ಇಟಲಿ: ತವರಿಗೆ ಮರಳಲಾಗದೆ ಭಾರತೀಯರ ಸಂಕಷ್ಟ, ನಮ್ಮನ್ನು ಸ್ಮಗ್ಲರ್ ರೀತಿ ನೋಡಲಾಗುತ್ತಿದೆ ಎನ್ನುತ್ತಿರುವ ಸಂತ್ರಸ್ತರು
ಕೊರೋನಾ ವೈರಸ್ ಪೀಡಿತ ಇಟಲಿಯಿಂದ ಸ್ವದೇಶಕ್ಕೆ ಮರಳಲು ಸಾಧ್ಯವಾಗದೇ ಸುಮಾರು 2000 ಭಾರತೀಯರು ಇಟಲಿಯಲ್ಲಿ ಪರದಾಡುತ್ತಿದ್ದಾರೆ.

ಮಿಲಾನ್: ಕೊರೋನಾ ವೈರಸ್ ಪೀಡಿತ ಇಟಲಿಯಿಂದ ಸ್ವದೇಶಕ್ಕೆ ಮರಳಲು ಸಾಧ್ಯವಾಗದೇ ಸುಮಾರು 2000 ಭಾರತೀಯರು ಇಟಲಿಯಲ್ಲಿ ಪರದಾಡುತ್ತಿದ್ದಾರೆ.
ಇವರಲ್ಲಿ ಬಹುತೇಕರು ವಿದ್ಯಾರ್ಥಿಗಲೇ ಆಗಿದ್ದು, ಕನ್ನಡಿಗರೂ ಕೂಡ ಇದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಕೊರೋನಾ ಪೀಡಿತ ಇರಾನ್ ಹಾಗೂ ಇಟಲಿಯಿಂದ ಭಾರತಕ್ಕೆ ಮರಳಬೇಕು ಎಂದರೆ, ಕೊರೋನಾಪೀಡಿತರಲ್ಲ ಎಂಬ ನೆಗೆಟಿವ್ ಸರ್ಟಿಫಿಕೇಟನ್ನು ಇಟಲಿ ಹಾಗೂ ಇರಾನ್ನಲ್ಲಿ ತಪಾಸಣೆ ಮಾಡಿಸಿಕೊಂಡು ತರಬೇಕು. ಆಗ ಮಾತ್ರ ಅವರಿಗೆ ಭಾರತದ ವಿಮಾನ ಹತ್ತಲು ಅವಕಾಶ ನೀಡಲಾಗುತ್ತದೆ ಎಂದು ಭಾರತ ಸರ್ಕಾರ ಆದೇಶ ಹೊರಿಸಿತ್ತು. ಆದರೆ, ಿಟಲಿಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗಿರುವ ಕಾರಣ, ಆಸ್ಪತ್ರೆಗಳು ಗಿಜಿಗಿಟ್ಟುತ್ತಿವೆ.
ಯಾರಾದರೂ ಅನಾರೋಗ್ಯ ಪೀಡಿತರಾದರೆ ಮಾತ್ರ ಅವರನ್ನು ತಪಾಸಣೆ ಮಾಡಿ ಸರ್ಟಿಫಿಕೇಟ್ ನೀಡಲಾಗುತ್ತದೆ. ಸ್ವಸ್ಥರಾಗಿದ್ದರೆ ಅವರನ್ನು ತಪಾಸಣೆ ಮಾಡುತ್ತಿಲ್ಲ. ಹಾಗೂ ಸರ್ಟಿಫಿಕೇಟನ್ನೂ ನೀಡುತ್ತಿಲ್ಲ. ಹೀಗಾಗಿ ಭಾರತೀಯ ವಿದ್ಯಾರ್ಥಿಗಳು ವಿಮಾನ ನಿಲ್ದಾಣದಲ್ಲಿಯೇ ಸಿಲುಕಿದ್ದಾರೆ. ಈ ನಡುವೆ ಸಂತ್ರಸ್ತೆಯೊಬ್ಬರು ಹೇಳಿಕೆ ನೀಡಿ, ವಿಮಾನ ನಿಲ್ದಾಣದಲ್ಲಿ ನಮ್ಮನ್ನು ಸ್ಮಗ್ಲರ್ ಥರ ನೋಡಲಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


