NSG

ಎನ್ಎಸ್ ಜಿ ಸದಸ್ಯತ್ವ ಸಿಗದಿದ್ದರೆ ರಷ್ಯಾ ಜೊತೆಗಿನ ಅಣು ಒಪ್ಪಂದ ರದ್ದು?: ಭಾರತದ ಚಾಣಕ್ಷ ನಡೆ
ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಬೆಂಬಲ ನೀಡುವಂತೆ ಚೀನಾವನ್ನು ಮನವೊಲಿಸಿ ಇಲ್ಲದಿದ್ದರೆ ಉಭಯ ದೇಶಗಳ ನಡುವಿನ ಅಣು ಒಪ್ಪಂದವನ್ನು ರದ್ದುಗೊಳಿಸುವುದಾಗಿ ಭಾರತ ರಷ್ಯಾ ಮೇಲೆ ಒತ್ತಡ ಹೇರಿದೆ.

ದೆಹಲಿಯ ವಸಂತ್ ಕುಂಜ್ ಬಳಿ ಸಜೀವ ಮಾರ್ಟರ್ ಶೆಲ್ ಪತ್ತೆ
ರಾಜಧಾನಿಯ ದೆಹಲಿಯ ವಸಂತ್ ಕುಂಜ್ ಪ್ರದೇಶದ ಸಮೀಪದ ಕಿಷನ್ ಗರ್ಹ ಗ್ರಾಮದಲ್ಲಿ ಸಜೀವ ಮಾರ್ಟರ್ ಶೆಲ್ ವೊಂದು ಪತ್ತೆಯಾಗಿರುವುದಾಗಿ ಶನಿವಾರ ತಿಳಿದುಬಂದಿದೆ...

ಪರಮಾಣು ಪ್ರಸರಣ ನಿರೋಧ ದಾಖಲೆ ಆಧಾರದಲ್ಲಿ ಎನ್ಎಸ್ ಜಿ ಸದಸ್ಯತ್ವ ಬೇಕು: ಚೀನಾಗೆ ಭಾರತದ ತಪರಾಕಿ
ಭಾರತ ಎನ್ಎಸ್ ಜಿ ಸದಸ್ಯತ್ವಕ್ಕಾಗಿ ಕೇಳುತ್ತಿರುವುದು ಉಡುಗೊರೆಯ ಆಧಾರದಲ್ಲಿ ಅಲ್ಲ. ಪರಮಾಣು ಪ್ರಸರಣ ನಿರೋಧ ದಾಖಲೆಯ ಆಧಾರದಲ್ಲಿ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ: ಬೀಳ್ಕೊಡುಗೆಯ ಉಡುಗೊರೆಯಾಗಿರಲು ಸಾಧ್ಯವಿಲ್ಲ- ಅಮೆರಿಕಾಗೆ ಚೀನಾ
ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ ತಪ್ಪುವಂತೆ ಮಾಡುತ್ತಿರುವ ಏಕೈಕ ರಾಷ್ಟ್ರ ಚೀನಾ ಆಗಿದ್ದು, ಹೊರಗಿನ ದೇಶ ಉಂಟು ಮಾಡುತ್ತಿರುವ ಅಡಚಣೆಯನ್ನು ತ್ವರಿತವಾಗಿ ಬಗೆಹರಿಸಬೇಕೆಂಬ ಅಮೆರಿಕ ಹೇಳಿಕೆಗೆ ಚೀನಾ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.

ಭಾರತದ ಎನ್ಎಸ್ ಜಿ ಸದಸ್ಯಕ್ಕೆ ಚೀನಾದಿಂದ ತಡೆ: ಬರಾಕ್ ಒಬಾಮ ಆಡಳಿತದ ಕಿಡಿ
ಭಾರತದ ಪರಮಾಣು ಸರಬರಾಜು ಸಮೂಹದ (ಎನ್ ಎಸ್ ಜಿ) ಸದಸ್ಯತ್ವಕ್ಕೆ ’ಹೊರಗಿನ’ ಚೀನಾದಿಂದ ತಡೆಯುಂಟಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಡಳಿತ ಕಿಡಿ ಕಾರಿದೆ.

ಎನ್ ಎಸ್ ಜಿ ನೂತನ ಕರಡು ನೀತಿ; ಭಾರತ ಇನ್, ಪಾಕಿಸ್ತಾನ ಔಟ್?
ಭಾರತದ ದಶಕಗಳ ಕನಸಾದ ಪರಮಾಣು ಪೂರೈಕೆದಾರರ ಒಕ್ಕೂಟ (ಎನ್ ಎಸ್ ಜಿ) ಸೇರ್ಪಡೆ ಸದ್ಯದಲ್ಲೇ ನನಸಾಗುವ ಸಾಧ್ಯತೆ ಇದ್ದು, ಪಾಕಿಸ್ತಾನವನ್ನು ಹಿಂದಿಕ್ಕಿ ಭಾರತ ಎನ್ ಎಸ್ ಜಿ ಸದಸ್ಯತ್ವ ಪಡೆಯಲಿದೆ ಎಂದು ವರದಿಯೊಂದು ತಿಳಿಸಿದೆ.

ಎನ್ಎಸ್ ಜಿ ಸದಸ್ಯತ್ವ: ಚೀನಾದೊಂದಿಗೆ ಭಾರತದ ಮಾತುಕತೆ
ಪರಮಾಣು ಸರಬರಾಜು ಗುಂಪು (ಎನ್ ಎಸ್ ಜಿ) ಸದಸ್ಯತ್ವ ವಿಚಾರವಾಗಿ ಭಾರತ ಚೀನಾದೊಂದಿಗೆ ಮಾತುಕತೆ ಮುಂದುವರೆಸಿದೆ.

ಭಾರತದ ಎನ್ಎಸ್ ಜಿ ಕನಸನ್ನು ಮತ್ತೊಮ್ಮೆ ಭಗ್ನಗೊಳಿಸಲು ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿರುವ ಚೀನಾ!
ಚೀನಾ ಪಾಕಿಸ್ತಾನವನ್ನು ಮುಂದಿಟ್ಟುಕೊಂಡು ಭಾರತದ ಎನ್ ಎಸ್ ಜಿ ಕನಸನ್ನು ಮತ್ತೊಮ್ಮೆ ಭಗ್ನಗೊಳಿಸಲು ಯತ್ನಿಸುತ್ತಿದೆ ಎಂಬ ವರದಿಗಳು ಪ್ರಕಟವಾಗಿದೆ.

ಮೋದಿ- ಕ್ಸಿ ಜಿಂಗ್ ಪಿಂಗ್ ಭೇಟಿ ವೇಳೆ ಎನ್ಎಸ್ ಜಿ, ಸಿಪಿಇಸಿ ಚರ್ಚೆ ಸಾಧ್ಯತೆ
ಚೀನಾ ಅಧ್ಯಕ್ಷರೊಂದಿಗಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತದ ಮಹತ್ವಾಕಾಂಕ್ಷಿ ಎನ್ಎಸ್ ಜಿ ಹಾಗೂ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆ ಚರ್ಚೆ ಬರಲಿರುವ ಮುಖ್ಯ ವಿಷಯವಾಗಿರಲಿವೆ.

