ಉಗ್ರರ ಬೆನ್ನಟ್ಟಿ ಮಯನ್ಮಾರ್ ಗೆ ನುಗ್ಗಿದ ಭಾರತೀಯ ಸೇನೆ: ವರದಿ ತಳ್ಳಿ ಹಾಕಿದ ಮಯನ್ಮಾರ್
ಭಾರತದ ಗಡಿ ಪ್ರವೇಶಿಸಿದ್ದ ಉಗ್ರರನ್ನು ಬೆನ್ನಟ್ಟಿದ್ದ ಭಾರತೀಯ ಸೇನೆ ಮಯನ್ಮಾರ್ ಅಂತಾರಾಷ್ಟ್ರೀಯ ಗಡಿ ಪ್ರದೇಶಕ್ಕೆ ನುಗ್ಗಿರುವ ವರದಿಗಳನ್ನು ಮಯನ್ಮಾರ್ ಸೇನೆ ನಿರಾಕರಿಸಿದೆ.

ನೇ ಪೇ ತಾವ್: ಭಾರತದ ಗಡಿ ಪ್ರವೇಶಿಸಿದ್ದ ಉಗ್ರರನ್ನು ಬೆನ್ನಟ್ಟಿದ್ದ ಭಾರತೀಯ ಸೇನೆ ಮಯನ್ಮಾರ್ ಅಂತಾರಾಷ್ಟ್ರೀಯ ಗಡಿ ಪ್ರದೇಶಕ್ಕೆ ನುಗ್ಗಿರುವ ವರದಿಗಳನ್ನು ಮಯನ್ಮಾರ್ ಸೇನೆ ನಿರಾಕರಿಸಿದೆ.
ನ್ಯಾಷನಲ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಖಪ್ಲಾ೦ಗ್ ಬಣ)ನ ಬ೦ಡುಕೋರರನ್ನು ಭಾರತೀಯ ಸೇನೆಯ ಯೋಧರು ಕಳೆದ ಶುಕ್ರವಾರ ಬೆಳಗಿನ ಜಾವ ಸುಮಾರು 3 ಗ೦ಟೆ ವೇಳೆಗೆ ಬೆನ್ನತ್ತಿ ಗು೦ಡಿನ ಚಕಮಕಿ ನಡೆಸಿದ್ದಾರೆ ಎಂಬ ವರದಿಗಳು ಪ್ರಕಟವಾಗಿತ್ತು. ಆದರೆ ಮಯನ್ಮಾರ್ ಸೇನೆ ಈ ವರದಿಗಳನ್ನು ತಳ್ಳಿಹಾಕಿದ್ದು, ನ್ಯಾಷನಲ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ ನೊಂದಿಗೆ ಭಾರತೀಯ ಸೇನೆ ನಡೆಸಿದ ಗುಂಡಿನ ಕಾಳಗ ಭಾರತದ ಗಡಿಯೊಳಗೆ ನಡೆದಿದೆ ಎಂದು ಸ್ಪಷ್ಟನೆ ನೀಡಿದೆ.
ವರದಿ ಪ್ರಕಟವಾಗುತ್ತಿದ್ದಂತೆಯೇ ಮಯನ್ಮಾರ್ ಪಡೆ ಎಚ್ಚೆತ್ತುಕೊಂಡಿದ್ದು ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ. ವಿದೇಶಿ ಸೇನೆ ತನ್ನ ನೆಲದಲ್ಲಿ ಕಾಲಿಡುವುದನ್ನು ಮಯನ್ಮಾರ್ ಒಪ್ಪಿಕೊಳ್ಳುವುದಿಲ್ಲ ಎಂದು ಮಯನ್ಮಾರ್ ತನ್ನ ಸ್ಪಷ್ಟನೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


