ಬ್ರಿಟನ್ ರಾಣಿ 2ನೇ ಎಲಿಜಬೆತ್ ಪತಿ ಪ್ರಿನ್ಸ್ ಫಿಲಿಪ್ ವಿಧಿವಶ
ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಪತಿ ಪ್ರಿನ್ಸ್ ಫಿಲಿಪ್ ಇಂದು ವಿಧಿವಶರಾಗಿದ್ದಾರೆ.

ಲಂಡನ್: ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಪತಿ ಪ್ರಿನ್ಸ್ ಫಿಲಿಪ್ ಇಂದು ವಿಧಿವಶರಾಗಿದ್ದಾರೆ.
99 ವರ್ಷದ ಪ್ರಿನ್ಸ್ ಫಿಲಿಪ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ ಎಂದು ದ ಡ್ಯೂಕ್ ಆಫ್ ಎಡಿನ್ ಬರ್ಗ್, ಪ್ರಿನ್ಸ್ ಫಿಲಿಪ್ ಅವರು ವಿಂಡರ್ಸ್ ಕ್ಯಾಸಲ್ ನಲ್ಲಿ ವಿಧಿವಶರಾಗಿದ್ದಾರೆ ಎಂದು ಪ್ರಕಟಿಸಿದೆ.
ಪತಿ ಫಿಲಿಪ್ ನಿಧನಕ್ಕೆ ಬ್ರಿಟನ್ ರಾಣಿ ಎಲಿಜಬೆತ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು ಇದೊಂದು ತುಂಬಾ ದುಃಖಕರವಾದ ಸಂಗತಿ ಎಂದು ತಿಳಿಸಿದ್ದಾರೆ.
2021ರ ಫೆಬ್ರವರಿ 16ರಂದು ಪ್ರಿನ್ಸ್ ಫಿಲಿಪ್ ಅವರು ಸೋಂಕು ಮತ್ತು ಹೃದಯದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಫಿಲಿಪ್ ಡಿಸ್ ಚಾರ್ಜ್ ಆಗಿದ್ದರು.
ಕಳೆದ ನವೆಂಬರ್ ತಿಂಗಳಿನಲ್ಲಿ ಎಲಿಜಬೆತ್ ಮತ್ತು ಫಿಲಿಪ್ ದಂಪತಿ 73ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


