇಶ

ಜೇಮ್ಸ್ ಬಾಂಡ್ ಸರಣಿಯ ಮೊದಲ ಬಾಂಡ್ 'ಸೀನ್ ಕಾನರಿ' ನಿಧನ

ಚಿತ್ರರಂಗದಲ್ಲಿ ಬಾಂಡ್ ಚಿತ್ರಗಳಿಗೆ ಪ್ರತ್ಯೇಕ ಸ್ಥಾನವಿದೆ. ಇಲ್ಲಿಯವರೆಗೂ ಹಾಲಿವುಡ್ ನಲ್ಲಿ ಬಾಂಡ್ ಹೆಸರಿನಲ್ಲಿ 25 ಸಿನಿಮಾಗಳು ಬಂದಿವೆ. ಅದರಲ್ಲೂ ಮೊದಲ ಬಾಂಡ್ ಸಿನಿಮಾದಲ್ಲಿ ನಟಿಸಿದ್ದ ಸೀನ್ ಕಾನರಿ ಅವರು ನಿಧನ ಹೊಂದಿದ್ದಾರೆ.

ಜೇಮ್ಸ್ ಬಾಂಡ್ ಸರಣಿಯ ಮೊದಲ ಬಾಂಡ್ 'ಸೀನ್ ಕಾನರಿ' ನಿಧನ
ಸೀನ್ ಕಾನರಿ
Published On :

ವಾಷ್ಟಿಂಗನ್: ಚಿತ್ರರಂಗದಲ್ಲಿ ಬಾಂಡ್ ಚಿತ್ರಗಳಿಗೆ ಪ್ರತ್ಯೇಕ ಸ್ಥಾನವಿದೆ. ಇಲ್ಲಿಯವರೆಗೂ ಹಾಲಿವುಡ್ ನಲ್ಲಿ ಬಾಂಡ್ ಹೆಸರಿನಲ್ಲಿ 25 ಸಿನಿಮಾಗಳು ಬಂದಿವೆ. ಅದರಲ್ಲೂ ಮೊದಲ ಬಾಂಡ್ ಸಿನಿಮಾದಲ್ಲಿ ನಟಿಸಿದ್ದ ಸೀನ್ ಕಾನರಿ ಅವರು ನಿಧನ ಹೊಂದಿದ್ದಾರೆ. 

90 ವರ್ಷದ ಸೀನ್ ಕಾನರಿ ಅವರು ಬಾಂಡ್ ಸರಣಿಯ 7 ಚಿತ್ರಗಳಲ್ಲಿ ಬಾಂಡ್ ಪಾತ್ರದಲ್ಲಿ ನಟಿಸಿದ್ದಾರೆ. ಬಾಂಡ್ ಸರಣಿ ಮೊದಲ ಐದು ಚಿತ್ರಗಳಲ್ಲಿ ಸೀನ್ ಕನರಿ ನಟಿಸಿದ್ದರು. 

ಸರ್ ಥಾಮಸ್ ಸೀನ್ ಕಾನರಿ ಅವರು 1930ರ ಆಗಸ್ಟ್ 25ರಂದು ಫೌಂಟೇನ್ ಬ್ರಿಡ್ಜ್ ನಲ್ಲಿ ಜನಿಸಿದ್ದರು. 

ಸೀನ್ ಕಾನರಿ ಡಾ. ನಂ., ಫ್ರಮ್ ರಷ್ಯಾ ವಿತ್ ಲವ್, ಗೋಲ್ಡ್ ಫಿಂಗರ್, ಥಂಡರ್  ಬಾಲ್, ಯು ಓನ್ಲಿ ಲಿವ್ ಟ್ವೈಸ್, ಡೈಮಂಡ್ ಫೇವರ್ ಮತ್ತು ನೇವರ್ ಸೇ ನೇವರ್ ಅಗೇನ್ ಚಿತ್ರಗಳಲ್ಲಿ ನಟಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.