Indian Army

ಉಗ್ರರ ಬೆನ್ನಟ್ಟಿ ಮಯನ್ಮಾರ್ ಗೆ ನುಗ್ಗಿದ ಭಾರತೀಯ ಸೇನೆ: ವರದಿ ತಳ್ಳಿ ಹಾಕಿದ ಮಯನ್ಮಾರ್
ಭಾರತದ ಗಡಿ ಪ್ರವೇಶಿಸಿದ್ದ ಉಗ್ರರನ್ನು ಬೆನ್ನಟ್ಟಿದ್ದ ಭಾರತೀಯ ಸೇನೆ ಮಯನ್ಮಾರ್ ಅಂತಾರಾಷ್ಟ್ರೀಯ ಗಡಿ ಪ್ರದೇಶಕ್ಕೆ ನುಗ್ಗಿರುವ ವರದಿಗಳನ್ನು ಮಯನ್ಮಾರ್ ಸೇನೆ ನಿರಾಕರಿಸಿದೆ.

ಉಗ್ರರ ಬೆನ್ನಟ್ಟಿ ಮತ್ತೆ ಮಯನ್ಮಾರ್ ಗೆ ನುಗ್ಗಿದ ಭಾರತೀಯ ಸೇನೆ!
ಭಾರತದ ಗಡಿ ಪ್ರವೇಶಿಸಿದ ಉಗ್ರರ ಬೆನ್ನಟ್ಟಿದ ಭಾರತೀಯ ಸೇನೆಯ ಯೋಧರು ಮಯನ್ಮಾರ್ ಗಡಿ ಪ್ರವೇಶಕ್ಕೆ ನುಗ್ಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದ್ದು, ನಾಗಾಲ್ಯಾಂಡ್‍ನ ಚೆನ್‍ಪೊಹೊ ಸಮೀಪದ ಅ೦ತಾರಾಷ್ಟ್ರೀಯ ಗಡಿಯಲ್ಲಿ ಈ ಘಟನೆ ಸಂಭವಿಸಿದೆ.

ಕುಪ್ವಾರದಲ್ಲಿ ಮತ್ತೆ ಉಗ್ರರ ದಾಳಿ: ಕಾರ್ಯಾಚರಣೆಗಿಳಿದ ಭಾರತೀಯ ಸೇನೆ
ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಮತ್ತೆ ಉಗ್ರರು ಹಾಗೂ ಯೋಧರ ನಡುವೆ ಗುಂಡಿನ ಕಾಳಗ ಆರಂಭವಾಗಿದ್ದು, ತಂಗ್ಧಾರ್ ನಲ್ಲಿ 4 ಉಗ್ರರು ಅಡಗಿ ಕುಳಿತು ದಾಳಿ...

ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: 2 ಯೋಧರು ಸೇರಿ ಮೂವರು ಭದ್ರತಾ ಸಿಬ್ಬಂದಿ ಹುತಾತ್ಮ
ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದ ಕೇವಲ 24 ಗಂಟೆಗಳ ಅವಧಿಯಲ್ಲಿ ಸೇನಾಪಡೆ ವಾಹನಗಳ ಮೇಲೆ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದು, ಇಬ್ಬರು ಸೇನಾಪಡೆ ಯೋಧರು ಹಾಗೂ ಓರ್ವ ಪೊಲೀಸ್ ಅಧಿಕಾರಿಯನ್ನು ಕೊಂದು ಹಾಕಿದ್ದಾರೆ.

ಕಾಶ್ಮೀರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 5 ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ
ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಗಲಭೆ ಪೀಡಿತ ಬದಗಾಮ್ ಜಿಲ್ಲೆಯಲ್ಲಿ ಪ್ರತಿಭಟನಾ ನಿರತರನ್ನು ನಿಯಂತ್ರಿಸುವ ಸಲುವಾಗಿ ಸೇನಾ ಸಿಬ್ಬಂದಿ ಸಿಡಿಸಿದ ಗುಂಡಿನ ದಾಳಿಗೆ 4 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಾಣದ ಹಂಗು ತೊರೆದು ಪಾಕ್ ಧ್ವಜ ಕಿತ್ತು, ತ್ರಿವರ್ಣ ದ್ವಜ ಹಾರಿಸಿದ ಯೋಧ!: ವಿಡಿಯೋ ವೈರಲ್
ಭಾರತೀಯ ಯೋಧನೋರ್ವ ಪ್ರಾಣದ ಹಂಗು ತೊರೆದು ಟವರ್ ಏರಿ ಪಾಕಿಸ್ತಾನ ಧ್ವಜವನ್ನು ತೆಗೆದು ಹಾಕಿ ಅಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾನೆ.

ಸ್ವತಂತ್ರ್ಯ ದಿನಾಚರಣೆ ಬೆನ್ನಲ್ಲೇ ಮತ್ತೆ ಬಾಲ ಬಿಚ್ಚಿದ ಪಾಕ್; ಪೂಂಛ್ ನಲ್ಲಿ ಗುಂಡಿನ ದಾಳಿ
ಪ್ರತೀ ಬಾರಿ ಸ್ವತಂತ್ರ್ಯ ದಿನಾಚರಣೆಗೂ ಮುನ್ನ ಪಾಕಿಸ್ತಾನಿ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಯೋಧರತ್ತ ಗುಂಡು ಹಾರಿಸುವ ತಮ್ಮ ಪರಿಪಾಠವನ್ನು ಈ ಬಾರಿಯೂ ಮುಂದುವರೆಸಿದ್ದು, ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.

ಸೈನಿಕರಿಗೆ ಕೊಳೆತ ಆಹಾರ; ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಜಿ
ದೇಶ ಕಾಯುವ ಸೈನಿಕರಿಗೆ ನೀಡುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಮಹಾಲೇಖಪಾಲರು (ಸಿಎಜಿ) ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ಸೇನಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಯಾಚಿನ್ ನಲ್ಲಿ ಪಾತಾಳಕ್ಕೆ ಕುಸಿದ ತಾಪಮಾನ; ಕ್ಯಾಂಪ್ ಸ್ಥಳಾಂತರಕ್ಕೆ ಸೈನಿಕರ ಚಿಂತನೆ
ವಿಶ್ವದ ಅತಿ ಎತ್ತರದ ಮತ್ತು ಅತ್ಯಂತ ಅಪಾಯಕಾರಿ ಸಮರ ಭೂಮಿ ಸಿಯಾಚಿನ್ ನಲ್ಲಿ ತಾಪಮಾನ ತೀವ್ರ ಕುಸಿದ ಪರಿಣಾಮ ಭಾರತೀಯ ಸೈನಿಕರು ಸುರಕ್ಷಿತ ಪ್ರದೇಶಗಳತ್ತ ಕ್ಯಾಂಪ್ ಬದಲಾವಣೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

