Kabul

ಪರಾರಿಯಾಗಿದ್ದ ಆಫ್ಘನ್ ಅಧ್ಯಕ್ಷ ಯುಎಇನಲ್ಲಿ ಪತ್ತೆ, ಮಾನವೀಯ ನೆಲೆಗಟ್ಟಿನಲ್ಲಿ ಆಶ್ರಯ ಎಂದ ಯುಎಇ ಸರ್ಕಾರ!
ತಾಲಿಬಾನ್ ಬಂಡುಕೋರರ ದಾಳಿ ಬಳಿಕ ಆಫ್ಘಾನಿಸ್ತಾನದಿಂದ ಪರಾರಿಯಾಗಿದ್ದ ಅಧ್ಯಕ್ಷ ಅಶ್ರಫ್ ಘನಿ ಯುಎಇಯಲ್ಲಿ ಪತ್ತೆಯಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಆಶ್ರಯ ನೀಡಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.

ಕಾಬೂಲಿನಿಂದ ಹೊರಟ ಕಡೆಯ ವಿಮಾನದಲ್ಲಿ ಭಾರತಕ್ಕೆ ಮರಳಿದ ಪತ್ರಕರ್ತೆಯ ರೋಚಕ ಕಥೆ
ಭಾರತದಿಂದ ಆಫ್ಘನ್ನರು ಹೆಚ್ಚಿನ ಸಹಾಯವನ್ನು ನಿರೀಕ್ಷಿಸಿದ್ದರು. ಅದು ಹುಸಿಯಾಯಿತು. ಈಗ ತಮ್ಮ ಕಷ್ಟಕ್ಕೆ ನೆರವಾಗದ ಹಿರಿಯಣ್ಣನ ಕಂಡಂತೆ ಅವರು ಭಾರತವನ್ನು ಕಾಣುತ್ತಿದ್ದಾರೆ.

ತಾಲಿಬಾನಿಗಳ ಸಂಭ್ರಮಾಚರಣೆ ವಿಡಿಯೋದಲ್ಲಿ ಇಬ್ಬರು ಮಲಯಾಳಿಗಳು: ಶಶಿ ತರೂರ್ ಶಂಕೆ
ವಿಡಿಯೋವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಕಾಂಗ್ರೆಸ್ ಸಂಸದ ಶಶಿ ತರೂರ್, ವಿಡಿಯೋದಲ್ಲಿ ಇಬ್ಬರು ತಾಲಿಬಾನಿಗಳು ಮಲಯಾಳಂನಲ್ಲಿ ಮಾತನಾಡುತ್ತಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಕಾಬೂಲ್ ನಿಂದ 120 ಭಾರತೀಯ ಅಧಿಕಾರಿಗಳನ್ನು ಹೊತ್ತ ಐಎಎಫ್ ವಿಮಾನ ಗುಜರಾತ್ ನ ಜಾಮ್ ನಗರಕ್ಕೆ ಆಗಮನ
ಆಫ್ಘಾನಿಸ್ತಾನದಿಂದ 120 ಭಾರತೀಯ ಅಧಿಕಾರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ ಸಿ-17 ವಿಮಾನ ಗುಜರಾತ್ ನ ಜಾಮ್ ನಗರವನ್ನು ತಲುಪಿಸಿದೆ ಎಂದು ಮೂಲಗಳು ಮಂಗಳವಾರ ಖಚಿತಪಡಿಸಿವೆ.

ತಾಲಿಬಾನ್ ಬಿಕ್ಕಟ್ಟು: ಆಫ್ಘಾನಿಸ್ತಾನದಲ್ಲಿರುವ ಭಾರತೀಯರ ನೆರವಿಗೆ ಸಹಾಯವಾಣಿ ತೆರೆದ ವಿದೇಶಾಂಗ ಸಚಿವಾಲಯ
ತಾಲಿಬಾನ್ ಅಟ್ಟಹಾಸದಿಂದಾಗಿ ನಲುಗಿ ಹೋಗಿರುವ ಆಫ್ಘಾನಿಸ್ತಾನದಲ್ಲಿನ ಭಾರತೀಯರ ನೆರವಿಗೆ ವಿದೇಶಾಂಗ ಸಚಿವಾಲಯ ಧಾವಿಸಿದ್ದು, ಭಾರತೀಯರ ನೆರವಿಗೆ ಸಹಾಯವಾಣಿ ತೆರೆದಿದೆ.

ತಾಲಿಬಾನ್ ದಾಳಿ: ಹೆಲಿಕಾಪ್ಟರ್, ಕಾರುಗಳಲ್ಲಿ ಹಣ ಹೊತ್ತು ಆಫ್ಘನ್ ಪ್ರಧಾನಿ ಅಶ್ರಫ್ ಘನಿ ಪರಾರಿ!
ತಾಲಿಬಾನ್ ದಾಳಿ ಉಗ್ರರ ದಾಳಿ ಬೆನ್ನಲ್ಲೇ ಆಫ್ಘಾನಿಸ್ತಾನ ತೊರೆದಿದ್ದ ಅಧ್ಯಕ್ಷ ಅಶ್ರಫ್ ಘನಿ.. ದೇಶ ಬಿಡುವ ಮೊದಲು ಕಾರು ಮತ್ತು ಹೆಲಿಕಾಪ್ಟರ್ ನಲ್ಲಿ ಹಣ ತುಂಬಿಸಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಅಫ್ಘಾನಿಸ್ತಾನದಲ್ಲಿ ನಮಗೆ ಅನಿರೀಕ್ಷಿತ ಕ್ಷಿಪ್ರ ಗೆಲುವು: ತಾಲಿಬಾನ್ ಮುಖಂಡ
ಕಳೆದೊಂದು ವಾರದಲ್ಲಿ ಅಫ್ಘಾನಿಸ್ತಾನದ ಪ್ರಮುಖ ನಗರಗಳು ನಮ್ಮ ಹಿಡಿತಕ್ಕೆ ಬಂದು ತಾಲಿಬಾನ್ ಗೆಲುವು ಅನಿರೀಕ್ಷಿತ ಕ್ಷಿಪ್ರವಾಗಿತ್ತು. ಇದನ್ನು ವಿಶ್ವದಲ್ಲಿ ಯಾವುದಕ್ಕೂ ಹೋಲಿಕೆ ಮಾಡಲಾಗದು ಎಂದು ಉಗ್ರ ಗುಂಪಿನ ಉಪ ಮುಖಂಡ ಮುಲ್ಲಾ ಬರದಾರ್ ಹೇಳಿದ್ದಾನೆ.

ಭೀಕರ ದೃಶ್ಯ: ಪ್ರಾಣ ಉಳಿಸಿಕೊಳ್ಳಲು ವಿಮಾನದ ಟೈರ್ ಮೇಲೆ ಹತ್ತಿದ ಅಫ್ಗಾನ್ ನಾಗರಿಕರು, ಕೆಳಗೆ ಬಿದ್ದು ಸಾವು, ವಿಡಿಯೋ!
ಅಘ್ಘಾನಿಸ್ತಾನ ತಾಲಿಬಾನಿಗಳ ಕಪಿಮುಷ್ಠಿಗೆ ಸಿಲುಕಿದೆ. ಇನ್ನು ತಾಲಿಬಾನಿಗಳ ಅಟ್ಟಹಾಸಕ್ಕೆ ಹೆದರಿ ಅಲ್ಲಿನ ಸಿರಿವಂತರು ಸೇರಿದಂತೆ ನಾಗರಿಕರು ದೇಶವನ್ನು ತೊರೆಯಲು ಮುಂದಾಗಿದ್ದಾರೆ. ಹೀಗಾಗಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾವಿರಾರೂ ಸಂಖ್ಯೆಯಲ್ಲಿ ಜನರು ದಾಂಗುಡಿ ಇಟ್ಟಿದ್ದಾರೆ.

ಕಾಬೂಲ್: ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ; ವಾಣಿಜ್ಯ ವಿಮಾನಗಳು ರದ್ದು; ಝೆಕ್ ಪ್ರಜೆಗಳ ಸ್ಥಳಾಂತರ ಪ್ರಾರಂಭ
ಆಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ, ಹಲವಾರು ಮಂದಿ ದೇಶ ತೊರೆಯಲು ಪ್ರಾರಂಭಿಸುತ್ತಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಸಾಗರ ಹರಿದುಬರುತ್ತಿದೆ.

