Loksabha Election 2019

ಇವಿಎಂ ಅಭ್ಯರ್ಥಿಗಳ ಸ್ಥಾನದಲ್ಲೂ ಸಮಲತಾ ಲಾಸ್ಟ್, ನಿಖಿಲ್ ಫಸ್ಟ್
ಲೋಕಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಚುನಾವಣಾ ಆಯೋಗ ಅಭ್ಯರ್ಥಿಗಳಿಗೆ ಕ್ರಮ ಸಂಖ್ಯೆ ನೀಡಿದ್ದು, ಮಂಡ್ಯದಲ್ಲಿ ನಿಖಿಲ್ ಕುಮಾರ ಸ್ವಾಮಿ ಅವರಿಗೆ 1 ನೇಕ್ರಮ ಸಂಖ್ಯೆ ನೀಡಿರುವ ಆಯೋಗ ಸುಮಲತಾ ಅಂಬರೀಶ್ ಅವರಿಗೆ 20ನೇ ಕ್ರಮ ಸಂಖ್ಯೆ ನೀಡಿದೆ.

ನಾನು ಅಳಿಯ ಅಲ್ಲ, ನಾನೇ ಮಂಡ್ಯದ ಮಗ: ಎಚ್ ಡಿಕೆ, ನಿಖಿಲ್ ಗೆ ಭರ್ಜರಿ ಟಾಂಗ್ ಕೊಟ್ಟ ಅಭಿಷೇಕ್ ಅಂಬರೀಶ್
ಲೋಕಸಭಾ ಚುನಾವಣೆ ಮತದಾನ ಹತ್ತಿರವಾಗುತ್ತಿದ್ದಂತೆಯೇ ಅಭ್ಯರ್ಥಿಗಳ ವಾಕ್ಸಮರ ತಾರಕಕ್ಕೇರಿದ್ದು, ಈ ಹಿಂದೆ ಸುಮಲತಾ ಅವರನ್ನು ಟೀಕಿಸಿದ್ದ ಕುಮಾರಸ್ವಾಮಿ ಮತ್ತು ಅವರ ಮಗ ನಿಖಿಲ್ ಗೆ ಅಂಬರೀಷ್ ಪುತ್ರ ಭರ್ಜರಿ ಟಾಂಗ್ ನೀಡಿದ್ದಾರೆ.

ವಾರಣಾಸಿ: ಕಳಪೆ ಆಹಾರದ ಬಗ್ಗೆ ಆರೋಪಿಸಿದ್ದ ಮಾಜಿ ಯೋಧ ತೇಜ್ ಬಹದ್ದೂರ್ ಮೋದಿ ವಿರುದ್ಧ ಕಣಕ್ಕೆ
ಸೇನೆಯಲ್ಲಿ ಸೈನಿಕರಿಗೆ ನೀಡುವ ಆಹಾರ ಕಳಪೆಯಾಗಿರುತ್ತದೆ ಎಂದು ಆರೋಪಿಸಿದ್ದ ಮಾಜಿ ಯೋಧ ತೇಜ್ ಬಹದ್ದೂರ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವರ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.

ಐಟಿ ರೇಡ್ ಟೆನ್ಷನ್ ನಡುವೆಯೇ ರಾತ್ರಿ ಐಪಿಎಲ್ ಪಂದ್ಯ ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ!
ಐಟಿ ದಾಳಿಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಮೈತ್ರಿ ಸರ್ಕಾರದ ದೋಸ್ತಿ ನಾಯಕರು ಬೀದಿಗಿಳಿದು ಹೋರಾಟ ನಡೆಸಿದ್ದರೆ, ಅತ್ತ ಮಾಜಿ ಸಿಎಂ ಹಾಗೂ ದೋಸ್ತಿ ಸರ್ಕಾಯ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮಾತ್ರ ಐಪಿಎಲ್ ಪಂದ್ಯ ವೀಕ್ಷಣೆ ಮಾಡಿ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದರು.

ತುಂಬಾ ನೋವಿನಿಂದ ಬಿಜೆಪಿ ತೊರೆಯುತ್ತಿದ್ದೇನೆ: ರಾಹುಲ್ ಗಾಂಧಿ ಭೇಟಿ ಬಳಿಕ ಶತೃಘ್ನ ಸಿನ್ಹಾ ಹೇಳಿಕೆ
ತುಂಬಾ ನೋವಿನಿಂದ ಬಿಜೆಪಿ ತೊರೆಯುತ್ತಿದ್ದೇನೆ ಎಂದು ಖ್ಯಾತ ಬಾಲಿವುಡ್ ನಟ ಹಾಗೂ ಬಿಜೆಪಿ ರೆಬೆಲ್ ಮುಖಂಡ ಶತೃಘ್ನ ಸಿನ್ಹಾ ಹೇಳಿದ್ದಾರೆ.

ಬಿಜೆಪಿ 12ನೇ ಪಟ್ಟಿ: ಕೊಪ್ಪಳದಿಂದ ಕರಡಿ ಸಂಗಣ್ಣ, ಕತ್ತಿ ಕುಟುಂಬಕ್ಕೆ ತಪ್ಪಿದ ಚಿಕ್ಕೋಡಿ!
ಉತ್ತರ ಕರ್ನಾಟಕದ 3 ಕ್ಷೇತ್ರಗಳೂ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನದ ಹಲವು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪ್ರಕಟಿಸಿದೆ.

ಅಲ್ಲಿ ಪಾಕಿಸ್ತಾನ ಉಗ್ರರ ಶವಗಳ ಎಣಿಸುತ್ತಿದೆ, ಇಲ್ಲಿ ವಿಪಕ್ಷಗಳು ಸಾಕ್ಷಿ ಕೇಳುತ್ತಿವೆ: ಪ್ರಧಾನಿ ಮೋದಿ
ಭಾರತೀಯ ವಾಯುಸೇನೆ ನಡೆಸಿದ ದಾಳಿಯಿಂದಾಗಿ ಪಾಕಿಸ್ತಾನದಲ್ಲಿ ಇನ್ನೂ ಶವಗಳ ಎಣಿಸುತ್ತಿದ್ದಾರೆ. ಆದರೆ ಇಲ್ಲಿ ವಿಪಕ್ಷಗಳು ಸಾಕ್ಷಿ ಕೇಳುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನಿಜಾಮಾಬಾದ್ ನಲ್ಲಿ ಇವಿಎಂ ಇಲ್ಲ, ಬ್ಯಾಲೆಟ್ ಪೇಪರ್ ಮೂಲಕ ಮತದಾನ, ಕಾರಣ ಏನು ಗೊತ್ತಾ?
ಇವಿಎಂ ಅಥವಾ ಮತಯಂತ್ರಗಳ ಕುರಿತ ಚರ್ಚೆ ನಡುವೆಯೇ ಯಾವುದೇ ಕಾರಣಕ್ಕೂ ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಿದ್ದ ಚುನಾವಣಾ ಆಯೋಗವೇ ಒಂದು ಕ್ಷೇತ್ರದಲ್ಲಿ ಬ್ಯಾಲೆಟ್ ಪೇಪರ್ ಮತದಾನಕ್ಕೆ ಮುಂದಾಗಿದೆ.

ನಾನು ದರ್ಶನ್ ಅಭಿಮಾನಿ, 'ಸುಮಲತಾ ಅಂಬರೀಶ್ ವಿರುದ್ಧ ನನ್ನ ಪತ್ನಿ ಸ್ಪರ್ಧಿಸುವುದಿಲ್ಲ': ಮಂಜೇ ಗೌಡ
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ತೀವ್ರ ಪೈಪೋಟಿ ನೀಡುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ಸಂಕಟವೊಡ್ಡಿದ್ದ ಮೂವರು ಸುಮಲತಾರ ಪೈಕಿ ಓರ್ವ ಪಕ್ಷೇತರ ಅಭ್ಯರ್ಥಿ ತಮ್ಮ ನಾಮಪತ್ರ ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿದ್ದಾರೆ.

