Karnataka covid cases

ಖುದ್ದು ರಸ್ತೆಗಿಳಿದ ಪೊಲೀಸ್ ಆಯುಕ್ತ ಕಮಲ್ ಪಂತ್; ಬೆಂಗಳೂರಿನಲ್ಲಿ 3 ಗಂಟೆಯಲ್ಲೆ 1500 ವಾಹನ ಜಪ್ತಿ!
ಕೊರೊನಾ ಎರಡನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಿದ್ದು, ಲಾಕ್‌ಡೌನ್ ಯಶಸ್ವಿಗೊಳಿಸಲು ಖುದ್ದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರೇ ರಸ್ತೆಗೆ ಇಳಿದು ವಾಹನಗಳನ್ನು ಪರಿಶೀಲನೆ ನಡೆಸಿದರು.

ವಾಹನ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆ, ಮಕ್ಕಳನ್ನು ಪೊಲೀಸ್ ವಾಹನದಲ್ಲೇ ಮನೆ ತಲುಪಿಸಿದ ಎಎಸ್‌ಐ
ಕೋವಿಡ್ ಎರಡನೇ ನಿಯಂತ್ರಿಸಲು ಗುರುವಾರದಿಂದ ಮೂರು ದಿನಗಳಕಾಲ ಸಂಪೂರ್ಣ ಲಾಕ್‌ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ನಗರ ಸೇರಿ ಜಿಲ್ಲೆಯ ಎಲ್ಲ ಪಟ್ಟಣಗಳು ಸ್ತಬ್ಧಗೊಂಡಿವೆ.

ಮಾಸ್ಕ್ ಧರಿಸದೆ ಸಿಬ್ಬಂದಿ ಜೊತೆ ವಾಗ್ವಾದ; ಮಂಗಳೂರಿನ ವೈದ್ಯ ಶ್ರೀನಿವಾಸ ಕಕ್ಕಿಲಾಯ ವಿರುದ್ಧ ದೂರು, ವಿಡಿಯೋ ವೈರಲ್
ಮಂಗಳೂರಿನ ಪ್ರಸಿದ್ಧ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೆ, ಕೋವಿಡ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ನಗರದ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟೂಲ್‌ಕಿಟ್ ಬಳಸಿ ಕುಂಭಮೇಳ ಹಾಗೂ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ಪ್ರಯತ್ನ ನಡೆಯುತ್ತಿದೆ: ರಾಮದೇವ್
ಟೂಲ್‌ಕಿಟ್ ಸಹಾಯದಿಂದ ಕುಂಭಮೇಳ ಮತ್ತು ಹಿಂದೂ ಧರ್ಮವನ್ನು ಅಪಚಾರ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಯೋಗ ಗುರು ರಾಮದೇವ್ ಆರೋಪಿಸಿದ್ದು ಇದೊಂದು 'ರಾಜಕೀಯ ಪಿತೂರಿ' ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಜತೆ ಪಿಎಂ ಸಭೆಯಲ್ಲಿ ರಾಜ್ಯಕ್ಕೆ ಹೆಚ್ಚಿನ ಲಸಿಕೆ, ಆಮ್ಲಜನಕ ನೀಡಲು ಮನವಿ
ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೋ ಸಂವಾದದಲ್ಲಿ ಮಂಗಳವಾರ ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಮುಖ್ಯಸ್ಥರು ಭಾಗವಹಿಸಿದ್ದರು.

ಸರ್ಕಾರ ಲಾಕ್‌ಡೌನ್ ವಿಸ್ತರಿಸುವುದೇ ಆದರೆ 'ಜನಹಿತದ ಲಾಕ್‌ಡೌನ್' ಮಾಡಲಿ: ಹೆಚ್ ಡಿ ಕುಮಾರಸ್ವಾಮಿ
ಸರ್ಕಾರ ಲಾಕ್‌ಡೌನ್ ವಿಸ್ತರಿಸುವ ಚಿಂತನೆಯಲ್ಲಿದೆ ಎಂದು ವರದಿಯಾಗುತ್ತಿದ್ದು, ಒಂದುವೇಳೆ ಸರ್ಕಾರ ಲಾಕ್‌ಡೌನ್ ವಿಸ್ತರಿಸುವುದೇ ಆದರೆ, ಅದು 'ಜನಹಿತದ ಲಾಕ್‌ಡೌನ್' ಆಗಿರಲಿ. ಆರ್ಥಿಕ, ಆಹಾರ ಪ್ಯಾಕೇಜ್, ಪರಿಹಾರ ಕ್ರಮಗಳು ಉದ್ದೇಶಿತ ವಿಸ್ತರಿತ ಲಾಕ್‌ಡೌನ್‌ನಲ್ಲಿರಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಶುಲ್ಕ ವಿವಾದ: ಕರ್ನಾಟಕದ ಗ್ರಾಮೀಣ ಖಾಸಗಿ ಶಾಲೆಗಳಿಂದ ರಾಜ್ಯ ಸರ್ಕಾರಕ್ಕೆ ಪ್ರತಿಭಟನೆಯ ಎಚ್ಚರಿಕೆ
ಶುಲ್ಕದ ಕೊರತೆಯಿಂದಾಗಿ ರಾಜ್ಯದ ಗ್ರಾಮೀಣ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಕನಿಷ್ಠ 70ರಷ್ಟು ಶಾಲಾ ಶುಲ್ಕ ಪಾವತಿಸಲು ಪೋಷಕರಿಗೆ ಆದೇಶಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಮಂಡ್ಯ: 9 ವರ್ಷ ಕಾದಿದ್ದ ತಂದೆ ಕೊನೆಗೂ ಮಗು ಮುಖ ನೋಡದೆ ಸಾವು, ಮಗು ಹಡೆದ 5ನೇ ದಿನಕ್ಕೆ ಕೊರೋನಾಗೆ ತಾಯಿಯೂ ಬಲಿ
ಮಗುವಿಗಾಗಿ 9 ವರ್ಷದ ಹಪಹಪಿಸಿದ್ದ ತಂದೆ ಕೊನೆಗೂ ಮಗುವಿನ ಮುಖ ನೋಡದೆ ಕೊರೋನಾಗೆ ಬಲಿಯಾಗಿದ್ದಾರೆ. ಅಲ್ಲದೆ ಮಗುವಿಗೆ ಜನ್ಮ ನೀಡಿದ 5 ದಿನಕ್ಕೆ ತಾಯಿ ಕೊರೋನಾದಿಂದ ಮೃತಪಟ್ಟಿದ್ದು 5 ದಿನದ ಮಗು ಅನಾಥವಾಗಿರುವ ಕರಳು ಹಿಡುವ ಘಟನೆ ಮಂಡ್ಯದಲ್ಲಿ ನಡೆದಿದೆ.

ರಾಜ್ಯದಲ್ಲಿ ಇಂದು ಕೊರೋನಾಗೆ 373 ಬಲಿ, ಬೆಂಗಳೂರಿನಲ್ಲಿ 14,316 ಸೇರಿ 41,779 ಮಂದಿಗೆ ಪಾಸಿಟಿವ್
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಭೀಕರತೆ ಸೃಷ್ಟಿಸುತ್ತಿದೆ. ಒಂದೇ ದಿನ ಬರೋಬ್ಬರಿ 41,779 ಮಂದಿಗೆ ಕೊರೋನಾ ವಕ್ಕರಿಸಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 21,30,267ಕ್ಕೆ ಏರಿಕೆಯಾಗಿದೆ.

