ದೇಶ

ಅಲ್ಲಿ ಪಾಕಿಸ್ತಾನ ಉಗ್ರರ ಶವಗಳ ಎಣಿಸುತ್ತಿದೆ, ಇಲ್ಲಿ ವಿಪಕ್ಷಗಳು ಸಾಕ್ಷಿ ಕೇಳುತ್ತಿವೆ: ಪ್ರಧಾನಿ ಮೋದಿ

ಭಾರತೀಯ ವಾಯುಸೇನೆ ನಡೆಸಿದ ದಾಳಿಯಿಂದಾಗಿ ಪಾಕಿಸ್ತಾನದಲ್ಲಿ ಇನ್ನೂ ಶವಗಳ ಎಣಿಸುತ್ತಿದ್ದಾರೆ. ಆದರೆ ಇಲ್ಲಿ ವಿಪಕ್ಷಗಳು ಸಾಕ್ಷಿ ಕೇಳುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಅಲ್ಲಿ ಪಾಕಿಸ್ತಾನ ಉಗ್ರರ ಶವಗಳ ಎಣಿಸುತ್ತಿದೆ, ಇಲ್ಲಿ ವಿಪಕ್ಷಗಳು ಸಾಕ್ಷಿ ಕೇಳುತ್ತಿವೆ: ಪ್ರಧಾನಿ ಮೋದಿ
ಸಂಗ್ರಹ ಚಿತ್ರ
Published On :
ಭುವನೇಶ್ವರ್: ಭಾರತೀಯ ವಾಯುಸೇನೆ ನಡೆಸಿದ ದಾಳಿಯಿಂದಾಗಿ ಪಾಕಿಸ್ತಾನದಲ್ಲಿ ಇನ್ನೂ ಶವಗಳ ಎಣಿಸುತ್ತಿದ್ದಾರೆ. ಆದರೆ ಇಲ್ಲಿ ವಿಪಕ್ಷಗಳು ಸಾಕ್ಷಿ ಕೇಳುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಒಡಿಶಾದ ಕೋರಾಪಟ್ ನಲ್ಲಿ ಇಂದು ನಡೆದ ಚುನಾವಣಾ ಪ್ರಚಾರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, 'ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಎನ್ ಡಿಎ ಅಧಿಕಾರಕ್ಕೆ ಬಂದಾಗ 'ಮೋದಿ ಯಾರು? ಏನು ಮಾಡುತ್ತಾರೆ?' ಎಂದು ಪ್ರಶ್ನಿಸುತ್ತಿದ್ದರು. ಆದರೆ ಈಗ ಮೋದಿ ಯಾರು ಎಂಬುದು ಅರ್ಥವಾಗಿದೆ. ನಾವು ದೇಶದ ಭದ್ರತೆಗೆ, ಬಡತನ ನಿವಾರಣೆಗೆ ಏನೆಲ್ಲ ಮಾಡಿದ್ದೇವೆ ಎಂಬುದು ಜನರಿಗೆ ತಿಳಿದಿದೆ ಎಂದು ಹೇಳಿದರು. 
'ಬಾಲಾಕೋಟ್ ವಾಯುದಾಳಿಯಾಗಿ ಸುಮಾರು ಒಂದು ತಿಂಗಳು ಕಳೆಯಿತು. ಉಗ್ರರ ವಿರುದ್ಧ ಭಾರತ ಕ್ರಮ ಕೈಗೊಂಡಿದ್ದು, ಅವರ ದೇಶಕ್ಕೇ ನುಗ್ಗಿ ಉಗ್ರ ಕ್ಯಾಂಪ್ ಗಳನ್ನು ಧ್ವಂಸ ಮಾಡಿದ್ದೇವೆ. ಪರಿಣಾಮ ಇಂದಿಗೂ ಅಲ್ಲಿ ಪಾಕಿಸ್ತಾನ ಶವಗಳ ಎಣಿಸಲಾಗುತ್ತಿದೆ. ಆದರೆ ಇಲ್ಲಿ ಮಾತ್ರ ಪ್ರತಿಪಕ್ಷಗಳು ಭಾರತೀಯ ಸೈನಿಕರ ಶೌರ್ಯ ಮತ್ತು ವಿಜ್ಞಾನಿಗಳ ಸಾಧನೆಯನ್ನು ಶಂಕಿಸುತ್ತಿದ್ದು, ಸಾಕ್ಷಿ ಕೇಳುತ್ತಿವೆ. ಅವರ ಈ ಕಾರ್ಯಕ್ಕೆ ತಿರುಗೇಟು ನೀಡುವ ಸಮಯ ಬಂದಿದೆ.
ಕಳೆದ 7 ದಶಕಗಳಿಂದ ಬಡವರಿಗೆ ಮೋಸ ಮಾಡಿ ಶೋಷಿಸುತ್ತಿದವರು ಇದೀಗ ದೇಶದ ಶೌರ್ಯದ ಪ್ರತೀಕವಾಗಿರುವ ಸೈನಿಕರನ್ನು ಮತ್ತು ದೇಶದ ಹೆಮ್ಮೆಯ ಪ್ರತೀಕವಾಗಿರುವ ವಿಜ್ಞಾನಿಗಳನ್ನು ಅಪಮಾನಿಸುತ್ತಿದ್ದಾರೆ. ಹಿಂದಿನ ಸರ್ಕಾರಕ್ಕೆ ಭದ್ರತಾ ಒಪ್ಪಂದ ಎಂದರೆ ಎಟಿಎಂ ಆಗಿತ್ತು. ಎಲ್ಲಾ ಕಾಂಗ್ರೆಸ್ ಸರ್ಕಾರಗಳೂ ಇದನ್ನು ಎಟಿಎಂ ಥರಹವೇ ಉಪಯೋಗಿಸಿದರು. ರಕ್ಷಣಾ ಒಪ್ಪಂದಗಳನ್ನೂ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಮಾಡಬಹುದು ಎಂದರೆ ಒಪ್ಪುವ ಸ್ಥಿತಿಯಲ್ಲಿ ಕಾಂಗ್ರೆಸ್ಸಿಗರು ಇರಲಿಲ್ಲ. ತಮ್ಮ ಹಿತಾಸಕ್ತಿ ಈಡೇರಿದ ಮೇಲೆ ಅವರು ಸೇನೆಯ ಹಿತಾಸಕ್ತಿಯ ಬಗ್ಗೆ ಯೋಚಿಸುತ್ತಲೂ ಇರಲಿಲ್ಲ. ಈಗ ಸಮಯ ಬದಲಾಗಿದ್ದು, ಅವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ ಎಂದು ಮೋದಿ ಹೇಳಿದರು. 
ಅಂತೆಯೇ ಒಡಿಶಾದ ಬಿಜೆಡಿ ಸರ್ಕಾರದ ವಿರುದ್ಧವೂ ಕಿಡಿಕಾರಿದ ಪ್ರಧಾನಿ ಮೋದಿ, ಒಡಿಶಾದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಜನ ಸಾಮಾನ್ಯರ ಆಶೋತ್ತರಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. ಕಿಚಡಿ ಸರ್ಕಾರ ಜನರಿಗೆ ಬೇಕಿಲ್ಲ. ಜನರು ಕಳೆದ ಮೂವತ್ತು ವರ್ಷಗಳಿಂದ ಬಹುಮತವಿಲ್ಲದ, ಅಸ್ಥಿರ ಸರ್ಕಾರವನ್ನು ನೋಡಿದ್ದಾರೆ, ಜೊತೆಗೆ ಐದು ವರ್ಷಗಳಲ್ಲಿ ಬಹುಮತ ಪಡೆದ ಒಂದು ಸ್ಥಿರ ಸರ್ಕಾರದ ಆಡಳಿತ ನೋಡಿದ್ದಾರೆ. ಆದ್ದರಿಂದ ದೇಶದ ಹಿತಕ್ಕೆ ಸ್ಥಿರ ಸರ್ಕಾರ ಬೇಕು ಎಂದು ಜನರೂ ಬಯಸಿದ್ದಾರೆ. ಹೀಗಾಗಿ ಬಿಜೆಪಿಗೆ ಮತ ನೀಡುವ ಉತ್ತಮ, ಸದೃಡ ಭಾರತ ನಿರ್ಮಾಣಕ್ಕೆ ಕೈ ಜೋಡಿಸಿ ಎಂದು ಮೋದಿ ಕರೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.