ISRO

ಚಂದ್ರಯಾನ-3 ಲ್ಯಾಂಡಿಂಗ್ ಪಾಯಿಂಟ್ ಗೆ 'ಶಿವಶಕ್ತಿ' ಹೆಸರು ಘೋಷಣೆ: ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ ಕಿಡಿ
ಚಂದ್ರಯಾನ-3 ಯಶಸ್ಸಿನ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಕಚೇರಿಗೆ ಭೇಟಿ ನೀಡಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದರು. ಈ ವೇಳೆ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಕೆಲವು ಮಹತ್ವದ ಘೋಷಣೆಗಳನ್ನೂ ಮಾಡಿದ್ದಾರೆ.

ಚಂದ್ರಯಾನ-3: ನವಜಾತ ಶಿಶುಗಳಿಗೆ ವಿಕ್ರಮ, ಪ್ರಗ್ಯಾನ್ ಎಂದ ಹೆಸರಿಟ್ಟ ಯಾದಗಿರಿ ದಂಪತಿ
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಡೀ ದೇಶ ಅದರ ಖುಷಿಯಲ್ಲಿದ್ದು, ಇದೇ ಖುಷಿಯಲ್ಲಿ ಇಲ್ಲೊಂದು ದಂಪತಿಗಳು ತಮ್ಮ ಮಕ್ಕಳಿಗೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಗಳ ಹೆಸರನ್ನೇ ಇಟ್ಟಿದ್ದಾರೆ.

ಚಂದ್ರನ ಅಂಗಳದಲ್ಲಿ ಇಸ್ರೋ ನೌಕೆ: ಇಸ್ರೋ ವಿಜ್ಞಾನಿಗಳ ಪರಿಶ್ರಮ-ಸಾಧನೆ ಕಂಡು ಪ್ರಧಾನಿ ಮೋದಿ ಭಾವುಕ
ಚಂದ್ರನ ಅಂಗಳದ ಮೇಲೆ ಇಸ್ರೋ ನೌಕೆ ಇಳಿಯುವ ಮೂಲಕ ದೇಶನ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ಇಂದು ಬೆಂಗಳೂರಿನ ಇಸ್ರೋ ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿ ಇಸ್ರೋ ವಿಜ್ಞಾನಿಗಳ ಪರಿಶ್ರಮ-ಸಾಧನೆ ಕಂಡು ಭಾವುಕರಾಗಿದ್ದಾರೆ.

ಬೆಂಗಳೂರಿನ ಇಸ್ರೊ ಕೇಂದ್ರಕ್ಕೆ ಪ್ರಧಾನಿ ಮೋದಿ ಭೇಟಿ; ಚಂದ್ರಯಾನ-3 ಯಶಸ್ಸಿಗೆ ಅಭಿನಂದನೆ- Photos
ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಚಂದ್ರನ ಮೇಲೆ ಮೊದಲ ಬಾರಿಗೆ ಇಳಿದ ರೋವರ್ ಚಿತ್ರವನ್ನು ಉಡುಗೋರೆಯಾಗಿ ನೀಡಿದರು.

ಚಂದ್ರಯಾನ-3 ಯಶಸ್ಸು ಕೇವಲ ಭಾರತೀಯರು ಮಾತ್ರವಲ್ಲದೆ ಜಗತ್ತಿನಾದ್ಯಂತ ವಿಜ್ಞಾನ ನಂಬುವ ಜನರಲ್ಲಿ ಉತ್ಸಾಹ- ಪ್ರಧಾನಿ ಮೋದಿ
ಚಂದ್ರಯಾನ-3 ಯಶಸ್ಸು ಕೇವಲ ಭಾರತೀಯರು ಮಾತ್ರವಲ್ಲದೆ ಜಗತ್ತಿನಾದ್ಯಂತ ವಿಜ್ಞಾನವನ್ನು ನಂಬುವ ಜನರಲ್ಲಿ ಉತ್ಸಾಹ ತುಂಬಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಸ್ರೋ ಅಧ್ಯಕ್ಷರು, ಚಂದ್ರಯಾನ-3 ಮಿಷನ್ ತಂಡವನ್ನು ಸನ್ಮಾನಿಸಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಶುಕ್ರವಾರ ಚಂದ್ರಯಾನ-3 ಮಿಷನ್ ಯಶಸ್ಸು ಕಂಡಿದ್ದಕ್ಕೆ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಮತ್ತು ಅವರ ತಂಡವನ್ನು ಅಭಿನಂದಿಸಿದರು. ಗೆಹ್ಲೋಟ್ ಅವರು ಇಸ್ರೋ ಕೇಂದ್ರ ಕಚೇರಿಗೆ ತೆರಳಿ ಭಾರತಕ್ಕೆ ಹೆಮ್ಮೆ ತಂದ ಚಂದ್ರಯಾನ-3 ತಂಡವನ್ನು ಅಭಿನಂದಿಸಿದರು.

'ಎಲ್ಲಾ ಚಟುವಟಿಕೆಗಳು ನಿಗದಿತವಾಗಿ ಸಾಗುತ್ತಿದ್ದು ಸಹಜ ಸ್ಥಿತಿಯಲ್ಲಿವೆ': ಇಸ್ರೊ ಮಾಹಿತಿ
ಚಂದ್ರಯಾನ-3 ಮಿಷನ್ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳು ನಿಗದಿತ ಹಂತದಲ್ಲಿದ್ದು, ಸಹಜವಾಗಿ ಸಾಗುತ್ತಿದೆ. ಎಲ್ಲಾ ವ್ಯವಸ್ಥೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತಿಳಿಸಿದೆ.

ಚಂದ್ರನ ಮೇಲೆ ಲ್ಯಾಂಡರ್ನಿಂದ ರೋವರ್ ಪ್ರಗ್ಯಾನ್ ಹೊರಡುವ ವಿಡಿಯೊ ಬಿಡುಗಡೆ ಮಾಡಿದ ಇಸ್ರೊ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ, ಭಾರತದ ರೋಬೋಟ್ಗಳಾದ ವಿಕ್ರಮ್ ಮತ್ತು ಪ್ರಗ್ಯಾನ್ ಚಂದ್ರನ ಮೇಲ್ಮೈಯಿಂದ ತೆಗೆದ ಮೊದಲ ಸೆಲ್ಫಿಗಳನ್ನು ಹಂಚಿಕೊಳ್ಳುವುದರೊಂದಿಗೆ ಶತಕೋಟಿ ಭಾರತೀಯರು ಉಸಿರು ಬಿಗಿಹಿಡಿದು ಕಾಯುತ್ತಿದ್ದ ಕ್ಷಣವು ಕೊನೆಗೂ ಬಂದಿದೆ.

ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ, ಇಸ್ರೊ ಕಚೇರಿಗೆ ಭೇಟಿ: ಈ ಮಾರ್ಗಗಳಲ್ಲಿ ಸಂಚಾರ ಬದಲಾವಣೆ
ಚಂದ್ರಯಾನ-3ರ ಯಶಸ್ಸಿನ ಅಲೆಯಲ್ಲಿ ಇಸ್ರೊ ಬಾಹ್ಯಾಕಾಶ ಸಂಸ್ಥೆ ಮತ್ತು ಇಡೀ ಭಾರತೀಯರು ತೇಲುತ್ತಿದ್ದಾರೆ. ಮೊನ್ನೆ ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಇಳಿಕೆಯಾದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾದಲ್ಲಿದ್ದರು.

