ಮಂಡ್ಯ: 9 ವರ್ಷ ಕಾದಿದ್ದ ತಂದೆ ಕೊನೆಗೂ ಮಗು ಮುಖ ನೋಡದೆ ಸಾವು, ಮಗು ಹಡೆದ 5ನೇ ದಿನಕ್ಕೆ ಕೊರೋನಾಗೆ ತಾಯಿಯೂ ಬಲಿ
ಮಗುವಿಗಾಗಿ 9 ವರ್ಷದ ಹಪಹಪಿಸಿದ್ದ ತಂದೆ ಕೊನೆಗೂ ಮಗುವಿನ ಮುಖ ನೋಡದೆ ಕೊರೋನಾಗೆ ಬಲಿಯಾಗಿದ್ದಾರೆ. ಅಲ್ಲದೆ ಮಗುವಿಗೆ ಜನ್ಮ ನೀಡಿದ 5 ದಿನಕ್ಕೆ ತಾಯಿ ಕೊರೋನಾದಿಂದ ಮೃತಪಟ್ಟಿದ್ದು 5 ದಿನದ ಮಗು ಅನಾಥವಾಗಿರುವ ಕರಳು ಹಿಡುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ: ಮಗುವಿಗಾಗಿ 9 ವರ್ಷದ ಹಪಹಪಿಸಿದ್ದ ತಂದೆ ಕೊನೆಗೂ ಮಗುವಿನ ಮುಖ ನೋಡದೆ ಕೊರೋನಾಗೆ ಬಲಿಯಾಗಿದ್ದಾರೆ. ಅಲ್ಲದೆ ಮಗುವಿಗೆ ಜನ್ಮ ನೀಡಿದ 5 ದಿನಕ್ಕೆ ತಾಯಿ ಕೊರೋನಾದಿಂದ ಮೃತಪಟ್ಟಿದ್ದು 5 ದಿನದ ಮಗು ಅನಾಥವಾಗಿರುವ ಕರಳು ಹಿಡುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯದ ನಾಗಮಂಗಲ ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದಲ್ಲಿ ಈಕ ಕರುಣಾಜನಕ ಘಟನೆ ನಡೆದಿದೆ. ಇದೇ ಗ್ರಾಮದ 45 ವರ್ಷದ ನಂಜುಂಡೇಗೌಡ ಹಾಗೂ 31 ವರ್ಷದ ಮಮತಾ ಇಬ್ಬರು ಕೊರೋನಾಗೆ ಬಲಿಯಾಗಿದ್ದಾರೆ.
ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಂಜುಂಡೇಗೌಡ ಅವರು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಏಪ್ರಿಲ್ 30ರಂದು ಮೃತಪಟ್ಟಿದ್ದರು.
ಇನ್ನು ತುಂಬು ಗರ್ಭಿಣಿಯಾಗಿದ್ದ ಮಮತಾಗೂ ಕೊರೋನಾ ಪಾಸಿಟಿವ್ ಬಂದಿದ್ದರಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಈ ಮಧ್ಯೆ ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಗಮಂಗಲದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಮೇ 11ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಮಮತಾ ಅವರು ಉಸಿರಾಟ ಸಮಸ್ಯೆ ಹೆಚ್ಚಾಗಿ ನಿನ್ನೆ ಸಂಜೆ ಮೃತಪಟ್ಟಿದ್ದಾರೆ. ಹೀಗಾಗಿ ತಂದೆ ತಾಯಿಯನ್ನು ಕಳೆದುಕೊಂಡ 5 ದಿನದ ಹೆಣ್ಣು ಮಗು ಅನಾಥವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


