passed away

ರೈತ ಸ್ನೇಹಿ, ಅಭಿವೃದ್ಧಿ ಹರಿಕಾರ ಉದಾಸಿ, ಹಾನಗಲ್ ಕ್ಷೇತ್ರದ ಜನತೆ ಪಾಲಿಗೆ ಶಾಶ್ವತ 'ಸಿಎಂ'
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹಾನಗಲ್ ಕ್ಷೇತ್ರದ ಶಾಸಕ ಸಿಎಂ ಉದಾಸಿ (85) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿ ಬಿ.ಜಯಾ ನಿಧನ
ಕನ್ನಡ ಚಿತ್ರರಂಗ ಒಬ್ಬರಾದ ನಂತರ ಒಬ್ಬರಂತೆ ಹಿರಿಯ ನಟರನ್ನು ಕಳೆದುಕೊಳ್ಳುತ್ತಿದೆ. ಶಂಖನಾದ ಅರವಿಂದ್, ಕೃಷ್ಣೇಗೌಡ ನಂತರ ಇದೀಗ ಹಿರಿಯ ಪೋಷಕ ನಟಿ ಹಿರಿಯ ಪೋಷಕ ನಟಿ ಬಿ. ಜಯಾ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ವಿಜಯಪುರ: ಸರಳ, ಸಜ್ಜನ ರಾಜಕಾರಣಿ ಮಾಜಿ ಶಾಸಕ ಎನ್.ಎಸ್. ಖೇಡ್ ನಿಧನ
ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎನ್.ಎಸ್.ಖೇಡ್(74) ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಅಮೃತಸರ: ಆರು ಬಾರಿ ಸಂಸದರಾಗಿದ್ದ ಕಾಂಗ್ರೆಸ್ ನಾಯಕ ರಘುನಂದನ್ ಲಾಲ್ ಭಾಟಿಯಾ ನಿಧನ
ಹಿರಿಯ ಕಾಂಗ್ರೆಸ್ ನಾಯಕ, ಆರು ಬಾರಿ ಸಂಸದರಾಗಿದ್ದ ರಘುನಂದನ್ ಲಾಲ್ ಭಾಟಿಯಾ ಅವರು (100) ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ.

ವೇದ ವಿದ್ವಾಂಸ ಸ್ವಾಮಿ ಓಂಕಾರಾನಂದ ಕೊರೋನಾ ಸೋಂಕಿನಿಂದ ನಿಧನ
ಥೇಣಿಯಲ್ಲಿನ ಚಿದ್ಭವಾನಂದ ಆಶ್ರಮದ ಸ್ಥಾಪಕ, ವೇದ ವಿದ್ವಾಂಸ, ತಿರುಕ್ಕುರಳ್ ಸೇರಿದಂತೆ ಹಲವು ತಮಿಳು ಗ್ರಂಥಗಳ ವಿದ್ವಾಂಸ ಸ್ವಾಮಿ ಓಂಕಾರಾನಂದ (64) ಕೋವಿಡ್-19 ಸೋಂಕಿನಿಂದ ಮೇ.10 ರಂದು ಮಧುರೈನ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

ತಮಿಳು ಸಿನಿಮಾರಂಗದ ಹೆಸರಾಂತ ನಿರ್ದೇಶಕ ಕೆ.ವಿ. ಆನಂದ್ ಹೃದಯಾಘಾತದಿಂದ ಸಾವು
ಕಾಲಿವುಡ್ ನ ಪ್ರಸಿದ್ದ ಸಿನಿಮಾ ನಿರ್ದೇಶಕ ಕೆ.ವಿ. ಆನಂದ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 54 ವರ್ಷದ ಆನಂದ್ ಶುಕ್ರವಾರ ಚೆನ್ನೈ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಖ್ಯಾತ ವಿಕಿರಣಶಾಸ್ತ್ರಜ್ಞ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಕಾರ್ಕಳ ಸುಬ್ಬರಾವ್ ವಿಧಿವಶ
ಖ್ಯಾತ ವಿಕಿರಣಶಾಸ್ತ್ರಜ್ಞ ಹಾಗೂ ನಿಜಾಮ್ ಮೆಡಿಕಲ್ ಸೈನ್ಸ್ ನ ಮೊದಲ ನಿರ್ದೇಶಕ ಡಾ. ಕಾರ್ಕಳ ಸುಬ್ಬರಾವ್ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಸದಾಶಿವರಾವ ಬಾಪುಸಾಹೇಬ ಭೋಸಲೆ ವಿಧಿವಶ
ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಹಾಗೂ ಅಪ್ಪಟ ಗಾಂಧಿವಾದಿಯಾಗಿದ್ದ ಸದಾಶಿವರಾವ ಬಾಪುಸಾಹೇಬ ಭೋಸಲೆ (101) ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಬ್ರಿಟನ್ ರಾಣಿ 2ನೇ ಎಲಿಜಬೆತ್ ಪತಿ ಪ್ರಿನ್ಸ್ ಫಿಲಿಪ್ ವಿಧಿವಶ
ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಪತಿ ಪ್ರಿನ್ಸ್ ಫಿಲಿಪ್ ಇಂದು ವಿಧಿವಶರಾಗಿದ್ದಾರೆ.

