ಕಾಬೂಲ್: ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ; ವಾಣಿಜ್ಯ ವಿಮಾನಗಳು ರದ್ದು; ಝೆಕ್ ಪ್ರಜೆಗಳ ಸ್ಥಳಾಂತರ ಪ್ರಾರಂಭ
ಆಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ, ಹಲವಾರು ಮಂದಿ ದೇಶ ತೊರೆಯಲು ಪ್ರಾರಂಭಿಸುತ್ತಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಸಾಗರ ಹರಿದುಬರುತ್ತಿದೆ.

ಕಾಬೂಲ್: ಆಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ, ಹಲವಾರು ಮಂದಿ ದೇಶ ತೊರೆಯಲು ಪ್ರಾರಂಭಿಸುತ್ತಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಸಾಗರ ಹರಿದುಬರುತ್ತಿದೆ.
ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಉಂಟಾಗಿರುವ ಹಿನ್ನೆಲೆಯಲ್ಲಿ ಕಾಬೂಲ್ ನಿಂದ ಹೊರಹೋಗುವ ವಾಣಿಜ್ಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
"ಲೂಟಿ, ಅವಾಂತರಗಳನ್ನು ತಡೆಯುವುದಕ್ಕಾಗಿ ಹಮೀದ್ ಕರ್ಜಾಯ್ ವಿಮಾನ ನಿಲ್ದಾಣದಿಂದ ಯಾವುದೇ ವಾಣಿಜ್ಯ ವಿಮಾನಗಳು ಕಾರ್ಯನಿರ್ವಹಣೆ ಮಾಡುವುದಿಲ್ಲ. ದಯವಿಟ್ಟು ವಿಮಾನ ನಿಲ್ದಾಣಕ್ಕೆ ಧಾವಿಸಬೇಡಿ" ಎಂದು ಕಾಬೂಲ್ ವಿಮಾನ ನಿಲ್ದಾಣ ಪ್ರಾಧಿಕಾರ ಸಂದೇಶ ಕಳಿಸಿದೆ. ಈ ನಡುವೆ ಝೆಕ್ ಗಣರಾಜ್ಯ ಸ್ಥಳಾಂತರಿಸುವಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕಾಬೂಲ್ ಅಂತಾರಾಷ್ಟ್ರೀಯ ವಿಮಾನದಿಂದ ಟೇಕ್ ಆಫ್ ಆಗಿ ಪ್ರೇಗ್ ಗೆ ಬಂದಿಳಿದಿದೆ.
ಸೋಮವಾರದ ವಿಮಾನದಲ್ಲಿ 46 ಮಂದಿ ಇದ್ದರು ಎಂದು ಪ್ರಧಾನಿ ಆಂಡ್ರೆಜ್ ಬಾಬಿಸ್ ಮಾಹಿತಿ ನೀಡಿದ್ದಾರೆ. ಝೆಕ್ ಪ್ರಜೆಗಳು, ಝೆಕ್ ರಾಯಭಾರಿ ಕಚೇರಿಗಳು ಆಫ್ಘನ್ ಸಿಬ್ಬಂದಿಗಳು ಹಾಗೂ ನ್ಯಾಟೋ ಮಿಷನ್ ಗಳಲ್ಲಿ ಝೆಕ್ ಸಶಸ್ತ್ರ ಪಡೆಗಳಿಗೆ ಸಹಾಯ ಮಾಡಿದ್ದ ಆಪ್ಘನ್ ವ್ಯಾಖ್ಯಾನಕಾರರು ಅವರ ಕುಟುಂಬ ಸದಸ್ಯರೊಂದಿಗೆ ಇದ್ದರು.
ಪ್ರಧಾನಿ ಆಂಡ್ರೆಜ್ ಬಾಬಿಸ್ ಹೆಚ್ಚಿನ ಮಾಹಿತಿ ನೀಡಿಲ್ಲ, ಆಫ್ಘಾನಿಸ್ತಾನದಿಂದ ಎಷ್ಟು ವಿಮಾನಗಳು ಝೆಕ್ ಗೆ ತೆರಳಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲ. ಝೆಕ್ ಆಂತರಿಕ ಸಚಿವ ಜಾನ್ ಹಮಾಸೆಕ್ ಟ್ವೀಟ್ ಮಾಡಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಇದ್ದು ಝೆಕ್ ವಿಮಾನಗಳು ಟೇಕ್ ಆಫ್ ಆಗಿದ್ದೆ ಒಂದು ಪವಾಡ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


