ಕರ್ನಾಟಕ

ನಾನು ಅಳಿಯ ಅಲ್ಲ, ನಾನೇ ಮಂಡ್ಯದ ಮಗ: ಎಚ್ ಡಿಕೆ, ನಿಖಿಲ್ ಗೆ ಭರ್ಜರಿ ಟಾಂಗ್ ಕೊಟ್ಟ ಅಭಿಷೇಕ್ ಅಂಬರೀಶ್

ಲೋಕಸಭಾ ಚುನಾವಣೆ ಮತದಾನ ಹತ್ತಿರವಾಗುತ್ತಿದ್ದಂತೆಯೇ ಅಭ್ಯರ್ಥಿಗಳ ವಾಕ್ಸಮರ ತಾರಕಕ್ಕೇರಿದ್ದು, ಈ ಹಿಂದೆ ಸುಮಲತಾ ಅವರನ್ನು ಟೀಕಿಸಿದ್ದ ಕುಮಾರಸ್ವಾಮಿ ಮತ್ತು ಅವರ ಮಗ ನಿಖಿಲ್ ಗೆ ಅಂಬರೀಷ್ ಪುತ್ರ ಭರ್ಜರಿ ಟಾಂಗ್ ನೀಡಿದ್ದಾರೆ.

ನಾನು ಅಳಿಯ ಅಲ್ಲ, ನಾನೇ ಮಂಡ್ಯದ ಮಗ: ಎಚ್ ಡಿಕೆ, ನಿಖಿಲ್ ಗೆ ಭರ್ಜರಿ ಟಾಂಗ್ ಕೊಟ್ಟ ಅಭಿಷೇಕ್ ಅಂಬರೀಶ್
ಸಂಗ್ರಹ ಚಿತ್ರ
Published On :
ಮಂಡ್ಯ: ಲೋಕಸಭಾ ಚುನಾವಣೆ ಮತದಾನ ಹತ್ತಿರವಾಗುತ್ತಿದ್ದಂತೆಯೇ ಅಭ್ಯರ್ಥಿಗಳ ವಾಕ್ಸಮರ ತಾರಕಕ್ಕೇರಿದ್ದು, ಈ ಹಿಂದೆ ಸುಮಲತಾ ಅವರನ್ನು ಟೀಕಿಸಿದ್ದ ಕುಮಾರಸ್ವಾಮಿ ಮತ್ತು ಅವರ ಮಗ ನಿಖಿಲ್ ಗೆ ಅಂಬರೀಷ್ ಪುತ್ರ ಭರ್ಜರಿ ಟಾಂಗ್ ನೀಡಿದ್ದಾರೆ.
'ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ಪ್ರಚಾರ ನಡೆಸಿದ ಅಭಿಷೇಕ್ ಅಂಬರೀಶ್ ಅವರು, ಸುಮಲತಾ  ಮುಖದಲ್ಲಿ ನೋವು ಕಾಣುತ್ತಿಲ್ಲ ಎಂಬ ಸಿಎಂ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು. 'ನಮ್ಮ ಮುಖದಲ್ಲಿ ನೋವು ಕಾಣುತ್ತಿಲ್ಲವಂತೆ. ನಾವೇನು ಮೈಕ್ ಮುಂದೆ ಟವಲ್ ಹಾಕಿಕೊಂಡು ಅಳಬೇಕೆ. ನಾವು ಅಳಲ್ಲ, ನಮಗೆ ಧೈರ್ಯ ತುಂಬಲು ನೀವಿರುವಾಗ ನಾವೇಕೆ ಅಳಬೇಕು ಎಂದು ಪ್ರಶ್ನಿಸಿದರು. 
ಅಂತೆಯೇ ಜೆಡಿಎಸ್ ವಿರುದ್ಧ ನೇರವಾಗಿಯೇ ವಾಗ್ಜಾಳಿ ನಡೆಸಿದ ಅಭಿಷೇಕ್, ಚುನಾವಣೆಯಲ್ಲಿ ಅವರು ಗೆಲ್ಲಲು ಸಾಧ್ಯವೇ ಇಲ್ಲ. ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಅವರಿಗೆ ಅರ್ಥವಾಗಿದೆ. ಹಾಗಾಗಿ 3 ಜನ ಸುಮಲತಾ ಹೆಸರಿನವರನ್ನುತಂದು ಚುನಾವಣಾ ಕಣಕ್ಕೆ ನಿಲ್ಲಿಸಿದ್ದಾರೆ. ಚುನಾವಣೆ ಗೆಲ್ಲಲು ಏನೇನೋ ಗಿಮಿಕ್ ಮಾಡುತ್ತಿದ್ದಾರೆ. ಆದರೆ ಮಂಡ್ಯದ ಜನ ಇದನ್ನು ತಿಳಿಯದಷ್ಟು ದಡ್ಡರಲ್ಲ. ನಾವು ಏನೆಂದು  ಏಪ್ರಿಲ್ 18ಕ್ಕೆ ತೋರಿಸೋಣ ಎಂದು ಗುಡುಗಿದರು.
ನಾನು ಅಳಿಯನಲ್ಲ, ನಾನೇ ಮಂಡ್ಯದ ಮಗ
ಇದೇ ವೇಳೆ ಎಚ್ ಡಿಕೆ ಮಾತ್ರವಲ್ಲದೇ ಅವರ ಮಗ ನಿಖಿಲ್ ಗೂ ಪರೋಕ್ಷ ಟಾಂಗ್ ನೀಡಿದ ಅಭಿಷೇಕ್, ಇಲ್ಲಿವರನ್ನು ಮದುವೆ ಆಗಿ ನಾನು ಮಂಡ್ಯದವನಾಗಬೇಕಿಲ್ಲ. ನಾನು ಮಂಡ್ಯದ ಮಗ, ಮಂಡ್ಯದ ಅಳಿಯನಲ್ಲ ಎಂದು ಹೇಳಿದರು.
ಈ ಹಿಂದೆ ನಿಖಿಲ್​ ​ ಮಂಡ್ಯದ ಅಳಿಯವಾಗುವನು. ಈ ಕ್ಷೇತ್ರ ಅವರಿಗೆ ಹೊಸದಲ್ಲ. ಈ ಹಿಂದೆ ದೇವೇಗೌಡರ ಎರಡನೇ ಕ್ಷೇತ್ರವಿದು ಎಂದು ಈ ಹಿಂದೆ ಕೆ.ಆರ್​ ಪೇಟೆ ಶಾಸಕ ಸುರೇಶ್​ ಗೌಡ ತಿಳಿಸಿದ್ದರು. ಇದಕ್ಕೆ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.