Kabul

ಕಾಬೂಲ್ ನ ಚೀನಾದ ಅತಿಥಿ ಗೃಹದ ಬಳಿ ಭಾರೀ ಸ್ಫೋಟ, ಗುಂಡಿನ ದಾಳಿ!
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಚೀನಾದ ಅತಿಥಿಗೃಹದ ಬಳಿ ದೊಡ್ಡ ಸ್ಫೋಟ ಮತ್ತು ಗುಂಡಿನ ದಾಳಿ ನಡೆದಿದ್ದು ಆಫ್ಘಾನ್ ಪಡೆ ಕಟ್ಟಡವನ್ನು ಸುತ್ತುವರೆದಿದೆ.

ಅಫ್ಘಾನಿಸ್ತಾನದಲ್ಲಿ ಲಿಂಗಾಧಾರಿತ ಹಿಂಸಾಚಾರ ಕೊನೆಗೊಳಿಸಿ: ತಾಲಿಬಾನ್ ಗೆ ವಿಶ್ವಸಂಸ್ಥೆ
ಅಫ್ಘಾನಿಸ್ತಾನದಲ್ಲಿ ಲಿಂಗಾಧಾರಿತ ಹಿಂಸಾಚಾರ ಕೊನೆಗೊಳಿಸಿ ಎಂದು ತಾಲಿಬಾನ್ ಸರ್ಕಾರಕ್ಕೆ ವಿಶ್ವಸಂಸ್ಥೆ ಕರೆ ನೀಡಿದೆ.

ಆಫ್ಘನ್ ಆತ್ಮಾಹುತಿ ಬಾಂಬ್ ದಾಳಿ ಖಂಡಿಸಿ ಮಹಿಳೆಯರ ಪ್ರತಿಭಟನೆ, ಹೆಚ್ಚಿನ ಭದ್ರತೆಗೆ ಒತ್ತಾಯ
ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್‌ನ ಶಿಯಾ ಶಿಕ್ಷಣ ಕೇಂದ್ರದಲ್ಲಿ ಹತ್ತಾರು ವಿದ್ಯಾರ್ಥಿಗಳು ಮೃತಪಟ್ಟ ಮತ್ತು ಗಾಯಗೊಳ್ಳಲು ಕಾರಣವಾದ ಆತ್ಮಾಹುತಿ ಬಾಂಬ್ ದಾಳಿಯನ್ನು ವಿರೋಧಿಸಿ ಅಫ್ಘಾನಿಸ್ತಾನದ ಮಹಿಳೆಯರ ಗುಂಪು ಶನಿವಾರ ಪ್ರತಿಭಟಿಸಿತು.

ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್‌ನಲ್ಲಿನ ಶಿಕ್ಷಣ ಕೇಂದ್ರದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ, 19 ಮಂದಿ ಸಾವು
ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್‌ನ ಶೈಕ್ಷಣಿಕ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ನಡೆದ ಆತ್ಮಹತ್ಯಾ ದಾಳಿಯಲ್ಲಿ 19 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ; ಧರ್ಮಗುರು ಸೇರಿ ಕನಿಷ್ಠ 21 ಸಾವು
ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಬುಧವಾರ ಸಂಜೆ ಪ್ರಾರ್ಥನೆಯ ವೇಳೆ ನಡೆದ ಬಾಂಬ್ ದಾಳಿಯಲ್ಲಿ ಪ್ರಮುಖ ಧರ್ಮಗುರು ಸೇರಿದಂತೆ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕಾಬುಲ್ ಆತ್ಮಾಹುತಿ ದಾಳಿಯಲ್ಲಿ ತಾಲಿಬಾನ್ ನ ಪ್ರಮುಖ ಮೌಲ್ವಿ ರಹೀಮುಲ್ಲಾ ಹಕ್ಕಾನಿ ಹತ್ಯೆ: ಐಎಸ್
ಇಸ್ಲಾಮಿಕ್ ಸ್ಟೇಟ್ ವಿರುದ್ಧ ಕಟು ಶಬ್ದಗಳಲ್ಲಿ ಟೀಕೆ ಮಾಡುತ್ತಿದ್ದ ತಾಲೀಬಾನ್ ನ ಹಿರಿಯ ಮೌಲ್ವಿಯನ್ನು ಅಫ್ಘಾನಿಸ್ತಾನದ ತಮ್ಮ ಮದರಸಾದಲ್ಲಿ ಆತ್ಮಾಹುತಿ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಐಎಸ್ ಉಗ್ರ ಸಂಘಟನೆ ಹೇಳಿದೆ.

ಕಾಬುಲ್‌ನಲ್ಲಿ ಬಾಂಬ್ ಸ್ಫೋಟ: 8 ಜನರು ಸಾವು, 20ಕ್ಕೂ ಅಧಿಕ ಜನರಿಗೆ ಗಾಯ
ಅಫ್ಗಾನಿಸ್ತಾನದ ರಾಜಧಾನಿ ಕಾಬುಲ್‌ನಲ್ಲಿ ಜನನಿಬಿಡ ಶಾಪಿಂಗ್ ಸ್ಟ್ರೀಟ್‌ನಲ್ಲಿ ಶನಿವಾರ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದು, 22 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಲ್ ಖೈದಾ ಮುಖ್ಯಸ್ಥ ಜವಾಹಿರಿ ಹೆಲ್‌ಫೈರ್ ಆರ್9ಎಕ್ಸ್ ಕ್ಷಿಪಣಿ ದಾಳಿಗೆ ಬಲಿಯಾದದ್ದು ಹೇಗೆ?
ಹೆಲ್ ಫೈರ್ ಆರ್9ಎಕ್ಸ್, ಅಥವಾ ಮಿಲಿಟರಿ ಪರಿಭಾಷೆಯಲ್ಲಿ ಎಜಿಎಂ-114 ಆರ್9ಎಕ್ಸ್ ಎಂದು ಪರಿಚಿತವಾಗಿರುವ ಆಯುಧ ಅಮೆರಿಕಾ ನಿರ್ಮಿತ ಕ್ಷಿಪಣಿಯಾಗಿದ್ದು, ವ್ಯಕ್ತಿಯ ಮೇಲೆ ನಿಖರ ದಾಳಿ ನಡೆಸುವ ಸಂದರ್ಭದಲ್ಲಿ ಸುತ್ತಮುತ್ತ ಯಾರಿಗೂ ಹಾನಿಯಾಗದಂತೆ ದಾಳಿ ನಡೆಸಬಲ್ಲದು.

ಕಾಬೂಲ್ ನಲ್ಲಿ ಗುರುದ್ವಾರದ ಮೇಲೆ ದಾಳಿ: ಇಬ್ಬರು ಭಕ್ತಾದಿಗಳ ಸಾವು
ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಗುರುದ್ವಾರದ ಮೇಲೆ ದಾಳಿ ನಡೆದಿದ್ದು, ಸ್ಫೋಟ, ಗುಂಡಿನ ದಾಳಿಯಲ್ಲಿ ಇಬ್ಬರು ಭಕ್ತಾದಿಗಳು ಸಾವನ್ನಪ್ಪಿದ್ದರೆ, 7 ಮಂದಿಗೆ ಗಾಯಗಳಾಗಿವೆ ಎಂದು ತಾಲೀಬಾನ್ ಅಧಿಕಾರಿಗಳು ಹೇಳಿದ್ದಾರೆ.

