Indians

ಇಟಲಿಯಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಧಾವಿಸಿದ ಸರ್ಕಾರ: ಶೀಘ್ರದಲ್ಲೇ ವೈದ್ಯರ ತಂಡ ರವಾನೆ
ತವರಿಗೆ ಮರಳಲಾಗದೆ ಇಟಲಿಯಲ್ಲಿ ಸಂಕಷ್ಟ ಎದುರಿಸುತ್ತಿರುವ ಭಾರತೀಯರ ರಕ್ಷಣೆಗೆ ಧಾವಿಸಿರುವ ಕೇಂದ್ರ ಸರ್ಕಾರ, ಇದೀಗ ವೈದ್ಯರ ತಂಡವೊಂದನ್ನು ಭಾರತೀಯರಿರುವ ಸ್ಥಳಕ್ಕೆ ರವಾನಿಸಲು ಮುಂದಾಗಿದೆ.

ಇಟಲಿ: ತವರಿಗೆ ಮರಳಲಾಗದೆ ಭಾರತೀಯರ ಸಂಕಷ್ಟ, ನಮ್ಮನ್ನು ಸ್ಮಗ್ಲರ್ ರೀತಿ ನೋಡಲಾಗುತ್ತಿದೆ ಎನ್ನುತ್ತಿರುವ ಸಂತ್ರಸ್ತರು
ಕೊರೋನಾ ವೈರಸ್ ಪೀಡಿತ ಇಟಲಿಯಿಂದ ಸ್ವದೇಶಕ್ಕೆ ಮರಳಲು ಸಾಧ್ಯವಾಗದೇ ಸುಮಾರು 2000 ಭಾರತೀಯರು ಇಟಲಿಯಲ್ಲಿ ಪರದಾಡುತ್ತಿದ್ದಾರೆ.

ಕೊರೊನಾ ವೈರಸ್ ಭೀತಿ: ಇರಾನ್ ನಿಂದ 58 ಭಾರತೀಯರನ್ನು ಕರೆತಂದ ವಾಯುಪಡೆ ವಿಮಾನ
ಕೊರೊನಾ ಪೀಡಿತ ಇರಾನ್ ನಿಂದ 58 ಮಂದಿ ಭಾರತೀಯರನ್ನು ಭಾರತೀಯ ವಾಯುಪಡೆ ಮಿಲಿಟರಿ ಸಾಮಗ್ರಿಗಳ ಸಾಗಾಟ ವಿಮಾನದಲ್ಲಿ ಹೊತ್ತುತಂದಿದೆ.

ಈಜಿಪ್ಟ್ ಹಡಗಿನಲ್ಲಿ 33 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆ: ಸಂಕಷ್ಟಕ್ಕೆ ಸಿಲುಕಿರುವ 18 ಭಾರತೀಯರು
ವಿಶ್ವದಾದ್ಯಂತ ಈಗಾಗಲೇ ತೀವ್ರ ಆತಂಕ ಮೂಡಿಸಿರುವ ಮಾರಕ ಕೊರೋನಾ ವೈರಸ್ ವ್ಯಾಧಿ ತನ್ನ ಕಬಂಧ ಬಾಹುವನ್ನು ಮತ್ತಷ್ಟು ವಿಸ್ತರಿಸಿದೆ. ಈ ಮಹಾಮಾರಿ ಇದೀಗ ಈಜಿಪ್ಟ್'ಗೂ ತಟ್ಟಿದ್ದು, ಹಡಗೊಂಡರಲ್ಲಿ 33 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಕೊರೊನಾ ವೈರಸ್ ಗೆ ಭಾರತೀಯರು ಭಯಪಡುವ ಅಗತ್ಯವಿಲ್ಲ: ವಿಶ್ವ ಆರೋಗ್ಯ ಸಂಸ್ಥೆ
ಕೊರೊನಾ ವೈರಸ್ ನಿಂದ ಭಾರತೀಯರು ಭಯಪಡುವ ಅಗತ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಧೈರ್ಯ ತುಂಬಿದೆ.

ಕೋರೋನಾ ಭೀತಿ: ಜಪಾನ್ ಹಡಗಿನಲ್ಲಿದ್ದ ಕಾರವಾರದ ಯುವಕ ಸೇರಿ 119 ಭಾರತೀಯರು ತವರಿಗೆ ಆಗಮನ
ಕೋರೋವಾ ವೈರಸ್ ಸೋಂಕಿನ ಆತಂಕದಿಂದಾಗಿ ಜಪಾನಿನ ಯುಕೋಮಾದಲ್ಲಿ ತಡೆಹಿಡಿಯಲ್ಪಟ್ಟಿರುವ ಹಡಗಿನಲ್ಲಿದ್ದ ಕಾರವಾರದ ಯುವಕ ಅಭಿಷೇಕ್ ಸೇರಿ 119 ಭಾರತೀಯರನ್ನು ಜಪಾನ್ ಸರ್ಕಾರ ಬಿಡುಗಡೆ ಮಾಡಿದ್ದು, ಗುರುವಾರ ತವರಿಗೆ ಬಂದಿಳಿದಿದ್ದಾರೆ.

ಕೋರೋನಾವೈರಸ್: ಜಪಾನ್ ಹಡಗಿನಲ್ಲಿ 4 ಭಾರತೀಯರಲ್ಲಿ ಸೋಂಕು ಪತ್ತೆ, ಸೋಂಕಿತ ಭಾರತೀಯರ ಸಂಖ್ಯೆ 12ಕ್ಕೆ ಏರಿಕೆ
ಕಾರವಾರ ಮೂಲಕ ಅಭಿಷೇಕ್ ಸೇರಿದಂತೆ ಒಟ್ಟು 138 ಭಾರತೀಯರು ಇರುವ ಡೈಮಂಡ್ ಪ್ರಿನ್ಸೆಸ್ ರಡಗಿನಲ್ಲಿ ಮತ್ತೆ ನಾಲ್ವರು ಭಾರತೀಯ ಸಿಬ್ಬಂದಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದಾಗಿ ವರದಿಗಳು ತಿಳಿಸಿವೆ. ಈ ಮೂಲಕ ಹಡಗಿನಲ್ಲಿ ಒಟ್ಟು 12 ಮಂದಿ ಭಾರತೀಯರಲ್ಲಿ ವೈರಸ್ ಹಬ್ಬಿದಂತಾಗಿದೆ.

ಭಾರತೀಯರ ಸ್ಥಳಾಂತರ: ವಿಮಾನಕ್ಕೆ ಅನುಮೋದನೆ ನೀಡಲು ಚೀನಾ ವಿಳಂಬ!
ಕೊರೊನಾ ವೈರಸ್ ನಿಂದ ತತ್ತರಿಸಿ ಹೋಗಿರುವ ಚೀನಾದ ವುಹಾನ್ ಪ್ರಾಂತ್ಯಕ್ಕೆ ವೈದ್ಯಕೀಯ ನೆರವು ಮತ್ತು ಅಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ ವಿಶೇಷ ಭಾರತೀಯ ವಿಮಾನಕ್ಕೆ ಅನುಮೋದನೆ ನೀಡಲು ಚೀನಾ ಸರ್ಕಾರ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕೊರೋನಾವೈರಸ್ ಪೀಡಿತ ವುಹಾನ್'ನಿಂದ ಮತ್ತಷ್ಟು ಭಾರತೀಯರ ಸ್ಥಳಾಂತರ: ವಿದೇಶಾಂಗ ವ್ಯವಹಾರಗಳ ಸಚಿವಾಲಯ
ಕೊರೋನಾವೈರಸ್ ಪೀಡಿತ ವುಹಾನ್ ನಿಂದ ಮತ್ತಷ್ಟು ಭಾರತೀಯರನ್ನು ಸ್ಥಳಾಂತರ ಮಾಡಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ.

